ಆಯುರ್ವೇದದ ಪ್ರಕಾರ ಸೂರ್ಯಾಸ್ತದ ಮೊದಲು ಆಹಾರ ಸೇವನೆ ಮಾಡಬೇಕು. ಜೈನ ಧರ್ಮದಲ್ಲಿಯೂ ಇದಕ್ಕೆ ಮಹತ್ವದ ಸ್ಥಾನವಿದೆ. ಸೂರ್ಯಾಸ್ತಕ್ಕಿಂತ ಮೊದಲು ಭೋಜನ ಮಾಡುವ ಪದ್ಧತಿ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಕರೆಂಟ್ ಉತ್ಪಾದನೆಗಿಂತ ಮೊದಲು ಮನುಷ್ಯ ಸೂರ್ಯಾಸ್ತಕ್ಕಿಂತ ಮುನ್ನವೇ ಭೋಜನ ಮಾಡ್ತಾ ಇದ್ದ.
ಕರೆಂಟ್ ಆವಿಷ್ಕಾರವಾಗಿ ಜೀವನ ಬದಲಾಗ್ತಾ ಹೋದಂತೆ ಮನುಷ್ಯನ ಆಹಾರ ಸೇವನೆ ಪದ್ಧತಿ ಕೂಡ ಬದಲಾಗ್ತಾ ಹೋಯ್ತು. ಸೂರ್ಯಾಸ್ತಕ್ಕಿಂತ ಮುನ್ನವೇ ಭೋಜನ ಮಾಡಿದ್ರೆ ಜನ ಈಗ ನಗ್ತಾರೆ. ಆದ್ರೆ ಹಿಂದಿನವರು ಹಾಗೂ ಧರ್ಮಗಳು ಮಾಡಿರುವ ಪದ್ಧತಿ ಕೇವಲ ಪದ್ಧತಿಯಲ್ಲ. ಅದರ ಹಿಂದೆ ಮನುಷ್ಯನ ಆರೋಗ್ಯ ಅಡಗಿದೆ.
ಮೊದಲ ಕಾರಣ: ಸೂರ್ಯಾಸ್ತಕ್ಕಿಂತ ಮುನ್ನವೇ ಭೋಜನ ಮಾಡುವುದರಿಂದ ಆಹಾರ ಜೀರ್ಣವಾಗಲು ಸಾಕಷ್ಟು ಸಮಯ ಸಿಗುತ್ತದೆ.
ಎರಡನೇ ಕಾರಣ : ಸೂರ್ಯಾಸ್ತದ ನಂತ್ರ ಭೋಜನ ಮಾಡುವುದರಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಸೂರ್ಯನ ಶಾಖಕ್ಕೆ ತಣ್ಣಗಿರುವ ಬ್ಯಾಕ್ಟೀರಿಯಾಗಳಿಗೆ ಸೂರ್ಯ ಮುಳುಗಿದ ನಂತ್ರ ತೇವದ ವಾತಾವರಣದಲ್ಲಿ ಜೀವ ಬರುತ್ತದೆ. ರಾತ್ರಿ ವೇಳೆ ಆಹಾರದಲ್ಲಿ ಬ್ಯಾಕ್ಟೀರಿಯಾ ಅಥವಾ ಬೇರೆ ಯಾವುದೋ ಕೀಟಾಣು ಬೀಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಆಹಾರದಲ್ಲಿಯೇ ಬ್ಯಾಕ್ಟೀರಿಯಾ ಉತ್ಪಾದನೆಯಾಗುತ್ತದೆ.
ಮೂರನೇ ಕಾರಣ: ಸೂರ್ಯಾಸ್ತದ ನಂತ್ರ ಪ್ರಾಣಿ-ಪಕ್ಷಿಗಳು ಮನೆಗೆ ಹೋಗುತ್ತವೆ. ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾಗೆಯೇ ಆಹಾರದಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗುತ್ತವೆ. ಸೂರ್ಯ ಮುಳುಗುತ್ತಿದ್ದಂತೆ ಆಹಾರದಲ್ಲಿರುವ ಪೌಷ್ಠಿಕಾಂಶದ ಗುಣ ಕಡಿಮೆಯಾಗುತ್ತ ಬರುತ್ತದೆ. ಆಹಾರ ವಿಷವಾಗಲು ಶುರುವಾಗುತ್ತದೆ.