ಬೇರೊಬ್ಬ ಮಹಿಳೆಯೊಂದಿಗೆ ತಿರುಗಾಡುತ್ತಿದ್ದ ತನ್ನ ಪತಿಯನ್ನು ರೆಡ್-ಹ್ಯಾಂಡ್ ಆಗಿ ಹಿಡಿದ ಮಹಿಳೆಯೊಬ್ಬರು ಇಬ್ಬರಿಗೂ ಗೂಸಾ ಕೊಡುತ್ತಿರುವ ಘಟನೆಯೊಂದು ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಜರುಗಿದೆ.
ಘಟನೆಯ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ಹೊಟೇಲ್ ಒಂದರ ಮುಂದೆ ಇರುವ ಪಾರ್ಕಿಂಗ್ ಜಾಗದಲ್ಲಿ ಗಂಡ-ಹೆಂಡತಿ ಮತ್ತು ’ಆಕೆ’ಯ ನಡುವಿನ ಈ ಕಿತ್ತಾಟದ ದೃಶ್ಯ ರೆಕಾರ್ಡ್ ಆಗಿದೆ.
ತನ್ನ ಪತಿಯ ಕಾರನ್ನು ತಲುಪುವ ಮಹಿಳೆ ಆತನೊಂದಿಗಿದ್ದ ಬೇರೊಬ್ಬ ಮಹಿಳೆಯನ್ನೂ ಕಾರಿನಿಂದ ಹೊರಗೆಳೆದು ಆಕೆಯ ಮೇಲೆ ಹಲ್ಲೆ ಮಾಡುತ್ತಾರೆ. ದುಪಟ್ಟಾದಲ್ಲಿ ಮುಚ್ಚಲ್ಪಟ್ಟ ’ಆಕೆ’ಯ ಮುಖವನ್ನು ತೆರೆಯಲು ನೋಡುವ ಮಹಿಳೆ, ’ಯಾರಿವಳು?’ ಎಂದು ಪತಿಯನ್ನು ಪ್ರಶ್ನಿಸುತ್ತಾರೆ.
ಪತಿಯ ಚಲನವಲನಗಳ ಮೇಲೆ ಸಂಶಯ ಹೆಚ್ಚಾಗಿದ್ದ ಕಾರಣ ಆತನನ್ನು ಹಿಂಬಾಲಿಸುತ್ತಿದ್ದ ಪತ್ನಿಗೆ ಈ ವಿಚಾರ ಕಣ್ಣೆದುರೇ ತೆರೆದುಕೊಂಡಾಗ ಆಕೆಯ ಸಿಟ್ಟು ಮಿತಿ ಮೀರಿದೆ.
ಪತ್ನಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದೇ ತನ್ನ ಗರ್ಲ್ಫ್ರೆಂಡ್ ಅನ್ನು ಕಾಪಾಡಿಕೊಳ್ಳುವುದರಲ್ಲಿ ಪತಿ ನಿರತನಾಗಿದ್ದಾನೆ.
https://www.youtube.com/watch?v=hbqfUdciWYE