
ಕಲಬುರಗಿ: ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿಯ ಮಹದೇವ ನಗರದಲ್ಲಿ ನಡೆದಿದೆ.
ಆಳಂದ ಮೂಲದ ರಾಕೇಶ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ 4 ತಿಂಗಳ ಹಿಂದಷ್ಟೇ ರಾಕೇಶ್ ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗಿದ್ದ. ಮದುವೆ ಬಳಿಕ ಪತ್ನಿ, ಪ್ರತಿದಿನ ರಾಕೇಶ್ ಗೆ ಕಿರುಕುಳ ನೀಡುತ್ತಿದ್ದಳಂತೆ. ಪಾತ್ರೆ ತೊಳಿ, ಮನೆ ಕೆಲಸ ಮಾಡು ಇಲ್ಲದಿದ್ದರೆ ಪೊಲೀಸ್ ಕಂಪ್ಲೇಂಟ್ ಕೊಡುವುದಾಗಿ ಹೆದರಿಸಿದ್ದಳಂತೆ.
ಇದರಿಂದ ಮನನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ. ರಾಕೇಶ್ ಕುಟುಂಬದವರು, ಪತ್ನಿ ಹಾಗೂ ಪೋಷಕರ ವಿರುದ್ಧ ದೂರು ನೀಡಿದ್ದಾರೆ.