
ಮನರಂಜಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಹೆಸರುವಾಸಿಯಾಗಿರುವ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್, ಅವರು ತಮ್ಮ ಅನುಯಾಯಿಗಳನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕೆಂದು ತಿಳಿದಿದ್ದಾರೆ. ಅವರ ರಾಜ್ಯದ ನೈಸರ್ಗಿಕ ಸೌಂದರ್ಯವನ್ನು ಪ್ರದರ್ಶಿಸುವ ವೀಡಿಯೊಗಳನ್ನು ಪೋಸ್ಟ್ ಮಾಡುವುದರಿಂದ ಹಿಡಿದು ಅವರ ಅಭಿಮಾನಿಗಳಿಗೆ ಪ್ರಮುಖ ಜೀವನ ಸಲಹೆಗಳನ್ನೂ ನೀಡುತ್ತಾರೆ.
ಇದೀಗ ಅವರು, ನೆಚ್ಚಿನ ನಾಯಿಗಳನ್ನು ಒಳಗೊಂಡ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ”ಮನುಷ್ಯರು ಮಾತ್ರ ಏಕೆ ಎಲ್ಲಾ ವಿನೋದವನ್ನು ಹೊಂದಿರಬೇಕು? ಎಂದು ಶೀರ್ಷಿಕೆಯಲ್ಲಿ ಅವರು ಬರೆದಿದ್ದಾರೆ.
ಸಚಿವರು ಶೇರ್ ಮಾಡಿರುವ ವಿಡಿಯೋದಲ್ಲಿ, ಬಲೂನ್‌ನೊಂದಿಗೆ ನಾಯಿಗಳ ಗುಂಪು ಕ್ಯಾಚ್ ಕ್ಯಾಚ್ ಆಡುವುದನ್ನು ನೋಡಬಹುದು. ಆಟವಾಡುತ್ತಾ ನಾಯಿಗಳ ಗುಂಪು ಮೋಜು ಮಾಡುತ್ತಿದೆ. ನಾಯಿಮರಿಗಳು ಸರದಿಯಂತೆ ನೆಗೆಯುತ್ತವೆ ಮತ್ತು ತಮಾಷೆಯ ರೀತಿಯಲ್ಲಿ ತಮ್ಮ ಮೂತಿಗಳಿಂದ ಗಾಳಿಯಲ್ಲಿ ಬಲೂನ್ ಅನ್ನು ತಳ್ಳುತ್ತವೆ. ಇದನ್ನು ನೋಡಿ ನೆಟ್ಟಿಗರು ಫುಲ್ ಖುಷ್ ಆಗುತ್ತಿದ್ದಾರೆ.