ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನದ ಪ್ರತಿಯೊಂದು ವಿಷ್ಯಕ್ಕೂ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಊಟ ಯಾವ ರೀತಿ ಇರಬೇಕು ಎನ್ನುವ ಬಗ್ಗೆಯೂ ಸವಿಸ್ತಾರವಾಗಿ ಹೇಳಲಾಗಿದೆ. ಹಿಂದೂ ಧರ್ಮದ ಪ್ರಕಾರ ಊಟದ ಆರಂಭವನ್ನು ಸಿಹಿ ಮೂಲಕ ಶುರು ಮಾಡಬೇಕು. ವಿಜ್ಞಾನ ಹಾಗೂ ಆಯುರ್ವೇದದಲ್ಲೂ ಇದನ್ನೇ ಹೇಳಲಾಗಿದೆ.
ಧರ್ಮದ ಪ್ರಕಾರ, ಊಟವನ್ನು ಸಿಹಿ ಸೇವನೆ ಮೂಲಕ ಶುರು ಮಾಡಿದ್ರೆ ಎಲ್ಲವೂ ಶುಭವಾಗಲಿದೆ. ಶುಭ ಬಯಸುವವರು ಹೀಗೆ ಮಾಡಬೇಕು ಎಂದು ಧರ್ಮ ಹೇಳುತ್ತದೆ.
ಇನ್ನು ಆರೋಗ್ಯಕ್ಕೂ ಇದು ಒಳ್ಳೆಯದು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರಿಗೆ ಇದು ಒಳ್ಳೆ ಅಭ್ಯಾಸ. ಆಹಾರ ತಜ್ಞರು ಕೂಡ ಸಿಹಿ ಸೇವನೆ ಮೂಲಕ ಊಟ ಶುರು ಮಾಡಬೇಕು ಎನ್ನುತ್ತಾರೆ.
ಇದ್ರಿಂದ ಇನ್ಸುಲಿನ್ ಸ್ರವಿಸುತ್ತದೆ. ಇದ್ರಿಂದ ಹಸಿವು ಹೆಚ್ಚಾಗುತ್ತದೆ. ಆಹಾರದ ರುಚಿ ಹೆಚ್ಚಾಗುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಶಕ್ತಿ ಕೂಡ ದೇಹಕ್ಕೆ ಸಿಗುತ್ತದೆ.
ಆಯುರ್ವೇದದಲ್ಲೂ ಇದಕ್ಕೆ ಮಹತ್ವ ನೀಡಲಾಗಿದೆ. ಆಯುರ್ವೇದದಲ್ಲಿ 6 ರಸಕ್ಕೆ ಮಹತ್ವ ನೀಡಲಾಗುತ್ತದೆ. ಊಟದ ಆರಂಭದಲ್ಲಿ ಸಿಹಿ ತಿನ್ನಬೇಕು. ನಂತ್ರ ಹುಳಿ, ಮಸಾಲೆಯುಕ್ತ ಆಹಾರದ ನಂತ್ರ ಬೇಯಿಸಿದ ಆಹಾರ ಸೇವನೆ ಮಾಡಬೇಕೆಂತೆ. ಇದ್ರಿಂದ ಜೀರ್ಣಕ್ರಿಯೆ ಆರೋಗ್ಯಕರವಾಗಿರುತ್ತದೆ.