
ಪತ್ನಿ ಗರ್ಭಿಣಿ ಎಂಬ ವಿಷ್ಯ ಗೊತ್ತಾದ್ರೆ ಪತಿ ಖುಷಿಪಡುವುದು ಸಹಜ. ಆದ್ರೆ ಅಮೆರಿಕಾದ ವ್ಯಕ್ತಿಯೊಬ್ಬ ಪತ್ನಿ ಗರ್ಭಿಣಿ ಎಂಬ ವಿಷ್ಯ ತಿಳಿದು ದಂಗಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯವನ್ನು ಹಂಚಿಕೊಂಡಿದ್ದಾನೆ.
ಎರಡು ವರ್ಷಗಳ ಹಿಂದೆ ವ್ಯಕ್ತಿ, ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನಂತೆ. ಆದ್ರೆ ಕೆಲ ದಿನಗಳ ಹಿಂದೆ ಮಹಿಳೆ ತಾನು ಮೂರನೇ ಬಾರಿ ಗರ್ಭ ಧರಿಸಿದ್ದೇನೆಂಬ ಸುದ್ದಿಯನ್ನು ಪತಿಗೆ ಹೇಳಿದ್ದಾಳೆ. ಇದನ್ನು ಕೇಳಿದ ಪತಿ ದಂಗಾಗಿದ್ದಾನೆ. ನನ್ನ ಹೆಂಡತಿ ಮೇಲೆ ಈಗ ಅನುಮಾನ ಶುರುವಾಗಿದೆ ಎಂದು ಬರೆದಿದ್ದಾನೆ.
ನನಗೆ ಎರಡು ವರ್ಷದ ಹಿಂದೆ ಸಂತಾನ ಹರಣ ಶಸ್ತ್ರಚಿಕಿತ್ಸೆಯಾಗಿದೆ. ಪತ್ನಿ ಜೊತೆ ಇಷ್ಟು ವರ್ಷಗಳ ಕಾಲ ಜೀವನ ನಡೆಸಿದ್ದು, ಆಕೆ ನನಗೆ ಮೋಸ ಮಾಡುತ್ತಾಳೆಂಬುದನ್ನು ನಂಬಲು ಸಾಧ್ಯವಿಲ್ಲ. ಆಕೆ ಬೇರಯವರ ಜೊತೆ ಸಂಬಂಧ ಹೊಂದಿದ್ದಾಳೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಸಂತಾನ ಹರಣ ಶಸ್ತ್ರಚಿಕಿತ್ಸೆ ನಂತ್ರವೂ ತಂದೆಯಾಗಲು ಸಾಧ್ಯವೇ ಎಂದು ಆತ ಪ್ರಶ್ನೆ ಮಾಡಿದ್ದಾನೆ.
ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಉತ್ತರಗಳು ಬಂದಿವೆ. ವೈದ್ಯರೊಬ್ಬರು ಇದು ಸಾಧ್ಯವಿದೆ ಎಂದಿದ್ದಾರೆ. ನನ್ನ ರೋಗಿ ಜೀವನದಲ್ಲಿಯೂ ಇದು ನಡೆದಿದೆ. ಆತನ ವೀರ್ಯಾಣುಗಳ ಸಂಖ್ಯೆ ಕಡಿಮೆಯಿತ್ತು. ಆದ್ರೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಂತ್ರ ಆತನ ವೀರ್ಯಗಳ ಸಂಖ್ಯೆ ಹೆಚ್ಚಾಯಿತು ಎಂದು ಕಮೆಂಟ್ ಮಾಡಿದ್ದಾರೆ.