ಬೆಂಗಳೂರು : ಹೆಣದ ಮೇಲೆ ಹಣ ಮಾಡುವ ದುರ್ಬುದ್ಧಿ ಬಂದಿದ್ದೇಕೆ? ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ 40 ಸಾವಿರ ಕೋಟಿ ಹಗರಣದ ಆರೋಪವನ್ನು ಸ್ವತಃ ಬಿಜೆಪಿಯ ಹಿರಿಯ ನಾಯಕರೇ ಮಾಡಿದ್ದಾರೆ. ಈ ಬಗ್ಗೆ ಉತ್ತರಿಸುವ ಹೊಣೆಗಾರಿಕೆ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಅಶೋಕ್ , ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರದ್ದು. 40 ಸಾವಿರ ಕೋಟಿಯಲ್ಲಿ ಯಾರ ಪಾಲೆಷ್ಟು? ಹೆಣದ ಮೇಲೆ ಹಣ ಮಾಡುವ ದುರ್ಬುದ್ಧಿ ಬಂದಿದ್ದೇಕೆ? ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
45 ರೂಪಾಯಿಯ ಒಂದು ಮಾಸ್ಕಿಗೆ 480 ರೂಪಾಯಿ ಬಿಲ್,. ಒಂದು ದಿನಕ್ಕೆ ಒಂದು ಬೆಡ್ ಗೆ 20 ಸಾವಿರ ಬಾಡಿಗೆ, ದಿನಕ್ಕೆ 20 ಸಾವಿರ ಬಾಡಿಗೆಯ 10 ಸಾವಿರ ಹಾಸಿಗೆಗಳು! ಆ 10 ಸಾವಿರ ಬಾಡಿಗೆ ಹಾಸಿಗೆಗಳ ಕ್ವರಂಟೈನ್ ಕೇಂದ್ರ ಬಳಕೆಯೇ ಆಗಿಲ್ಲ! ಕ್ವರಂಟೈನ್ ಸೆಂಟರ್ ಹೆಸರಲ್ಲಿ, ಮಾಸ್ಕುಗಳಲ್ಲಿ ಲೂಟಿ ಹೊಡೆದ ಹಣಕ್ಕೆ ಎಷ್ಟು ಸೊನ್ನೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.