alex Certify ಜ.31 ರೊಳಗೆ ಫಾಸ್ಟ್ಯಾಗ್ KYC ಪೂರ್ಣಗೊಳಿಸಲು ಸೂಚಿಸಿರುವುದರ ಹಿಂದಿದೆ ಈ ಕಾರಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ.31 ರೊಳಗೆ ಫಾಸ್ಟ್ಯಾಗ್ KYC ಪೂರ್ಣಗೊಳಿಸಲು ಸೂಚಿಸಿರುವುದರ ಹಿಂದಿದೆ ಈ ಕಾರಣ…!

Why You Need To Complete FASTag KYC Before January 31

ನೀವಿನ್ನೂ ನಿಮ್ಮ ಫಾಸ್ಟ್ಯಾಗ್ ಕೆ ವೈಸಿ ಪೂರ್ಣಗೊಳಿಸದಿದ್ದರೆ ಜನವರಿ 31 ರನಂತರ ನಿಮ್ಮ ಫಾಸ್ಟ್ಯಾಗ್ ನಿಷ್ಕ್ರಿಯಗೊಳ್ಳುತ್ತದೆ ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.

ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜನವರಿ 31 ರ ನಂತರ ಕೆವೈಸಿ( KYC) ಅಪೂರ್ಣವಾಗಿರುವ ಫಾಸ್ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸುವುದಾಗಿ ಅಥವಾ ಕಪ್ಪುಪಟ್ಟಿಗೆ ಸೇರಿಸುವುದಾಗಿ ಪ್ರಕಟಿಸಿದೆ.

NHAI ಪ್ರಕಾರ ಭಾರತದಾದ್ಯಂತ ಹೊಸ ಮತ್ತು ಸುಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸಲು ಮತ್ತು ದೃಢೀಕರಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣಾ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಒದಗಿಸಲು NHAI ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ಉಪಕ್ರಮವನ್ನು ಕೈಗೊಂಡಿದೆ. ಇದು ಬಹು ವಾಹನಗಳಿಗೆ ಏಕ ಫಾಸ್ಟ್ಯಾಗ್ ಬಳಕೆ ಅಥವಾ ನಿರ್ದಿಷ್ಟ ವಾಹನಕ್ಕೆ ಬಹು ಫಾಸ್ಟ್‌ ಟ್ಯಾಗ್‌ ಗಳನ್ನು ಲಿಂಕ್ ಮಾಡುವುದನ್ನು ತಡೆಯುವ ಗುರಿಯನ್ನು ಹೊಂದಿದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಒಂದೇ ವಾಹನಕ್ಕೆ ಬಹು ಫಾಸ್ಟ್ಯಾಗ್‌ಗಳನ್ನು ನೀಡಲಾಗುತ್ತಿದೆ ಮತ್ತು RBI ನ ಆದೇಶವನ್ನು ಉಲ್ಲಂಘಿಸಿ KYC ಇಲ್ಲದೆಯೇ ಹಲವಾರು ಫಾಸ್ಟ್ಯಾಗ್‌ ನೀಡಲಾಗುತ್ತಿದೆ ಎಂಬ ಇತ್ತೀಚಿನ ವರದಿಗಳನ್ನು ಗಮನಿಸಲಾಗಿದೆ ಎಂದು NHAI ಹೇಳಿದೆ. ಸುಮಾರು ಏಳು ಕೋಟಿ ಫಾಸ್ಟ್ಯಾಗ್‌ ನೀಡಲಾಗಿದೆ ಆದರೆ ಕೇವಲ ನಾಲ್ಕು ಕೋಟಿ ಮಾತ್ರ ಸಕ್ರಿಯವಾಗಿರುವಂತೆ ತೋರುತ್ತಿದೆ. 1.2 ಕೋಟಿ ಫಾಸ್ಟ್ಯಾಗ್‌ ನಕಲಿಗಳಾಗಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಹಾಗಾದರೆ ನಿಮ್ಮ ಫಾಸ್ಟ್ಯಾಗ್‌ KYC ಅನ್ನು ಆನ್‌ಲೈನ್‌ನಲ್ಲಿ ನವೀಕರಿಸುವುದು ಹೇಗೆ ?

• fastag.ihmcl.com ವೆಬ್‌ಸೈಟ್‌ಗೆ ಭೇಟಿ ನೀಡಿ
• ‘ ಮೈ ಪ್ರೊಫೈಲ್’ ವಿಭಾಗದ ಮೇಲೆ ಕ್ಲಿಕ್ ಮಾಡಿ ಮತ್ತು ‘KYC’ ಟ್ಯಾಬ್ ತೆರೆಯಿರಿ
• ನಿಮ್ಮ ಗುರುತು ಮತ್ತು ವಿಳಾಸ ಪುರಾವೆ ದಾಖಲೆಗಳನ್ನು ಒಳಗೊಂಡಂತೆ ಅಗತ್ಯವಿರುವ ವಿವರಗಳನ್ನು ಸೇರಿಸಿ
• ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ಅಪ್‌ಲೋಡ್ ಮಾಡಿ
• ‘ಕನ್ಫರ್ಮ್ ದ ಡಿಕ್ಲರೇಷನ್’ ಮೇಲೆ ಕ್ಲಿಕ್ ಮಾಡಿ ನಂತರ ‘ಸಬ್ ಮಿಟ್’ ಕ್ಲಿಕ್ ಮಾಡಿ
• KYC ಪ್ರಕ್ರಿಯೆಯು ಅಪ್‌ಡೇಟ್ ಆಗಲು ಗರಿಷ್ಠ ಏಳು ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ

ಇದಲ್ಲದೇ KYC ಅಪ್‌ಡೇಟ್‌ಗಳ ಕುರಿತು ಯಾವುದೇ ಗೊಂದಲವಿದ್ದಲ್ಲಿ ಫಾಸ್ಟ್ಯಾಗ್ ಬಳಕೆದಾರರು ಹತ್ತಿರದ ಟೋಲ್ ಪ್ಲಾಜಾಗಳು ಅಥವಾ ಆಯಾ ವಿತರಕರ ಬ್ಯಾಂಕ್‌ಗಳ ಟೋಲ್-ಫ್ರೀ ಕಸ್ಟಮರ್ ಕೇರ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಫಾಸ್ಟ್ಯಾಗ್ KYC ಅಪ್‌ಡೇಟ್‌ಗೆ ಯಾವ ಡಾಕ್ಯುಮೆಂಟ್‌ಗಳು ಅಗತ್ಯವಿದೆ ?

ಆರ್ ಬಿಐ ಮಾರ್ಗಸೂಚಿಗಳ ಪ್ರಕಾರ ಫಾಸ್ಟ್ಯಾಗ್ KYC ಅಪ್‌ಡೇಟ್‌ಗೆ ವಾಹನದ ನೋಂದಣಿ ಪ್ರಮಾಣಪತ್ರ, ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆ (ಪಾಸ್‌ಪೋರ್ಟ್/ಮತದಾರರ ID/ಆಧಾರ್ ಕಾರ್ಡ್/ಚಾಲನಾ ಪರವಾನಗಿ/PAN ಕಾರ್ಡ್/NREGA ಜಾಬ್ ಕಾರ್ಡ್) ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋ ಅಗತ್ಯವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...