ಬ್ರಿಟನ್‌ನಲ್ಲಿ’ಎನ್‌ಎಚ್‌ಎಸ್ ಕೋವಿಡ್ ಪಾಸ್’ ಎಂದು ಕರೆಯಲಾಗುವ ಡಿಜಿಟಲ್ ಮಾಹಿತಿಯನ್ನು ಲಸಿಕೆ ಪಡೆದ ಬಳಿಕ ಕೊರೊನಾ ಟೆಸ್ಟ್‌ನಲ್ಲಿ ನೆಗೆಟಿವ್ ವರದಿ ಬಂದರೆ ಮಾತ್ರವೇ ನೀಡಲಾಗುತ್ತದೆ. ಲಸಿಕೆ ಪಡೆದ 24 ಗಂಟೆಗಳ ನಂತರ ಮಾತ್ರವೇ ಎನ್‌ಎಚ್‌ಎಸ್ (ಆರೋಗ್ಯ ಇಲಾಖೆ) ವೆಬ್‌ಸೈಟ್‌ನಲ್ಲಿ ಪಾಸ್ ಲಭ್ಯವಾಗುತ್ತದೆ.
ಲಸಿಕೆ ಪಡೆದ ಬಳಿಕ ಆರ್‌ಟಿ-ಪಿಸಿಆರ್ ಟೆಸ್ಟ್‌ನಲ್ಲಿ ಕೊರೊನಾ ಪಾಸಿಟಿವ್ ಎಂದು ಬಂದರೆ, ಪಾಸ್‌ನ ಕಾಲಾವಧಿ ಕೇವಲ 48 ಗಂಟೆಯೊಳಗೆ ಸಮಾಪ್ತಿಗೊಳ್ಳುತ್ತದೆ. ಅದೇ, ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಬಂದರೆ, 30 ದಿನಗಳವರೆಗೆ ಪಾಸ್ ಮಾನ್ಯತೆ ಹೊಂದಿರುತ್ತದೆ. ಲಸಿಕೆಯ ಡೋಸ್ ಪಡೆದ ಪ್ರತಿ 30 ದಿನಗಳಿಗೊಮ್ಮೆ ಎನ್‌ಎಚ್‌ಎಸ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಿಸಿಕೊಂಡು, ವರದಿ ಅನ್ವಯ ಪಾಸ್ ಅವಧಿ ವಿಸ್ತರಣೆ ಮಾಡಿಕೊಳ್ಳುತ್ತಿರಬೇಕಿದೆ.
ಅಮೆರಿಕ ಪ್ರವಾಸದಲ್ಲಿ ಪ್ರಧಾನಿ: ವಿದೇಶಿ ನಾಯಕರಿಗೆ ಅಮೂಲ್ಯ ಉಡುಗೊರೆ ನೀಡಿದ ‘ನಮೋ’
ಇನ್ನು, ಐರೋಪ್ಯ ಒಕ್ಕೂಟದಲ್ಲಿ ’ಡಿಜಿಟಲ್ ಕೋವಿಡ್ ಸರ್ಟಿಫಿಕೇಟ್’ ಅನ್ನು ಲಸಿಕೆ ಪಡೆಯದೆಯೇ ಆರ್‌ಟಿ-ಪಿಸಿಆರ್ ಟೆಸ್ಟ್ ನೆಗೆಟಿವ್ ಇದ್ದರೂ ನೀಡಲಾಗುತ್ತದೆ. ಇಲ್ಲವೇ ಕೋವಿಡ್‌ನಿಂದ ಬಳಲಿ ಚೇತರಿಕೆ ಕಂಡವರಿಗೂ ನೀಡಲಾಗುತ್ತಿದೆ. ಐರೋಪ್ಯ ಒಕ್ಕೂಟದ ಯಾವುದೇ ದೇಶ, ನಗರಕ್ಕೆ ಪ್ರಯಾಣಿಸಲು ಈ ಸರ್ಟಿಫಿಕೇಟ್ ಕಡ್ಡಾಯವಾಗಿದೆ.
ಅಮೆರಿಕದಲ್ಲಿ’ವ್ಯಾಕ್ಸಿನ್ ಅಡ್ಮಿನಿಸ್ಪ್ರೇಷನ್ ಮ್ಯಾನೇಜ್‌ಮೆಂಟ್ ಸಿಸ್ಟಂ’ (ವ್ಯಾಮ್ಸ್) ಎಂಬ ವೆಬ್ ಪೋರ್ಟಲ್‌ನಲ್ಲಿ ಲಸಿಕೆ ಪಡೆದವರ ಮಾಹಿತಿ ಸಂಗ್ರಹವಾಗಿರುತ್ತದೆ. ಬಹುತೇಕ ಭಾರತದಲ್ಲಿನ ಕೋವಿನ್ ವೆಬ್‌ಸೈಟ್ ಮಾದರಿಯಲ್ಲೇ ಇದು ಕೂಡ ಇದೆ.
ಕೆನಡಾದಲ್ಲಿ ಮಾತ್ರ, ಕೆಲವೇ ರಾಜ್ಯಗಳು ಹಾಗೂ ಪ್ರಾಂತ್ಯಗಳು ತಮ್ಮ ಆಂತರಿಕ ಸುರಕ್ಷತೆ ಖಾತ್ರಿಗಾಗಿ ಲಸಿಕೆ ಪಡೆದ ದಾಖಲೆಯಾಗಿ ಸರ್ಟಿಫಿಕೇಟ್ ಕೊಡುತ್ತಿವೆ. ಇದಕ್ಕೆ ವ್ಯಾಕ್ಸಿನ್ ಪಾಸ್‌ಪೋರ್ಟ್ ಎಂದು ಕೂಡ ಕರೆಯಲಾಗುತ್ತಿದೆ. ಬೇರೆ ದೇಶಗಳಿಂದ ಬರುವವರು ಅರೈವ್‌ಕ್ಯಾನ್ ಎಂಬ ಆ್ಯಪ್‌ನಲ್ಲಿ ತಮ್ಮ ವ್ಯಾಕ್ಸಿನ್ ಸರ್ಟಿಫಿಕೇಟ್ ಅಪ್‌ಲೋಡ್ ಮಾಡಬೇಕಿದೆ.