ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಮೇಲೆ ನಿಯಂತ್ರಣ ಸಾಧಿಸಿರುವ ತಾಲಿಬಾನ್‌ಗೆ ದೇಶದ ಕೇಂದ್ರ ಬ್ಯಾಂಕ್ ನ ಸಂಪನ್ಮೂಲಗಳನ್ನು ಈಗಲೇ ಮುಟ್ಟುವುದು ಅಸಾಧ್ಯವಾಗಿದೆ.
ಈ ಕುರಿತು ಸರಣಿ ಟ್ವೀಟ್‌ಗಳ ವಿವರಣೆ ಕೊಟ್ಟಿರುವ ಅಫ್ಘಾನಿಸ್ತಾನ ಕೇಂದ್ರ ಬ್ಯಾಂಕ್ (ಡಿಎಬಿ) ಗವರ್ನರ್ ಅಜ್ಮಲ್ ಅಹ್ಮದಿ, “ಬ್ಯಾಂಕಿನ ಸಂಪನ್ಮೂಲಗಳು ಎಲ್ಲಿವೆ ಎಂದು ಡಿಎಬಿ ಸಿಬ್ಬಂದಿಯನ್ನು ತಾಲಿಬಾನ್ ಕೇಳುತ್ತಿದೆ ಎಂದು ನನಗೆ ತಿಳಿದುಬಂದಿದೆ. ಇದು ನಿಜವೇ ಆದಲ್ಲಿ, ಅವರಿಗೊಬ್ಬ ಆರ್ಥಿಕ ತಜ್ಞನ ಅಗತ್ಯವಿದೆ”
“ಕಳೆದ ವಾರದ ಅಂತ್ಯಕ್ಕೆ ಡಿಎಬಿಯ ಸ್ವತ್ತು $9 ಶತಕೋಟಿಯಷ್ಟಿತ್ತು. ಆದರೆ ಇದರರ್ಥ ಡಿಎಬಿ $9 ಶತಕೋಟಿಯನ್ನು ದೈಹಿಕವಾಗಿ ತನ್ನಲ್ಲೇ ಇಟ್ಟುಕೊಂಡಿದೆ ಎಂದಲ್ಲ. ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಖಜಾನೆ ಹಾಗೂ ಚಿನ್ನದಂಥ ಬಹುತೇಕ ಸ್ವತ್ತುಗಳನ್ನು ಸುರಕ್ಷಿತವಾಗಿ ಇರಿಸಲಾಗಿದೆ.
ರಕ್ಷಾ ಬಂಧನದ ದಿನ ಈ ದೇವರಿಗೆ ರಾಖಿ ಕಟ್ಟೋದನ್ನು ಮರೆಯಬೇಡಿ
ಇದರಲ್ಲಿ $7 ಶತಕೋಟಿಯಷ್ಟು ಅಮೆರಿಕದ ಫೆಡರಲ್ ಮೀಸಲು, ಅಮೆರಿಕದ ಬಿಲ್/ಬಾಂಡ್‌ಗಳು: $3.1 ಶತಕೋಟಿ, ವಿಶ್ವ ಬ್ಯಾಂಕ್ ಸ್ವತ್ತು: $2.4 ಶತಕೋಟಿ, ಚಿನ್ನ: $1.2 ಶತಕೋಟಿ, ನಗದು: $0.3 ಶತಕೋಟಿ” ಎಂದು ವಿವರವಾದ ಟ್ವೀಟ್ ಮಾಡಿದ್ದಾರೆ ಅಹ್ಮದಿ.
ವಿಶ್ವ ಸಂಸ್ಥೆಯ ನಿಷೇಧದ ಪಟ್ಟಿಯಲ್ಲಿರುವ ತಾಲಿಬಾನ್‌ಗೆ ಡಿಎಬಿ ಬ್ಯಾಂಕ್‌ನಿಂದ ದುಡ್ಡು ಪಡೆಯುವ ಅವಕಾಶವನ್ನು ಅಮೆರಿಕದ ಕೇಂದ್ರೀಯ ಮೀಸಲು ಬ್ಲಾಕ್ ಮಾಡಿದೆ.
ಭಾರೀ ಪ್ರಮಾಣದಲ್ಲಿ ವಿತ್ತೀಯ ಕೊರತೆ ಇದ್ದ ಕಾರಣ ಡಿಎಬಿ ದೊಡ್ಡ ಮಟ್ಟದ ನಗದನ್ನು ಪ್ರತಿವಾರ ದೈಹಿಕವಾಗಿ ತರಿಸಿಕೊಳ್ಳುತ್ತಿತ್ತು. ಆದರೆ ಈಗ ಭದ್ರತಾ ಪರಿಸ್ಥಿತಿ ಹದಗೆಟ್ಟ ಕಾರಣ ಸಾಗಾಟದ ವ್ಯವಸ್ಥೆ ಇಲ್ಲದೇ ಇರುವ ಕಾರಣ ಕಾಬೂಲ್‌ನಲ್ಲಿ ಲಭ್ಯವಿರುವ ನಗದು ಶೂನ್ಯವಾಗಿದೆ ಎನ್ನಲಾಗಿದೆ.