alex Certify RBI ಗವರ್ನರ್​ ಕ್ರಿಪ್ಟೋ ಕರೆನ್ಸಿಯನ್ನು ‘ಕ್ಲಿಯರ್​ ಡೇಂಜರ್​’ ಎಂದು ಕರೆದಿದ್ದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RBI ಗವರ್ನರ್​ ಕ್ರಿಪ್ಟೋ ಕರೆನ್ಸಿಯನ್ನು ‘ಕ್ಲಿಯರ್​ ಡೇಂಜರ್​’ ಎಂದು ಕರೆದಿದ್ದರ ಹಿಂದಿದೆ ಈ ಕಾರಣ

ಇತ್ತೀಚಿನ ವರ್ಷಗಳಲ್ಲಿ ಕ್ರಿಪ್ಟೋ ಕರೆನ್ಸಿ ಹೆಚ್ಚು ಸದ್ದು ಮಾಡುತ್ತಿದೆ. ಹಣವನ್ನು ಕ್ರಿಪ್ಟೋ ಕರೆನ್ಸಿ ಮೂಲಕ ಸಂಗ್ರಹಿಸಿಡುವ, ವ್ಯವಹಾರ ಮಾಡುವ ಬೆಳವಣಿಗೆ ಹೆಚ್ಚಾಗುತ್ತಿದೆ. ಇದೀಗ ಆರ್​ಬಿಐ ಗವರ್ನರ್​ ಎಚ್ಚರಿಕೆ ಮಾತು ಹೇಳಿದ್ದಾರೆ.

ಭಾರತೀಯ ರಿಸರ್ವ್​ ಬ್ಯಾಂಕ್​ ಗವರ್ನರ್​ ಶಕ್ತಿಕಾಂತ ದಾಸ್​ ಅವರು ಕ್ರಿಪ್ಟೋಕರೆನ್ಸಿಗಳನ್ನು ಕ್ಲಿಯರ್​ ಡೇಂಜರ್​ ಎಂದು ಕರೆದಿದ್ದಾರೆ. ಅತ್ಯಾಧುನಿಕ ಹೆಸರಿನಲ್ಲಿ ಯಾವುದೇ ಆಧಾರವಿಲ್ಲದೆ ನಂಬಿಕೆ ಆಧಾರದ ಮೇಲೆ ಮೌಲ್ಯವನ್ನು ಪಡೆದುಕೊಳ್ಳುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕ್ರಿಪ್ಟೋಕರೆನ್ಸಿಗಳ ಕುರಿತು ಕೇಂದ್ರ ಸರ್ಕಾರವು ವಿವಿಧ ಮೀಡಿಯೇಟರ್​ ಮತ್ತು ಸಂಸ್ಥೆಗಳಿಂದ ಇನ್​ಪುಟ್​ ಸಂಗ್ರಹಿಸಿದ ನಂತರ ಕನ್ಸಲ್ಟೇಷನ್​ ಲೆಟರ್​ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿರುವಾಗ ಆರ್​ಬಿಐ ಮುಖ್ಯಸ್ಥರಿಂದ ಈ ಹೇಳಿಕೆ ಬಂದಿದೆ.

ಮಗುವಿಗೆ ನಿದ್ರಾಭಂಗವಾಗದಂತೆ ಎಚ್ಚರಿಕೆ ವಹಿಸಿದೆ ಈ ʼಶ್ವಾನʼ

ನಾವು ಭವಿಷ್ಯದಲ್ಲಿ ಅಪಾಯಗಳ ಬಗ್ಗೆ ಎಚ್ಚರದಿಂದಿರಬೇಕು. ಕ್ರಿಪ್ಟೋಕರೆನ್ಸಿಗಳು ಸ್ಪಷ್ಟ ಅಪಾಯವಾಗಿದೆ. ಯಾವುದೇ ಆಧಾರವಿಲ್ಲದೆ, ನಂಬಿಕೆಯ ಆಧಾರದ ಮೇಲೆ ಮೌಲ್ಯವನ್ನು ಪಡೆಯುವ ವಿಧಾನವಾಗಿದೆ ಎಂದು ಹೇಳಿದ್ದಾರೆ.

ಹಣಕಾಸು ವ್ಯವಸ್ಥೆಯು ಹೆಚ್ಚು ಡಿಜಿಟಲೀಕರಣಗೊಳ್ಳುತ್ತಿದ್ದಂತೆ, ಸೈಬರ್​ ಅಪಾಯಗಳು ಬೆಳೆಯುತ್ತಿವೆ. ಈ ಸಂದರ್ಭದಲ್ಲಿ ವಿಶೇಷ ಗಮನದ ಅಗತ್ಯವಿದೆ ಎಂದಿದ್ದಾರೆ.

ಇತ್ತೀಚಿಗೆ ಕ್ರಿಪ್ಟೋಕರೆನ್ಸಿಗಳು ಜಾಗತಿಕ ಅನಿಶ್ಚಿತತೆಗಳ ನಡುವೆ ಭಾರಿ ಚಂಚಲತೆಗೆ ಸಾಕ್ಷಿಯಾಗಿದೆ.
ಅಂದಹಾಗೆ ಆರ್​ಬಿಐ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು ಇದೇ ಮೊದಲಲ್ಲ, ಇವುಗಳನ್ನು ಹೆಚ್ಚು ಊಹಾತ್ಮಕ ಆಸ್ತಿ ಎಂದು ಪರಿಗಣಿಸಲಾಗಿದೆ.

ದೇಶದಲ್ಲಿ ಕ್ರಿಪ್ಟೋಕರೆನ್ಸಿಗೆ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿದಂತೆ ನಿಯಂತ್ರಣ ವ್ಯವಸ್ಥೆ ಬಗ್ಗೆ ಸ್ಪಷ್ಟತೆ ಇಲ್ಲ. ಆರ್​ಬಿಐ ಕ್ರಿಪ್ಟೋಕರೆನ್ಸಿಗಳ ಕುರಿತು ಸಮಾಲೋಚನಾ ಪ್ರಕ್ರಿಯೆ ನಡೆಸುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...