ಹಣದ ತೀವ್ರ ಅಗತ್ಯವಿದ್ದಾಗ ಜನರು ಸಾಲ ತೆಗೆದುಕೊಳ್ತಾರೆ. ಆಪ್ತರಿಂದ ಸಾಲ ತೆಗೆದುಕೊಳ್ಳುವುದಕ್ಕಿಂತ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಕ್ರೆಡಿಟ್ ಕಾರ್ಡ್ ಮೂಲಕ ನಿಮಗೆ ತಕ್ಷಣ ಸಾಲ ಸಿಗುತ್ತದೆ. ಆದ್ರೆ ಸರಿಯಾದ ಸಮಯದಲ್ಲಿ ಮರುಪಾವತಿ ಮಾಡದೆ ಹೋದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಅತ್ಯಗತ್ಯವಿದ್ದಲ್ಲಿ ಮಾತ್ರ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ತೆಗೆದುಕೊಳ್ಳುವುದು ಒಳ್ಳೆಯದು.
ಕ್ರೆಡಿಟ್ ಕಾರ್ಡ್ ನಿಂದ ಸಾಲ ಪಡೆದಿದ್ದರೆ ಆದಷ್ಟು ಬೇಗ ಸಾಲ ಮರುಪಾವತಿ ಮಾಡಬೇಕು. ಕ್ರೆಡಿಟ್ ಕಾರ್ಡ್ ಸಾಲದ ಮೇಲಿನ ಬಡ್ಡಿ ಬ್ಯಾಂಕ್ ಸಾಲದ ಬಡ್ಡಿಗಿಂತ ಹೆಚ್ಚಿರುತ್ತದೆ. ಹಾಗಾಗಿ ಸಾಲಕ್ಕಾಗಿ ಕ್ರೆಡಿಟ್ ಕಾರ್ಡ್ ಅವಲಂಭಿಸುವುದು ಒಳ್ಳೆ ಬೆಳವಣಿಗೆಯಲ್ಲ. ಯಾಕೆಂದ್ರೆ ನಿಮಗೆ ತಿಳಿಯದೆ ನಿಮ್ಮ ಜೇಬಿನಲ್ಲಿರುವ ಹಣ ಖಾಲಿಯಾಗುತ್ತದೆ.
ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡದೆ ಹೋದಲ್ಲಿ ಸಮಸ್ಯೆ ಹೆಚ್ಚಾಗುತ್ತದೆ. ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಬಾರಿ ದಂಡ ಪಾವತಿಸಬೇಕಾಗುತ್ತದೆ. ಆಕಸ್ಮಿಕವಾಗಿ ನಿಮ್ಮ ಕೈಗೆ ಹಣ ಬಂದಲ್ಲಿ ಸ್ಟಾಕ್ ಮಾರ್ಕೆಟ್, ರಿಯಲ್ ಎಸ್ಟೆಟ್ ನಲ್ಲಿ ಹಣ ಹೂಡಿಕೆ ಮಾಡುವ ಬದಲು ಕ್ರೆಡಿಟ್ ಕಾರ್ಡ್ ಸಾಲವಿದ್ದರೆ ಅದನ್ನು ಮುಗಿಸಿ ಎಂದು ತಜ್ಞರು ಹೇಳುತ್ತಾರೆ. ಈ ಹೂಡಿಕೆಯಿಂದ ಬರುವ ಲಾಭಕ್ಕಿಂತ ನೀವು ತುಂಬುತ್ತಿರುವ ಬಡ್ಡಿ ಹೆಚ್ಚಿರುತ್ತದೆ. ಸಾಮಾನ್ಯ ಸಾಲಕ್ಕಿಂತ ಕ್ರೆಡಿಟ್ ಕಾರ್ಡ್ ಸಾಲ ದುಬಾರಿ.