alex Certify ಮೂತ್ರದ ಬಣ್ಣ ಏಕೆ ಹಳದಿ ? ಇದರ ಹಿಂದಿರುವ ಕಾರಣ ಬಹಿರಂಗಪಡಿಸಿದ್ದಾರೆ ವಿಜ್ಞಾನಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂತ್ರದ ಬಣ್ಣ ಏಕೆ ಹಳದಿ ? ಇದರ ಹಿಂದಿರುವ ಕಾರಣ ಬಹಿರಂಗಪಡಿಸಿದ್ದಾರೆ ವಿಜ್ಞಾನಿಗಳು…!

ಮೂತ್ರದ ಬಣ್ಣ ಹಳದಿಯಾಗಿರುತ್ತದೆ. ಈ ಕಲರ್‌ನಲ್ಲಿ ಏಕಿರುತ್ತದೆ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಬಂದಿರಬಹುದು. ಪುಸ್ತಕಗಳಲ್ಲಿ, ಇಂಟರ್ನೆಟ್‌ನಲ್ಲಿ ತೃಪ್ತಿದಾಯಕ ಉತ್ತರ ಸಿಕ್ಕಿರಲಿಕ್ಕಿಲ್ಲ. ಸ್ವತಃ ವಿಜ್ಞಾನಿಗಳು ಈ ಪ್ರಶ್ನೆಗೆ ಉತ್ತರವನ್ನು ಬಹಳ ಸಮಯದಿಂದ ಹುಡುಕುತ್ತಿದ್ದಾರೆ. ಕೊನೆಗೂ ಈ ಕುತೂಹಲಕ್ಕೆ ತೆರೆಬಿದ್ದಿದೆ. ಹೊಸ ಅಧ್ಯಯನವು ಈ ರಹಸ್ಯವನ್ನು ಬಯಲು ಮಾಡಿದೆ.

ನೀರು ಕೂಡ ಕಾರಣ

ವಾಸ್ತವವಾಗಿ ಮೂತ್ರದ ಹಳದಿ ಬಣ್ಣದಲ್ಲಿರಲು ಹಲವು ಕಾರಣಗಳಿವೆ. ಕಡಿಮೆ ನೀರು ಕುಡಿಯುವುದು ಪ್ರಮುಖ ಕಾರಣ. ಚೆನ್ನಾಗಿ ನೀರು ಕುಡಿದರೆ ಮೂತ್ರ ನೀರಿನ ಬಣ್ಣದಲ್ಲಿಯೇ ಇರುತ್ತದೆ. ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಬ್ರಾಟ್ಲಿ ಹಾಲ್ ಮತ್ತು ಅವರ ತಂಡವು ಮೂತ್ರದ ಬಣ್ಣ ಏಕೆ ಹಳದಿಯಾಗಿದೆ ಎಂಬುದನ್ನು ಅಧ್ಯಯನದಲ್ಲಿ ಕಂಡುಹಿಡಿದಿದೆ.

ಮೂತ್ರದಲ್ಲಿ ನೀರಿನೊಂದಿಗೆ ತ್ಯಾಜ್ಯ ಬರುತ್ತದೆ

ಮಾನವನ ಮೂತ್ರವು ಕಿಡ್ನಿ ಮತ್ತು ರಕ್ತದಿಂದ ಫಿಲ್ಟರ್ ಮಾಡಿದ ತ್ಯಾಜ್ಯವನ್ನು ಹೊಂದಿರುತ್ತದೆ. ವಿಶೇಷವಾಗಿ ಸತ್ತ ಕೆಂಪು ರಕ್ತ ಕಣಗಳು ಇದರಲ್ಲಿರುತ್ತವೆ. ಈ ಜೀವಕೋಶಗಳು ಹಿಮೋಗ್ಲೋಬಿನ್ ಮೂಲಕ ರಕ್ತಕ್ಕೆ ಆಮ್ಲಜನಕವನ್ನು ತಲುಪಿಸಲು ಕೆಲಸ ಮಾಡುತ್ತವೆ. ಈ ಕೆಂಪು ಕಣಗಳು 6 ತಿಂಗಳ ಜೀವಿತಾವಧಿಯನ್ನು ಹೊಂದಿರುತ್ತವೆ. ಕೆಂಪು ಕಣಗಳು ಸತ್ತಾಗ ಹೀಮ್ ಎಂಬ ವಸ್ತುವನ್ನು ಉತ್ಪತ್ತಿ ಮಾಡುತ್ತವೆ. ಈ ಹೀಮ್ ಮೂತ್ರವು ಹಳದಿ ಬಣ್ಣಕ್ಕೆ ತಿರುಗಲು ಕಾರಣವಾಗುತ್ತದೆ.

ಮೂತ್ರದ ಹಳದಿ ಬಣ್ಣಕ್ಕೆ ದೊಡ್ಡ ಕಾರಣವೆಂದರೆ ಬಿಲಿರುಬಿನ್ ರಿಡಕ್ಟೇಸ್ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಬಿಲಿರುಬಿನ್‌, ಚಯಾಪಚಯ ಕ್ರಿಯೆಗೆ ಕಾರಣವಾದ ಕಿಣ್ವವಾಗಿದೆ. ಇದು ಕೆಂಪು ರಕ್ತ ಕಣಗಳಿಂದ ಹೀಮ್ ಅನ್ನು ಒಡೆಯುವ ಹಳದಿ ವರ್ಣದ್ರವ್ಯವಾಗಿದೆ. ರಕ್ತ ಕಣಗಳು ಆರು ತಿಂಗಳ ಜೀವನವನ್ನು ಪೂರ್ಣಗೊಳಿಸಿದಾಗ, ಅವು ಗಾಢವಾದ ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ಇದನ್ನು ಬಿಲಿರುಬಿನ್ ಎಂದು ಕರೆಯಲಾಗುತ್ತದೆ. ಕೆಲವು ರಾಸಾಯನಿಕ ಪ್ರತಿಕ್ರಿಯೆಗಳು ಹೊಟ್ಟೆಯಲ್ಲಿ ನಡೆಯುತ್ತವೆ, ಅದು ಬೈಲಿರುಬಿನ್ ಅನ್ನು ಯುರೋಬಿಲಾನ್ ಅಣುಗಳಾಗಿ ಪರಿವರ್ತಿಸುತ್ತದೆ. ಆಮ್ಲಜನಕದ ಉಪಸ್ಥಿತಿಯಲ್ಲಿ ಈ ಅಣು ಹಳದಿ ಬಣ್ಣಕ್ಕೆ ತಿರುಗುತ್ತದೆ.

ಹೊಟ್ಟೆಯ ಸೂಕ್ಷ್ಮಾಣುಜೀವಿಗಳನ್ನು ಅಧ್ಯಯನ ಮಾಡುವುದು ತುಂಬಾ ಕಷ್ಟದ ಕೆಲಸ ಎಂದು ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಹೇಳುತ್ತಾರೆ. ಅದಕ್ಕಾಗಿಯೇ ಇದನ್ನು ವಿಶ್ಲೇಷಣೆ ಮಾಡಲು ದೀರ್ಘಾವಧಿಯ ಅಗತ್ಯವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...