
ನಿಮ್ಮ ತೂಕವನ್ನು ಆರೋಗ್ಯಪೂರ್ಣ ಮಟ್ಟದಲ್ಲಿ ಇಳಿಸಿಕೊಂಡರೆ ನಿಮ್ಮ ಆಪ್ತರೆಲ್ಲಾ ನಿಮ್ಮನ್ನು ಶ್ಲಾಘಿಸುತ್ತಾರೆ. ಆದರೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಅನ್ ತೂಕ ಇಳಿಸಿಕೊಂಡರೆ ಆತನ ಬಗ್ಗೆ ಇಡೀ ದೇಶವೇ ತಲೆ ಕೆಡಿಸಿಕೊಳ್ಳತೊಡಗುತ್ತದೆ.
ವೈರಿ ದೇಶ ದಕ್ಷಿಣ ಕೊರಿಯಾದಲ್ಲಿ ಕಿಮ್ ಬಗ್ಗೆ ಯಾವಾಗಲೂ ಮಾತುಕತೆಗಳು ನಡೆಯುತ್ತಲೇ ಇರುತ್ತವೆ. 37 ವರ್ಷದ ಈ ನಾಯಕನ ಆರೋಗ್ಯದ ಬಗ್ಗೆ ಈಗ ದಕ್ಷಿಣ ಕೊರಿಯಾದಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚಿನ ದಿನಗಳಲ್ಲಿ ಪ್ರಕಟಗೊಳ್ಳುತ್ತಿರುವ ಕಿಮ್ ಅವರ ಚಿತ್ರದಲ್ಲಿ ಅವರ ದೇಹ ತೂಕದಲ್ಲಿ ಗಮನಾರ್ಹ ಬದಲಾವಣೆ ಕಂಡುಬರುತ್ತಿದ್ದು, ಅವರು ದೊಡ್ಡ ಮಟ್ಟದಲ್ಲಿ ತೂಕ ಇಳಿಸಿಕೊಂಡವರಂತೆ ಕಾಣುತ್ತಾರೆ. ಕಿಮ್ ಮುಖ ಸಾಕಷ್ಟು ಸಣ್ಣಗಾದಂತೆ ಕಾಣುತ್ತಿದೆ.
ಬ್ಯಾಂಕ್ ಲೂಟಿ ಮಾಡಿದ ದುಡ್ಡಿನಲ್ಲಿ ಹೆತ್ತವರಿಗೆ ಉಡುಗೊರೆ..!
5 ಅಡಿ 8 ಇಂಚು ಉದ್ದವಿರುವ ಕಿಮ್ 140 ಕೆಜಿ ತೂಕವಿದ್ದರು. ಅವರು ಏನಿಲ್ಲವೆಂದರೂ 10-20 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಿಮ್‌ರ ತೂಕ ಹೀಗೆ ಇಳಿದಿರುವುದು ಬಹುಶಃ ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ಅವರೇ ಹಾಗೆ ಮಾಡಿಕೊಂಡಿರಬಹುದು ಎಂದು ದಕ್ಷಿಣ ಕೊರಿಯಾದ ರಾಷ್ಟ್ರೀಯ ಐಕ್ಯತಾ ವಿವಿಯ ವಿಶ್ಲೇಷಕರೊಬ್ಬರು ಅಭಿಪ್ರಾಯ ಪಡುತ್ತಾರೆ.