1845 ರವರೆಗೆ, ಡಿಸೆಂಬರ್‌ನಲ್ಲಿ ಮುಂದಿನ ಅಧ್ಯಕ್ಷರನ್ನು ಪ್ರಮಾಣೀಕರಿಸಲು ಎಲೆಕ್ಟೋರಲ್ ಸಭೆ ಸೇರುವ ಮೊದಲು 34-ದಿನದ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಚುನಾವಣೆಗಳನ್ನು ನಡೆಸಲು ರಾಜ್ಯಗಳಿಗೆ ಅವಕಾಶ ನೀಡಲಾಯಿತು. ಉದಾಹರಣೆಗೆ, 1844 ರಲ್ಲಿ, ಅಧ್ಯಕ್ಷೀಯ ಚುನಾವಣೆಯು ನವೆಂಬರ್ ಆರಂಭ ಮತ್ತು ಡಿಸೆಂಬರ್ ಆರಂಭದ ನಡುವೆ ಒಂದು ತಿಂಗಳ ಅವಧಿಯಲ್ಲಿ ನಡೆಯಿತು.
1845 ರಲ್ಲಿ, ಇಡೀ ದೇಶಕ್ಕೆ ಒಂದೇ ಚುನಾವಣಾ ದಿನವನ್ನು ನಿಗದಿಪಡಿಸಲು ಕಾಂಗ್ರೆಸ್ ಕಾನೂನನ್ನು ಅಂಗೀಕರಿಸಿತು. ಇದರ ಹಿಂದೆ ಎರಡು ಪ್ರಮುಖ ಕಾರಣಗಳಿದ್ದವು.
* 1800 ರ ದಶಕದ ಮಧ್ಯಭಾಗದಲ್ಲಿ, ರಾಜ್ಯಗಳು 21 ವರ್ಷಕ್ಕಿಂತ ಮೇಲ್ಪಟ್ಟ ಭೂಮಾಲೀಕರಲ್ಲದ ಬಿಳಿ ಪುರುಷರಿಗೆ ಮತ ಚಲಾಯಿಸುವ ಹಕ್ಕನ್ನು ವಿಸ್ತರಿಸಿದ್ದು, ಇದು ಮತದಾನದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿತು ಮತ್ತು ಮತದಾನ ಪ್ರಕ್ರಿಯೆಯನ್ನು ಸರಳಗೊಳಿಸುವ ಪ್ರಕ್ರಿಯೆಗಳಿಗೆ ಕಾರಣವಾಯಿತು.
* ಹಿಂದಿನ ವ್ಯವಸ್ಥೆಯ ವಿಮರ್ಶಕರು, ಕೆಲವು ರಾಜ್ಯಗಳಲ್ಲಿನ ಆರಂಭಿಕ ಮತದಾನ ಮತ್ತು ಫಲಿತಾಂಶಗಳ ಘೋಷಣೆಯು ನಂತರದ ದಿನಾಂಕದಂದು ತಮ್ಮ ಮತವನ್ನು ಚಲಾಯಿಸಿದ ರಾಜ್ಯಗಳಲ್ಲಿನ ಮತದಾನ ಮತ್ತು ಮತದಾನದ ನಡವಳಿಕೆಯ ಮೇಲೆ ಪರಿಣಾಮ ಬೀರುವ ಸಂದರ್ಭಗಳಿಗೆ ಕಾರಣವಾಯಿತು ಎಂದು ಕಂಡುಕೊಂಡರು.
ಆರಂಭದಲ್ಲಿ ಈ ಕಾನೂನು ಅಧ್ಯಕ್ಷೀಯ ಚುನಾವಣೆಗಳಿಗೆ ಮಾತ್ರ ಸಂಬಂಧಿಸಿದ್ದು, ಆದರೆ ಅದರ ವ್ಯಾಪ್ತಿಯನ್ನು ನಂತರ ಇತರ ಚುನಾವಣೆಗಳನ್ನು ಸೇರಿಸಲು ವಿಸ್ತರಿಸಲಾಯಿತು.
ಒಂದೇ ದಿನದ ಆಯ್ಕೆ
ಆಗ ಯಾವ ದಿನವನ್ನು ಚುನಾವಣಾ ದಿನವನ್ನಾಗಿ ಆಯ್ಕೆ ಮಾಡಬೇಕು ಎಂಬುದು ಪ್ರಶ್ನೆಯಾಗಿತ್ತು. ಹತ್ತೊಂಬತ್ತನೇ ಶತಮಾನದಲ್ಲಿ US ಕೃಷಿ ಪ್ರಧಾನ ದೇಶವಾಗಿತ್ತು ಮತ್ತು ಹೆಚ್ಚಿನ ಮತದಾರರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು.
ನವೆಂಬರ್ ಅನ್ನು ಮತದಾನದ ತಿಂಗಳು ಎಂದು ಆಯ್ಕೆ ಮಾಡಲಾಗಿರುವ ಹಿಂದಿನ ಕಾರಣವೆಂದರೆ ಅದು ವಸಂತ ಋತುವಿನೊಂದಿಗೆ ಅಥವಾ ಶರತ್ಕಾಲದ ಸುಗ್ಗಿಯೊಂದಿಗಿದ್ದು, ಮತ್ತು ಚಳಿಗಾಲವು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ದೂರವಿತ್ತು. ಧಾರ್ಮಿಕ ಮತ್ತು ಆರ್ಥಿಕ ಪರಿಗಣನೆಗಳ ಆಧಾರದ ಮೇಲೂ ಈ ದಿನದ ಆಯ್ಕೆಯು ಕೂಡಿತ್ತು.
ಹತ್ತೊಂಬತ್ತನೇ ಶತಮಾನದಲ್ಲಿ ಅನೇಕ ಗ್ರಾಮೀಣ ಮತದಾರರು ತಮ್ಮ ಮತ ಚಲಾಯಿಸಲು ದಿನವಿಡೀ ಪ್ರಯಾಣಿಸಬೇಕಾಗಿದ್ದರಿಂದ ಭಾನುವಾರ, ಸೋಮವಾರ ಮತ್ತು ಶನಿವಾರವನ್ನು ಹೊರಗಿಡಲಾಯಿತು, ಚರ್ಚ್ ಗೆ ಹೋಗಲು ಅನುಕೂಲವಾಗಲು ಈ ನಿರ್ಧಾರ ಕೈಗೊಳ್ಳಲಾಯಿತು. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹತ್ತಿರದ ಪಟ್ಟಣಗಳು ಮತ್ತು ನಗರಗಳಿಗೆ ಪ್ರಯಾಣಿಸುವ ಹಿನ್ನಲೆಯಲ್ಲಿ ದೇಶದಾದ್ಯಂತ ಜನಪ್ರಿಯ ಮಾರುಕಟ್ಟೆ ದಿನವಾದ ಕಾರಣ ಬುಧವಾರವನ್ನು ಹೊರಗಿಡಲಾಯಿತು.
ಅಂತಿಮವಾಗಿ, ಕಾಂಗ್ರೆಸ್ ನವೆಂಬರ್ ತಿಂಗಳ ಮೊದಲ ಸೋಮವಾರದ ನಂತರ ಮೊದಲ ಮಂಗಳವಾರ ಸೂಕ್ತ ಎಂಬುದನ್ನು ನಿರ್ಧರಿಸಿತು. ಇದು ನವೆಂಬರ್ 1 ರಂದು ಚುನಾವಣಾ ದಿನ ಬೀಳದಂತೆ ತಡೆಯಲು, ಅಲ್ಲದೇ ಕ್ರಿಶ್ಚಿಯನ್ನರು ಎಲ್ಲಾ ಸಂತರ ದಿನವನ್ನು ಆಚರಿಸಲು ಮತ್ತು ವ್ಯಾಪಾರಿಗಳು ಸಾಮಾನ್ಯವಾಗಿ ಹಿಂದಿನ ತಿಂಗಳಿನಿಂದ ತಮ್ಮ ಲೆಕ್ಕ ಪರಿಶೋಧನೆಗಳನ್ನು ಪೂರ್ಣಗೊಳಿಸಿರುತ್ತಾರೆ ಎಂಬ ಕಾರಣಕ್ಕೆ ತೀರ್ಮಾನ ಕೈಗೊಳ್ಳಲಾಯಿತು.