alex Certify ಅಲ್ಯುಮಿನಿಯಂ ಕ್ಯಾನ್‌ ಬಳಸಿ ಡ್ರೆಸ್​: ನೆಟ್ಟಿಗರ ಹೃದಯ ಗೆದ್ದ ಮಿಸ್​ ಥಾಯ್ಲೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಯುಮಿನಿಯಂ ಕ್ಯಾನ್‌ ಬಳಸಿ ಡ್ರೆಸ್​: ನೆಟ್ಟಿಗರ ಹೃದಯ ಗೆದ್ದ ಮಿಸ್​ ಥಾಯ್ಲೆಂಡ್

ನ್ಯೂ ಓರ್ಲಿಯನ್ಸ್‌: 71ನೇ ಮಿಸ್ ಯೂನಿವರ್ಸ್ ಸ್ಪರ್ಧೆ ಅಮೆರಿಕದ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದಿದೆ. ಈ ಸ್ಪರ್ಧೆಗೂ ಮುನ್ನ ಹಲವು ಸುಂದರಿಯರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಗಳಲ್ಲಿ ಬಗೆಬಗೆ ಬಟ್ಟೆಗಳನ್ನು ಧರಿಸಿ ಫೋಟೋ ಶೂಟ್ ಮಾಡಿಸಿ​ ಅಪ್​ಲೋಡ್​ ಮಾಡಿದ್ದಾರೆ.

ಅವುಗಳಲ್ಲಿ ಈಗ ಗಮನ ಸೆಳೆದಿರುವುದು ಮಿಸ್ ಥಾಯ್ಲೆಂಡ್​. ಥಾಯ್ಲೆಂಡ್​ ಸುಂದರಿ ಅನ್ನಾ ಸುಯಾಂಗಮ್ ಆಕೆ ಧರಿಸುವ ಬಟ್ಟೆಯ ಮೂಲಕ ಬಹಳ ವೈರಲ್​ ಆಗಿದ್ದಾಳೆ. ಅಷ್ಟಕ್ಕೂ ಈಕೆ ಸಾಮಾಜಿಕ ಜಾಲತಾಣದಲ್ಲಿ ಇಷ್ಟೆಲ್ಲಾ ಸುದ್ದಿಯಾಗಲು ಕಾರಣ, ಈಕೆ ಧರಿಸಿರುವ ಗೌನ್​.

ಕುಡಿದು ಬಿಸಾಡಿದ ಅಲ್ಯುಮಿನಿಯಂ ಕ್ಯಾನ್‌ಗಳನ್ನು ಮರುಬಳಸಿ ಸುಂದರವಾದ ಗೌನ್ ತಯಾರಿಸಿದ್ದು, ಇದನ್ನು ಆಕೆ ಧರಿಸಿಕೊಂಡಿದ್ದಾಳೆ.

ಜೊತೆಗೆ ಇದರ ಮಹತ್ವವನ್ನೂ ಆಕೆ ಹೇಳಿಕೊಂಡಿದ್ದಾಳೆ. ಅದೇನೆಂದರೆ ಈಕೆಯ ತಂದೆ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಬಾಲ್ಯದಿಂದ ಅವರ ಆ ಕೆಲಸದ ಸಂಬಳದಿಂದಲೇ ಮಕ್ಕಳನ್ನು ಬೆಳೆಸಿದ್ದಾರೆ. ಆದ್ದರಿಂದ ತಾನು ಮರುಬಳಕೆಯ ವಸ್ತುಗಳಿಂದ ತಯಾರಿಸಿದ ಗೌನ್ ಧರಿಸಿ, ಮಿಸ್ ಯೂನಿವರ್ಸ್​ನಲ್ಲಿ ಪ್ರತಿನಿಧಿಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

ಇದನ್ನು ಕೇಳಿ ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಕಸದಿಂದ ರಸ ಮಾಡಬಹುದು. ಪ್ರತಿಯೊಂದು ಕಸಕ್ಕೂ ತನ್ನದೇ ಆದ ಮೌಲ್ಯವಿದೆ ಎಂದು ಈ ಸುಂದರಿ ಬರೆದುಕೊಂಡು ವಿಶ್ವದ ಮನ ಗೆದ್ದಿದ್ದಾಳೆ.

https://twitter.com/Iovemeharder/status/1613405716563333121?ref_src=twsrc%5Etfw%7Ctwcamp%5Etweetembed%7Ctwterm%5E161340571

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...