alex Certify ಸಕ್ಕರೆ ತಿನ್ನುವುದು ಆರೋಗ್ಯಕ್ಕೇಕೆ ಹಾನಿಕರ…….? ಇಲ್ಲಿದೆ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆ ತಿನ್ನುವುದು ಆರೋಗ್ಯಕ್ಕೇಕೆ ಹಾನಿಕರ…….? ಇಲ್ಲಿದೆ ಸಂಪೂರ್ಣ ವಿವರ

ಸಕ್ಕರೆ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಹುತೇಕ ಎಲ್ಲರೂ ಇಷ್ಟಪಡುವಂತಹ ಪದಾರ್ಥ. ಸಕ್ಕರೆಯ ಸಿಹಿ ರುಚಿ ನಮ್ಮ ಬಾಯಿಯಲ್ಲಿ ವಿಭಿನ್ನ ಭಾವನೆಯನ್ನು ಉಂಟುಮಾಡುತ್ತದೆ. ಆದರೆ ಅತಿಯಾದ ಸಕ್ಕರೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ನಿತ್ಯದ ಆಹಾರದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಸಕ್ಕರೆಯ ಬದಲು ಇತರ ಆರೋಗ್ಯಕರ ಆಯ್ಕೆಗಳನ್ನು ಆರಿಸಿಕೊಳ್ಳಬೇಕು. ಇದರ ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಸಕ್ಕರೆಯ ದುಷ್ಪರಿಣಾಮಗಳನ್ನು ತಪ್ಪಿಸಬಹುದು. ಅಷ್ಟಕ್ಕೂ ಸಕ್ಕರೆ ಸೇವನೆಯಿಂದ ಏನಾಗುತ್ತದೆ? ಅದರ ದುಷ್ಪರಿಣಾಮಗಳೇನು ಎಂದು ತಿಳಿಯೋಣ.

ಸಕ್ಕರೆ ಎಂದರೇನು?

ಸಕ್ಕರೆ ನೈಸರ್ಗಿಕವಾಗಿ ಕಂಡುಬರುವ ಕಾರ್ಬೋಹೈಡ್ರೇಟ್. ಇದನ್ನು ಮುಖ್ಯವಾಗಿ ಕಬ್ಬು ಮತ್ತು ಸಕ್ಕರೆ ಬೀಟ್‌ನಿಂದ ಹೊರತೆಗೆಯಲಾಗುತ್ತದೆ. ನಮ್ಮ ದೇಹಕ್ಕೆ ಶಕ್ತಿಯನ್ನು ನೀಡಲು ಸಕ್ಕರೆ ಅವಶ್ಯಕ, ಆದರೆ ಅದರ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ.

ಸಕ್ಕರೆಯ ಅಡ್ಡಪರಿಣಾಮಗಳು

ಬೊಜ್ಜು: ಅತಿಯಾದ ಸಕ್ಕರೆ ಸೇವನೆ ಬೊಜ್ಜಿಗೆ ಪ್ರಮುಖ ಕಾರಣ. ಸಕ್ಕರೆಯಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ, ಇದು ತೂಕವನ್ನು ಹೆಚ್ಚಿಸುತ್ತದೆ.

ಮಧುಮೇಹ: ಅತಿಯಾದ ಸಕ್ಕರೆ ಸೇವನೆಯು ಮಧುಮೇಹದ ಅಪಾಯವನ್ನು ಕೂಡ ಹೆಚ್ಚಿಸುತ್ತದೆ. ಸಕ್ಕರೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ, ಇದು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

ಹೃದ್ರೋಗ: ಅತಿಯಾದ ಸಕ್ಕರೆ ಸೇವನೆಯು ಹೃದ್ರೋಗಗಳ ಅಪಾಯವನ್ನು ಸಹ ಹೆಚ್ಚಿಸುತ್ತದೆ. ಸಕ್ಕರೆ ಕೆಟ್ಟ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಹೃದಯಕ್ಕೆ ಹಾನಿಕಾರಕವಾಗಿದೆ.

ಹಲ್ಲಿನ ಸಮಸ್ಯೆಗಳು: ಅತಿಯಾದ ಸಕ್ಕರೆ ಸೇವನೆಯು ಹಲ್ಲಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಸಕ್ಕರೆ ಬಾಯಿಯಲ್ಲಿ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಇದು ಕುಳಿಗಳು ಮತ್ತು ವಸಡು ಕಾಯಿಲೆಗೆ ಕಾರಣವಾಗಬಹುದು.

ಶಕ್ತಿಯ ಮಟ್ಟದಲ್ಲಿ ಇಳಿಕೆ: ಸಕ್ಕರೆಯನ್ನು ಸೇವಿಸಿದ ನಂತರ, ಆರಂಭದಲ್ಲಿ ಶಕ್ತಿಯ ಮಟ್ಟವು ಹೆಚ್ಚಾಗುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಅದು ಕಡಿಮೆಯಾಗುತ್ತದೆ.

ಚರ್ಮದ ಸಮಸ್ಯೆಗಳು: ಅತಿಯಾದ ಸಕ್ಕರೆ ಸೇವನೆಯು ಮೊಡವೆ ಮತ್ತು ಸುಕ್ಕುಗಳಂತಹ ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು.

ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದು ಹೇಗೆ?

ಸೋಡಾ, ಜ್ಯೂಸ್ ಮತ್ತು ಇತರ ಸಿಹಿಯಾದ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಿ. ಸಿಹಿತಿಂಡಿಗಳು, ಚಾಕೊಲೇಟ್‌ ಮತ್ತು ಇತರ ಸಿಹಿ ಆಹಾರಗಳಿಂದ ಆದಷ್ಟು ದೂರವಿರಿ. ಹಣ್ಣುಗಳು ನೈಸರ್ಗಿಕ ಸಿಹಿಯನ್ನು ಹೊಂದಿರುತ್ತವೆ. ಹಾಗಾಗಿ ಹಣ್ಣುಗಳ ಸೇವನೆಯನ್ನು ಹೆಚ್ಚಿಸುವ ದೇಹಕ್ಕೆ ಬೇಕಾದ ಸಿಹಿಯ ಅಗತ್ಯವನ್ನು ಪೂರೈಸಬಹುದು.

ಹೊರಗಿನ ಆಹಾರದಲ್ಲಿ ಸಕ್ಕರೆ ಹೆಚ್ಚಾಗಿ ಇರುತ್ತದೆ. ಆದ್ದರಿಂದ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ. ಸಕ್ಕರೆಯ ಬದಲಿಗೆ ಜೇನುತುಪ್ಪ, ಬೆಲ್ಲ ಅಥವಾ ಸ್ಟೀವಿಯಾವನ್ನು ಅಲ್ಪ ಪ್ರಮಾಣದಲ್ಲಿ ಬಳಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...