ಫ್ಯಾಷನ್ ನಿರಂತರವಾಗಿ ಬದಲಾಗುತ್ತಿರುತ್ತದೆ. ಜೀನ್ಸ್ ಪ್ಯಾಂಟ್ ಫ್ಯಾಷನ್ ಕೂಡ ಬದಲಾಗುತ್ತಿರುತ್ತದೆ. ಪುರುಷ ಮತ್ತು ಮಹಿಳೆ ಇಬ್ಬರೂ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಬಗೆ ಬಗೆಯ ಪ್ಯಾಂಟ್ ಧರಿಸ್ತೇವೆ. ಆದ್ರೆ ಪುರುಷರ ಜೀನ್ಸ್ ನ ಪಾಕೆಟ್‌ಗಳಿಗಿಂತ ಮಹಿಳೆಯರ ಜೀನ್ಸ್ ಪಾಕೆಟ್‌ಗಳು ಏಕೆ ಚಿಕ್ಕದಾಗಿರುತ್ತೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದಕ್ಕೆ ಈಗ ಉತ್ತರ ಇಲ್ಲಿದೆ.
ಸುಮಾರು 10 ವರ್ಷಗಳಿಂದ ಫ್ಯಾಷನ್ ಉದ್ಯಮದಲ್ಲಿರುವ ಫ್ಯಾಷನ್ ಡಿಸೈನರ್ ಎಮಿಲಿ ಕೆಲ್ಲರ್ ಪ್ರಕಾರ ದರದ ಕಡಿತ ಮುಖ್ಯ ಕಾರಣ. ಪಾಕೆಟ್ ಚಿಕ್ಕದು ಮಾಡುವ ಮೂಲಕ ಕಂಪನಿಗಳು ಬಟ್ಟೆ ಉಳಿಸುತ್ತವೆ. ಮಹಿಳೆಯರ ಜೀನ್ಸ್ ಪಾಕೆಟ್‌ಗಳು ಚಿಕ್ಕದಾಗಿರುವುದರಿಂದ ಬಟ್ಟೆಗಳನ್ನು ಕಡಿಮೆ ಬಳಕೆ ಮಾಡುವ ಮೂಲಕ ವೆಚ್ಚವನ್ನು ಕಡಿಮೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು. ಬಹಳಷ್ಟು ಕಂಪನಿಗಳು ಫ್ಯಾಶನ್ ಟ್ರೆಂಡನ್ನು ಮುಂದಿಟ್ಟುಕೊಂಡು ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಮಹಿಳೆಯರಿಗೆ ಹ್ಯಾಂಡ್ ಬ್ಯಾಗ್ ಇರುವುದರಿಂದ ಜೀನ್ಸ್ ಗೆ ದೊಡ್ಡ ಪಾಕೆಟ್ ಗಳ ಅವಶ್ಯಕತೆ ಕಡಿಮೆ. ಅಗತ್ಯ ವಸ್ತುಗಳಿಗೆ ಚಿಕ್ಕ ಪಾಕೆಟ್ ಸಾಕಾಗುತ್ತದೆ. ಹಾಗಾಗಿ ಮಹಿಳೆಯರು ಚಿಕ್ಕ ಪಾಕೆಟ್ ಇರುವ ಜೀನ್ಸನ್ನೇ ಹೆಚ್ಚು ಇಷ್ಟಪಡೋದು.
ಫ್ಯಾಷನ್ ಕಾರಣದಿಂದಾಗಿ ಸಣ್ಣ ಪಾಕೆಟ್ಸ್ ಹಾಕಲಾಗುತ್ತದೆ. ಇಂದಿನ ಫ್ಯಾಷನ್ ಟ್ರೆಂಡ್‌ಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರ ಜೀನ್ಸ್‌ನ ಪಾಕೆಟ್‌ಗಳನ್ನು ಚಿಕ್ಕದಾಗಿ ಇರಿಸಲಾಗುತ್ತದೆ. ಮಾರುಕಟ್ಟೆಯಲ್ಲೂ ಇಂತಹ ಜೀನ್ಸ್ ಗೆ ಹೆಚ್ಚಿನ ಬೇಡಿಕೆ ಇದೆ. ಇದರಲ್ಲಿ ಪಾಕೆಟ್ ಟ್ರೆಂಡ್ ಕೂಡ ಒಂದು.