alex Certify ಧೈರ್ಯವಿದ್ದರೆ ಯುಪಿ ಚುನಾವಣೆಗೆ ಬ್ರಾಹ್ಮಣ ಅಭ್ಯರ್ಥಿಯನ್ನು ಸಿಎಂ ಎಂದು ಘೋಷಿಸಿ…! ಬಿಜೆಪಿಗೆ ಕಾಂಗ್ರೆಸ್ ಸವಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೈರ್ಯವಿದ್ದರೆ ಯುಪಿ ಚುನಾವಣೆಗೆ ಬ್ರಾಹ್ಮಣ ಅಭ್ಯರ್ಥಿಯನ್ನು ಸಿಎಂ ಎಂದು ಘೋಷಿಸಿ…! ಬಿಜೆಪಿಗೆ ಕಾಂಗ್ರೆಸ್ ಸವಾಲು

Why Not Project Brahmin CM?: Cong's Latest Brahmin Outreach Ahead of UP Polls

ತೆರೆಮರೆಯಲ್ಲಿ ಬ್ರಾಹ್ಮಣ ಸಮುದಾಯದ ಮತಗಳನ್ನು ಸೆಳೆಯಲು ರಾಮ ಮಂದಿರ, ಹಿಂದೂ ಜಾಗೃತಿ ಬಳಸಿಕೊಳ್ಳುವ ಬಿಜೆಪಿಯು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬ್ರಾಹ್ಮಣ ಅಭ್ಯರ್ಥಿಯನ್ನೇ ಸಿಎಂ ಎಂದು ಘೋಷಿಸಲಿ ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಲಲನ್ ಕುಮಾರ್ ಸವಾಲೆಸೆದಿದ್ದಾರೆ.

ಇದುವರೆಗೂ ಉತ್ತರಪ್ರದೇಶದಲ್ಲಿ ಅತಿಹೆಚ್ಚಿನ ಬ್ರಾಹ್ಮಣ ಮುಖ್ಯಮಂತ್ರಿಗಳನ್ನು ಕೊಟ್ಟಿರುವುದು ಕಾಂಗ್ರೆಸ್ ಮಾತ್ರವೇ. ಉಳಿದ ಪಕ್ಷಗಳು ಬ್ರಾಹ್ಮಣರ ಮತಕ್ಕಾಗಿ ಡ್ರಾಮಾಗಳನ್ನು ಮಾಡುತ್ತಿವೆ ಎಂದು ಕುಮಾರ್ ಕಿಡಿಕಾರಿದ್ದಾರೆ.

ಉತ್ತರಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯ ಉದ್ದೇಶಿಸಿ ಸರಣಿ ಸಮ್ಮೇಳನಗಳನ್ನು ಹಮ್ಮಿಕೊಳ್ಳಲು ಬಿಜೆಪಿ ಹಾಗೂ ಬಿಎಸ್‍ಪಿ ಚಿಂತಿಸಿವೆ. ಈ ಹಿನ್ನೆಲೆಯಲ್ಲಿ ತಿರುಗೇಟು ಕೊಟ್ಟ ಲಲನ್ ಕುಮಾರ್, ಬಿಜೆಪಿ, ಎಸ್‍ಪಿ, ಬಿಎಸ್‍ಪಿ ಪಕ್ಷಗಳು ಚುನಾವಣೆ ವೇಳೆ ಬ್ರಾಹ್ಮಣರ ಪರ ಭಾರಿ ಒಲವು ಪ್ರದರ್ಶಿಸುತ್ತಿವೆ. ಆದರೆ ಇದುವರೆಗೂ ಆರು ಮಂದಿ ಬ್ರಾಹ್ಮಣ ಸಿಎಂಗಳನ್ನು ಕಾಂಗ್ರೆಸ್ ರಾಜ್ಯಕ್ಕೆ ನೀಡಿದೆ ಎನ್ನುವುದನ್ನು ಮರೆಯಬೇಡಿ ಎಂದು ಜನತೆಗೆ ಕಿವಿಮಾತು ಹೇಳಿದ್ದಾರೆ.

ಒಂದು ಕೋಟಿ ಕೋವಿಡ್ ಲಸಿಕೆ ನೀಡುವ ಮೂಲಕ ದಾಖಲೆ ಮಾಡಿದೆ ಈ ಜಿಲ್ಲೆ

ದಲಿತರು, ಹಿಂದುಳಿದವರ ಪರವಾದ ಪಕ್ಷ ಎಂದು ಬಿಂಬಿಸಿಕೊಂಡಿರುವ ಬಹುಜನ ಸಮಾಜ ಪಕ್ಷವು (ಬಿಎಸ್‍ಪಿ) ಜು. 23ರಿಂದ ಅಯೋಧ್ಯೆಯಲ್ಲಿ ಸರಣಿ ಸಮ್ಮೇಳನಗಳನ್ನು ಆರಂಭಿಸಿದೆ. ಬ್ರಾಹ್ಮಣ ಸಮುದಾಯದವರೇ ಆದ ಬಿಎಸ್‍ಪಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಸಮ್ಮೇಳನಗಳ ನೇತೃತ್ವ ವಹಿಸಿದ್ದಾರೆ. ಬಿಜೆಪಿ ಕೂಡ ಸೆ. 20ಕ್ಕೆ ಸಮ್ಮೇಳನ, ಮನೆಗಳ ಭೇಟಿಯ ಕಾರ್ಯಕ್ರಮ ಮುಕ್ತಾಯಗೊಳಿಸಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...