ಕ್ರಿಸ್ಮಸ್ ಗೆ ಇನ್ನೊಂದು ದಿನ ಬಾಕಿಯಿದೆ. ಹಬ್ಬದ ತಯಾರಿ ಜೋರಾಗಿ ನಡೆದಿದೆ. ಜನರು ಪರಸ್ಪರ ಉಡುಗೊರೆ ನೀಡುವ ತಯಾರಿಯಲ್ಲಿದ್ದಾರೆ. ಮಕ್ಕಳು ಸಾಂಟಾ ಕ್ಲಾಸ್ ಗೆ ಕಾಯ್ತಿದ್ದಾರೆ. ಸಾಂಟಾ ಕ್ಲಾಸ್ ಬಗ್ಗೆ ಸಾಕಷ್ಟು ಕುತೂಹಲಕಾರಿ ಕಥೆಗಳಿವೆ. ಅದ್ರಲ್ಲಿ ಸಾಂಟಾ ಸಾಕ್ಸ್ ನಲ್ಲಿ ಉಡುಗೊರೆ ನೀಡುವುದೂ ಒಂದು. ಸಾಂಟಾ ಕ್ಲಾಸ್ ಏಕೆ ಸಾಕ್ಸ್ ನಲ್ಲಿ ಉಡುಗೊರೆ ನೀಡ್ತಿದ್ದ ಎಂಬುದಕ್ಕೆ ಕಾರಣ ಇಲ್ಲಿದೆ.
ಕ್ರೆಡಿಟ್-ಡೆಬಿಟ್ ಕಾರ್ಡ್ ವಹಿವಾಟು ಕುರಿತು RBI ಹೊಸ ನಿಯಮ: ನಿಮಗೆ ತಿಳಿದಿರಲಿ ಈ 10 ವಿಷಯ
ಸಾಂಟಾ ಕ್ಲಾಸ್‌ಗೆ ಉಡುಗೊರೆಗಳನ್ನು ನೀಡುವ ಅಭ್ಯಾಸ ನಾಲ್ಕನೇ ಶತಮಾನದಿಂದಲೂ ಜಾರಿಯಲ್ಲಿದೆ. ಸೇಂಟ್ ನಿಕೋಲಸ್ ಎಂಬ ಅತ್ಯಂತ ಶ್ರೀಮಂತ ವ್ಯಕ್ತಿ ಟರ್ಕಿಯ ಮೈರಾದಲ್ಲಿ ವಾಸಸುತ್ತಿದ್ದನಂತೆ. ಶ್ರೀಮಂತ ಹಾಗೂ ದಾನಿಯಾಗಿದ್ದನಂತೆ. ಜನರಿಗೆ ಸಹಾಯ ಮಾಡ್ತಿದ್ದ ಆತ, ಸಹಾಯದ ಬಗ್ಗೆ ಜನರು ತಿಳಿಯಬಾರದು ಎಂದು ಕದ್ದು ಮುಚ್ಚಿ ಸಹಾಯ ಮಾಡ್ತಿದ್ದನಂತೆ. ಆತನಿಗೆ ಬಡ ವ್ಯಕ್ತಿಯೊಬ್ಬನ ಬಗ್ಗೆ ಗೊತ್ತಾಗಿದೆ. ಆತ 3 ಹೆಣ್ಣು ಮಕ್ಕಳ ಮದುವೆಗೆ ಕಷ್ಟಪಡ್ತಿದ್ದ ಎಂಬುದನ್ನು ತಿಳಿದ ಸೇಂಟ್ ಆತನಿಗೆ ಸಹಾಯ ಮಾಡಲು ಮುಂದಾಗಿದ್ದಾನೆ. ರಹಸ್ಯವಾಗಿ ಹಣದ ನೆರವು ನೀಡಲು ಮುಂದಾಗಿದ್ದಾನೆ.
ಸಾಕ್ಸ್ ನಲ್ಲಿ ಹಣ ಹಾಕಿ ಅದನ್ನು ಬಡ ವ್ಯಕ್ತಿ ಮನೆಯಲ್ಲಿ ಇಡ್ತಿದ್ದನಂತೆ. ಮೂರು-ನಾಲ್ಕು ಬಾರಿ ಹೀಗೆ ಮಾಡಿದ್ದಾನೆ. ಒಮ್ಮೆ ಬಡ ವ್ಯಕ್ತಿ ಇದನ್ನು ನೋಡಿದ್ದಾನೆ. ಸೇಂಟ್ ಇದನ್ನು ಬೇರೆಯವರಿಗೆ ಹೇಳಬಾರದು ಎಂದಿದ್ದರೂ ವಿಷ್ಯ ಹರಡಿದೆ. ಅಲ್ಲಿಂದ ಜನರು ಸಾಕ್ಸ್ ನಲ್ಲಿ ಉಡುಗೊರೆ ನೀಡಲು ಶುರುಮಾಡಿದ್ದಾರೆ. ಸಾಂಟಾ ಕ್ಲಾಸ್ ಹೆಸರಿನಲ್ಲಿ ಉಡುಗೊರೆಗಳನ್ನು ವಿತರಿಸುವ ಅಭ್ಯಾಸವೂ ಅಲ್ಲಿಂದಲೇ ಶುರುವಾಗಿದೆ.