ನೀರಿನಲ್ಲಿ ಯಾವ ವಸ್ತು ಮುಳುಗುತ್ತೆ, ಯಾವ ವಸ್ತು ತೇಲುತ್ತೆ ಎಂಬುದನ್ನು ಜನರು ಹೇಳ್ತಾರೆ. ಆದ್ರೆ ಯಾಕೆ ಎಂಬುದು ಅನೇಕರಿಗೆ ತಿಳಿದಿಲ್ಲ. ನೀರಿನಲ್ಲಿ ಮುಳುಗುವ ವಸ್ತು ಅದರ ತೂಕವೊಂದೇ ಸಂಬಂಧ ಹೊಂದಿಲ್ಲ. ಅದರ ಸಾಂದ್ರತೆಯೂ ಮಹತ್ವ ಪಡೆಯುತ್ತದೆ. ಒಂದು ಟನ್ ಕಬ್ಬಿಣದ ಹಡಗು ನೀರಿನಲ್ಲಿ ತೇಲುತ್ತದೆ. ಆದರೆ ಸಣ್ಣ ಬೆಣಚುಕಲ್ಲು ನೀರಿನಲ್ಲಿ ಮುಳುಗುತ್ತದೆ.
ನೀರಿನಲ್ಲಿ ಮುಳುಗುವ ಹಾಗೂ ತೇಲುವ ವಿಷ್ಯ ಬಂದಾಗ ಕಿತ್ತಳೆ ಆಸಕ್ತಿದಾಯವಾಗಿದೆ. ಕಿತ್ತಳೆ ಹಣ್ಣನ್ನು ನೀರಿನಲ್ಲಿ ಹಾಕಿದರೆ ಅದು ಆರಾಮವಾಗಿ ತೇಲುತ್ತದೆ. ಆದರೆ ಅದರ ಸಿಪ್ಪೆಯನ್ನು ತೆಗೆದರೆ ಅದು ನೀರಿನಲ್ಲಿ ಮುಳುಗುತ್ತದೆ. ಸಿಪ್ಪೆಯಿಲ್ಲದ ಕಿತ್ತಳೆ ನೀರಿನಲ್ಲಿ ತೇಲಲು ಸಾಧ್ಯವಾಗುವುದಿಲ್ಲ. ಸಿಪ್ಪೆಯೊಂದಿಗೆ ಇದ್ದರೆ ಇಡೀ ಕಿತ್ತಳೆ ನೀರಿನಲ್ಲಿ ತೇಲುತ್ತದೆ. ಸಿಪ್ಪೆಯನ್ನು ತೆಗೆದ ನಂತರ ಕಿತ್ತಳೆ ಹಣ್ಣಿನ ತೂಕ ಕಡಿಮೆಯಾಗುತ್ತದೆ. ಹಾಗಿದ್ರೆ ನೀರಿನಲ್ಲಿ ತೇಲಬೇಕು ಅಲ್ವಾ? ಆದ್ರೆ ತೇಲುವ ಬದಲು ಮುಳುಗುತ್ತದೆ.
ಸಿಪ್ಪೆಯ ತೂಕವು ಅದರ ಸಾಂದ್ರತೆಗಿಂತ ಕಡಿಮೆಯಿರುತ್ತದೆ. ಕಿತ್ತಳೆ ಸಿಪ್ಪೆಯೊಳಗೆ ರಂಧ್ರಗಳಿರುತ್ತವೆ. ಅದರಲ್ಲಿ ರಸವು ತುಂಬಿರುತ್ತದೆ. ಇದರಿಂದಾಗಿ ತೂಕವು ಅದರ ಸಾಂದ್ರತೆಗಿಂತ ಹೆಚ್ಚಾಗುತ್ತದೆ. ಸಿಪ್ಪೆ ಸುಲಿದ ಕಿತ್ತಳೆ ನೀರಿನಲ್ಲಿ ಹಾಕಿದ ತಕ್ಷಣ ಮುಳುಗುತ್ತದೆ.
ಆರ್ಕಿಮಿಡೀಸ್ನ ತತ್ವದಿಂದ ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಯಾವುದೇ ವಸ್ತುವು ನೀರಿನ ಮೇಲೆ ತೇಲಲು, ವಸ್ತುವಿನ ತೂಕಕ್ಕೆ ಸಮನಾದ ನೀರಿನ ಪ್ರಮಾಣವನ್ನು ಸ್ಥಳಾಂತರಿಸಬೇಕು. ಆ ವಸ್ತುವು ಅಷ್ಟು ನೀರನ್ನು ತೆಗೆದರೆ, ಅದು ನೀರಿನಲ್ಲಿ ಆರಾಮವಾಗಿ ತೇಲುತ್ತದೆ.