ಬಟ್ಟೆ ಒಗೆಯೋದು ತಲೆನೋವಿನ ಕೆಲಸ. ವಾಷಿಂಗ್ ಮಷಿನ್ ಈಗ ಈ ಕೆಲಸವನ್ನು ಸುಲಭ ಮಾಡಿದೆ. ಕೈನಲ್ಲಿ ಕರವಸ್ತ್ರ ಒಗೆಯಲೂ ಆಲಸ್ಯ ತೋರುವ ಜನರು ಬಿಳಿ ಬಣ್ಣದ ಬಟ್ಟೆ, ಹೊಸ ಬಟ್ಟೆ ಸೇರಿದಂತೆ ಎಲ್ಲ ವಸ್ತ್ರಗಳ ಜೊತೆ ಒಳ ಉಡುಪನ್ನು ವಾಷಿಂಗ್ ಮಷಿನ್ ಗೆ ಹಾಕ್ತಾರೆ. ವಾಷಿಂಗ್ ಮಷಿನ್ ಗೆ ಒಳ ಉಡುಪು ಹಾಕುವುದು ಒಳ್ಳೆ ಅಭ್ಯಾಸವಲ್ಲ.
ಒಳ ಉಡುಪು ಸೋಂಕನ್ನು ಹರಡುತ್ತದೆ. ಸಂಶೋಧನೆಯೊಂದರ ಪ್ರಕಾರ ದಿನವೊಂದಕ್ಕೆ ಒಂದು ಗ್ರಾಂ ನಷ್ಟು ಮಲ-ಮೂತ್ರದ ಬ್ಯಾಕ್ಟೀರಿಯಾ ಒಳ ಉಡುಪಿನಲ್ಲಿರುತ್ತದೆಯಂತೆ. ಎಲ್ಲ ಬಟ್ಟೆಗಳ ಜೊತೆ ಇದನ್ನೂ ವಾಷಿಂಗ್ ಮಷಿನ್ ಗೆ ಹಾಕಿದಾಗ ಇಕೋಲಿ ಹೆಸರಿನ ಬ್ಯಾಕ್ಟೀರಿಯಾ ನೀರಿನಲ್ಲಿ ಸೇರುತ್ತದೆ.
ಸಾಮಾನ್ಯ ಬಟ್ಟೆ ಹಾಗೂ ಒಳ ಉಡುಪು ತೊಳೆಯಲು ಬೇರೆ ಬೇರೆ ನೀರಿನ ಅಗತ್ಯವಿದೆ. ಸಾಮಾನ್ಯ ಬಟ್ಟೆಗೆ 15 ಡಿಗ್ರಿ ಉಷ್ಣತೆ ಸಾಕು. ಆದ್ರೆ ಒಳ ಉಡುಪಿಗೆ 40 ಡಿಗ್ರಿ ಉಷ್ಣತೆ ಬೇಕು. ಹಾಗಾಗಿ ಸದಾ ಒಳ ಉಡುಪನ್ನು ಬಿಸಿ ನೀರಿನಲ್ಲಿಯೇ ಒಗೆಯಬೇಕು. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಬೇಗ ಸೋಂಕು ತಗಲುವ ಸಾಧ್ಯತೆಯಿರುತ್ತದೆ. ಮನೆಯಲ್ಲಿ ರೋಗಿಗಳಿದ್ದರೆ ಅವ್ರ ಒಳ ಉಡುಪನ್ನು 60 ಡಿಗ್ರಿ ಉಷ್ಣತೆಯ ನೀರಿನಲ್ಲಿ ತೊಳೆಯಬೇಕು.
ಅಡುಗೆ ಮನೆ ಸ್ವಚ್ಛಗೊಳಿಸುವ ಬಟ್ಟೆ ಹಾಗೂ ಒಳ ಉಡುಪನ್ನು ಒಂದೇ ಬಾರಿ ಒಗೆಯುತ್ತೇವೆ. ಇದು ಎಷ್ಟು ಸರಿ ಎಂಬುದನ್ನು ನೀವೇ ಯೋಚನೆ ಮಾಡಿ. ಅಡುಗೆ ಮನೆ ಬಟ್ಟೆ ಜೊತೆ ಒಳ ಉಡುಪು ಸ್ವಚ್ಛಗೊಳಿಸಿದ್ರೆ ಸೋಂಕು ಬಹುಬೇಗ ದೇಹ ಸೇರುವ ಅಪಾಯವಿರುತ್ತದೆ.