ಮಿಸೌರಿಯ ಮಹಿಳೆಯೊಬ್ಬಳು ತನ್ನ ಗಂಡ ಬಳಸುತ್ತಿದ್ದ ಸಾಫ್ಟ್ ಡ್ರಿಂಕ್ ನಲ್ಲಿ ಉದ್ದೇಶಪೂರ್ವಕವಾಗಿ ಕಳೆನಾಶಕ ಬೆರೆಸಿದ್ದ ಪ್ರಕರಣ ಬೆಚ್ಚಿಬೀಳಿಸಿದೆ. ತನ್ನ 50 ನೇ ಹುಟ್ಟುಹಬ್ಬ ಸಂಭ್ರಮಾಚರಣೆಯಲ್ಲಿ ತಾನು ಕುಡಿದ ಸಾಫ್ಟ್ ಡ್ರಿಂಕ್ ನಿಂದ ಹೆಚ್ಚೇನು ಉತ್ಸುಕನಾಗದೇ ಇದ್ದುದರಿಂದ ಅನುಮಾನಗೊಂಡ ಪತಿ, ಹೆಂಡತಿ ನಡೆ ಮೇಲೆ ಕಣ್ಣಿಟ್ಟ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, 47 ವರ್ಷದ ಪತ್ನಿ ಮಿಚೆಲ್ ಪೀಟರ್ಸ್ ಹಲ್ಲೆ ಮತ್ತು ಸಶಸ್ತ್ರ ಕ್ರಿಮಿನಲ್ ಆಕ್ಷನ್ ಆರೋಪಗಳನ್ನು ಎದುರಿಸುತ್ತಿದ್ದಾರೆ .
ಮೇ ಮತ್ತು ಜೂನ್‌ನಲ್ಲಿ ಮಿಚೆಲ್ ಪೀಟರ್ಸ್ ತನ್ನ ಗಂಡನ ಸಾಫ್ಟ್ ಡ್ರಿಂಕ್ ಗೆ ಕಳೆನಾಶಕ ಬಳಸಿ ಅದನ್ನು ವಿಷಪೂರಿತಗೊಳಿಸಲು ಸಂಚು ರೂಪಿಸಿದ್ದಳೆಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಪೀಟರ್ಸ್ ಪತಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಂತೆ ಪಾನೀಯಗಳಲ್ಲಿ ಏನಾದರೂ ಸೇರಿರಬಹುದು ಎಂದು ಅನುಮಾನಿಸಲು ಪ್ರಾರಂಭಿಸಿದರು. ಆಗ ತನ್ನ ಮನೆಯೊಳಗಿನ ಸಿಸಿ ಕ್ಯಾಮೆರಾದಲ್ಲಿದ್ದ ವಿಡಿಯೋ ನೋಡಿದಾಗ ಪತ್ನಿ ಪೀಟರ್ಸ್ ಗ್ಯಾರೇಜ್‌ನಲ್ಲಿನ ರೆಫ್ರಿಜರೇಟರ್‌ನಿಂದ ಸಾಫ್ಟ್ ಡ್ರಿಂಕ್ ತೆಗೆದುಕೊಂಡು ಹೋಗುತ್ತಿದ್ದುದನ್ನು ಗಮನಿಸಿದ್ದಾರೆ. ಒಂದು ಕೈಯಲ್ಲಿ ಸಾಫ್ಟ್ ಡ್ರಿಂಕ್ ಇದ್ರೆ ಮತ್ತೊಂದು ಕೈಯಲ್ಲಿ ಕೀಟನಾಶಕವಿದ್ದುದ್ದನ್ನ ನೋಡಿದ್ದಾರೆ.
ತನ್ನ $500,000 ಜೀವ ವಿಮಾ ಪಾಲಿಸಿ ಹಣದ ಮೇಲೆ ಕಣ್ಣಿಟ್ಟಿರುವ ಪತ್ನಿ ಈ ರೀತಿ ಮಾಡಿದ್ದಾಳೆಂದು ಪತಿ ಆರೋಪಿಸಿದ್ದಾರೆ. ತನಿಖಾಧಿಕಾರಿಗಳು ಮಹಿಳೆಯನ್ನು ಪ್ರಶ್ನಿಸಿದ್ದು ಗಂಡನನ್ನು ಸಾಯಿಸಲು ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ತನ್ನ ಗಂಡನನ್ನು ಸ್ವಾರ್ಥಿ ಎಂದಿರುವ ಪತ್ನಿ ತಮ್ಮಿಬ್ಬರ ನಡುವಿನ ಸಂಬಂಧ ಉತ್ತಮವಾಗಿಲ್ಲದ ಕಾರಣ ಆತನಿಗೆ ಡಿವೋರ್ಸ್ ನೀಡಲು ಮುಂದಾಗಿದ್ದಾಗಿ ಮಹಿಳೆ ಹೇಳಿದ್ದಾಳೆ.