ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ದಂತಕಥೆಗಳು. ಕ್ರಿಕೆಟ್ ಲೋಕದ ದೇವರು ಸಚಿನ್, ಕ್ರಿಕೆಟ್ ಲೋಕದ ಕಿಂಗ್ ವಿರಾಟ್. ಸಚಿನ್ ಭಾರತ ತಂಡದಲ್ಲಿರುವಾಗಲೇ ಕ್ರಿಕೆಟ್ ದುನಿಯಾಗೆ ಎಂಟ್ರಿ ಕೊಟ್ಟಿದ್ದ ಕೊಹ್ಲಿ, ಮಾಸ್ಟರ್-ಬ್ಲಾಸ್ಟರ್ ರಿಟೈರ್ ಮೆಂಟ್ ಸಂದರ್ಭದಲ್ಲಿ ಅವರಿಗೆ ಮರೆಯದ ಕಾಣಿಕೆ ನೀಡಿದ್ದರು.
ವಿರಾಟ್ ತಂದೆ ಪ್ರೇಮ್ ಕೊಹ್ಲಿ, ತನ್ನ ಮಗನ ರಕ್ಷಣೆ ಹಾಗೂ ಏಳಿಗೆಗೆಂದು ನೀಡಿದ್ದ ಪವಿತ್ರ ದಾರವನ್ನು ತನ್ನ ಕ್ರಿಕೆಟ್ ಐಡಲ್ ಗೆ ನೀಡಿದ್ದರು ವಿರಾಟ್. ಕೆಲವು ದಿನಗಳ ಕಾಲ ವಿರಾಟ್ ನೀಡಿದ ಪವಿತ್ರ ಉಡುಗೊರೆಯನ್ನ ತನ್ನ ಬಳಿ ಇಟ್ಟುಕೊಂಡ ಸಚಿನ್ ಬಳಿಕ ಅದನ್ನು ಕೊಹ್ಲಿಗೆ ನೀಡಿದ್ದಾರೆ. ಗ್ರಹಾಮ್ ಬೆನ್ಸಿಂಗರ್ ಅವರ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಚಿನ್, ವಿರಾಟ್ ನೀಡಿದ್ದ ಪವಿತ್ರ ದಾರವನ್ನು ಹಿಂತಿರುಗಿಸಿದ್ದು ಏಕೆಂದು ವಿವರಿಸಿದ್ದಾರೆ.
ನೋಡ ನೋಡುತ್ತಿದ್ದಂತೆಯೇ ಈಜುಗಾರನನ್ನು ತಿಂದು ತೇಗಿದ ದೈತ್ಯ ಶಾರ್ಕ್….!
ಈ ಸಂದರ್ಭದಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ನೆನಪಿಸಿಕೊಂಡ ಸಚಿನ್ ತೆಂಡೂಲ್ಕರ್, ಅದು ನನ್ನ ವೃತ್ತಿಜೀವನದ ಕೊನೆ ಪಂದ್ಯವಾಗಿತ್ತು. ಆ ಬೇಸರದಲ್ಲೇ ಕ್ರೀಡಾಂಗಣದ ಒಂದು ಮೂಲೆಯಲ್ಲಿ ಕುಳಿತುಕೊಂಡಿದ್ದೆ. ನನ್ನ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿತ್ತು, ಈ ವೇಳೆ ನಾನು ಕುಳಿತಿದ್ದ ಜಾಗಕ್ಕೆ ಬಂದ ವಿರಾಟ್ ಆತನ ತಂದೆ ನೀಡಿದ್ದ ಪವಿತ್ರ ದಾರವನ್ನು ನನಗೆ ನೀಡಿದರು.
ಆ ವೇಳೆ ನಾನು ಅದನ್ನು ಸ್ವೀಕರಿಸಿ, ಕೆಲ ದಿನಗಳ ಕಾಲ ನನ್ನ ಬಳಿ ಇಟ್ಟುಕೊಂಡಿದ್ದೆ. ಆದರೆ ಅದನ್ನ ಮತ್ತೆ ಮರಳಿಸಿದೆ. ಆ ಸಂದರ್ಭದಲ್ಲಿ ಇದು ನಿನ್ನ ಆಸ್ತಿ. ಇದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಇದು ನಿನ್ನ ಕೊನೆಯುಸಿರು ಇರುವವರೆಗೂ ನಿನ್ನ ಬಳಿ ಇರಬೇಕು ಎಂದು ಹೇಳಿದೆ, ಇಬ್ಬರಿಗೂ ಅದು ಭಾವನಾತ್ಮಕ ಕ್ಷಣವಾಗಿತ್ತು. ನನ್ನ ಜೀವನದ ಕೊನೆಯವರೆಗೂ ಆ ಉಡುಗೊರೆಯನ್ನ ನಾನು ನೆನಪಿನಲ್ಲಿಡುತ್ತೇನೆ ಎಂದು ಸಚಿನ್ ಹೇಳಿದ್ದಾರೆ.