ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನ ಕೊಹೆಫಿಜಾದಲ್ಲಿ ಮನೆ ಗಲಾಟೆ ಬೀದಿಗೆ ಬಂದಿದೆ. ಪತಿಯ ಇನ್ನೊಂದು ಬಣ್ಣ ಗೊತ್ತಾಗ್ತಿದ್ದಂತೆ ಕೆಂಡಾಮಂಡಲವಾದ ಪತ್ನಿ, ಪತಿ ಹಾಗೂ ಪತಿ ಗರ್ಲ್ ಫ್ರೆಂಡ್ ಮೇಲೆ ಹಲ್ಲೆ ನಡೆಸಿದ್ದಾಳೆ.
ಘಟನೆ ಅಕ್ಟೋಬರ್ 15ರಂದು ನಡೆದಿದೆ. ಅದ್ರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ನಿಗೆ ಮೊದಲೇ ಪತಿ ಮೇಲೆ ಸಂಶಯವಿತ್ತಂತೆ. ಇನ್ನೊಂದು ಸಂಬಂಧವನ್ನು ಪತಿ ನಿರಾಕರಿಸಿದ್ದನಂತೆ. ಈ ಮಧ್ಯೆ ಪತಿಯನ್ನು ಪತ್ನಿ ಫಾಲೋ ಮಾಡಿದ್ದಾಳೆ. ಜಿಮ್ ನಲ್ಲಿ ಪತಿ ಹಾಗೂ ಆತನ ಪ್ರೇಮಿ ಸಿಕ್ಕಿಬಿದ್ದಿದ್ದಾರೆ.
BIG NEWS: ‘ಘಾತುಕತನವನು ಬಿಡದೆ ಗೀತೆಯನೋದಿದೊಡೇನು ಫಲ…..?; ದಾಸವಾಣಿ ಮೂಲಕ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಕೇಸರಿ ಪಾಳಯ
ಜಿಮ್ ಮುಂದೆ ಮಾತನಾಡ್ತಿದ್ದ ಇಬ್ಬರ ಮುಂದೆ ಬಂದ ಪತ್ನಿ, ಪತಿ ಪ್ರೇಮಿಗೆ ಚಪ್ಪಲಿ ಏಟು ನೀಡಿದ್ದಾಳೆ. ಅಷ್ಟೇ ಅಲ್ಲ ಆಕೆ ಜುಟ್ಟು ಹಿಡಿದು ಎಳೆದಾಡಿದ್ದಾಳೆ. ಪ್ರೇಮಿಯನ್ನು ರಕ್ಷಿಸಲು ಬಂದ ಪತಿಗೂ ಹೊಡೆತ ಬಿದ್ದಿದೆ. ಮಹಿಳೆಯನ್ನು ರಕ್ಷಿಸಿ ಜಿಮ್ ಒಳಗೆ ಕರೆದೊಯ್ದರು ಅಲ್ಲಿಗೆ ಬಂದ ಪತ್ನಿ, ಮತ್ತೆರಡು ಏಟು ಹಾಕಿದ್ದಾಳೆ. ಘಟನೆ ವಿಡಿಯೋ ಈಗ ವೈರಲ್ ಆಗಿದೆ.
ಪತ್ನಿ, ಈ ಮೊದಲೇ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ. ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಾಳೆ. ಈಗ ಪತ್ನಿ ವಿರುದ್ಧ ಪ್ರೇಮಿ, ಹಲ್ಲೆ ದೂರು ದಾಖಲಿಸಿದ್ದಾಳೆ.