
ನಾವು ಪ್ರತಿನಿತ್ಯ ರಸ್ತೆಯಲ್ಲಿ ಓಡಾಡುವಾಗ ಮೂರ್ಛೆ ತಪ್ಪಿ ಬೀಳುವ ಅನೇಕರನ್ನು ನೋಡುತ್ತಿರುತ್ತೇವೆ. ನೋಡುವವರ ಕಣ್ಣಿಗೆ ಶಾರೀರಿಕವಾಗಿ ಆರೋಗ್ಯವಂತರಾಗಿ ಕಾಣುವವರು ಕೂಡ ರಸ್ತೆಯ ಮಧ್ಯೆ ಎಚ್ಚರತಪ್ಪಿ ಬೀಳುತ್ತಾರೆ. ಸಾಮಾನ್ಯವಾಗಿ ಜನರು, ಬಿಸಿಲಿನ ಝಳಕ್ಕೆ, ಸುಸ್ತಿಗೆ ಅಥವಾ ಬ್ರೇನ್ ಗೆ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಹೀಗೆ ಮೂರ್ಛೆ ತಪ್ಪುತ್ತಾರೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ ಮೂರ್ಛೆ ಹೋಗಲು ಇನ್ನೂ ಕೆಲವು ಪ್ರಮುಖ ಕಾರಣಗಳಿವೆ.
ಮೂರ್ಛೆ ಹೋಗಲು ಲೋ ಬ್ಲಡ್ ಪ್ರೆಶರ್ ಕೂಡ ಮುಖ್ಯ ಕಾರಣ. ಸಾಮಾನ್ಯವಾಗಿ 65 ವರ್ಷ ಮೇಲ್ಪಟ್ಟವರಲ್ಲಿ ಇದು ಕಾಣಿಸಿಕೊಳ್ಳುತ್ತದೆ.
ಡಿಹೈಡ್ರೇಶನ್ ಸಮಸ್ಯೆಯನ್ನು ಎದುರಿಸುತ್ತಿರುವವರು ಎಚ್ಚರತಪ್ಪಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ದೇಹವು ನಿರ್ಜಲೀಕರಣವಾಗುವುದರಿಂದ ರಕ್ತದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ರಕ್ತದೊತ್ತಡ ಕೂಡ ಇಳಿಕೆಯಾಗುವುದರಿಂದ ಜನರು ಮೂರ್ಛೆ ಹೋಗುತ್ತಾರೆ.
ಡಯಾಬಿಟೀಸ್ ರೋಗಿಗಳು ಕೂಡ ಮೂರ್ಛೆ ತಪ್ಪುವ ಸಾಧ್ಯತೆ ಹೆಚ್ಚು. ಏಕೆಂದರೆ ಮಧುಮೇಹಿಗಳು ಮೇಲಿಂದ ಮೇಲೆ ಮೂತ್ರ ವಿಸರ್ಜನೆ ಮಾಡುವುದರಿಂದ ಅವರ ಶರೀರ ನಿರ್ಜಲೀಕರಣಗೊಳ್ಳುತ್ತದೆ. ಹೀಗೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಜನರು ಮೂರ್ಛೆಹೋಗುತ್ತಾರೆ.
ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವವರು ಕೂಡ ಈ ಸಮಸ್ಯೆಗೆ ಒಳಗಾಗ್ತಾರೆ. ಹೃದಯ ರೋಗವಿರುವವರ ಮೆದುಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗುವುದಿಲ್ಲ. ಆ ಕಾರಣಕ್ಕಾಗಿ ಮಧುಮೇಹಿಗಳು ಮೂರ್ಛೆ ಹೋಗುವುದು ಹೆಚ್ಚು.