alex Certify ಗೃಹ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ಸಚಿವರನ್ನು ಪ್ರಧಾನಿ ಮೋದಿ ಏಕೆ ಬದಲಾಯಿಸಿಲ್ಲ…..? ಇಲ್ಲಿದೆ ಅಸಲಿ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ಸಚಿವರನ್ನು ಪ್ರಧಾನಿ ಮೋದಿ ಏಕೆ ಬದಲಾಯಿಸಿಲ್ಲ…..? ಇಲ್ಲಿದೆ ಅಸಲಿ ಕಾರಣ

ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಈಗಾಗ್ಲೇ ಸಚಿವರುಗಳ ಖಾತೆ ವಿಂಗಡಣೆಯಾಗಿದೆ. ಸರ್ಕಾರದ ನಾಲ್ಕು ದೊಡ್ಡ ಸಚಿವಾಲಯಗಳಾದ ರಕ್ಷಣೆ, ಗೃಹ, ಹಣಕಾಸು ಮತ್ತು ವಿದೇಶಾಂಗದಲ್ಲಿ ಮೋದಿ ಯಾವುದೇ ಬದಲಾವಣೆ ಮಾಡಿಲ್ಲ. ಹಳೆಯ ಸಚಿವರುಗಳಿಗೇ ಮತ್ತೆ ಮಣೆ ಹಾಕಿದ್ದಾರೆ.

ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆ, ಅಮಿತ್ ಶಾಗೆ ಗೃಹ, ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಮತ್ತು ಜೈಶಂಕರ್ ಅವರಿಗೆ ವಿದೇಶಾಂಗ ಖಾತೆಯ ಜವಾಬ್ದಾರಿ ಮತ್ತೊಮ್ಮೆ ಸಿಕ್ಕಿದೆ. ಈ ಪ್ರಮುಖ ಖಾತೆಗಳ ಸಚಿವರುಗಳನ್ನು ಮೋದಿ ಏಕೆ ಬದಲಾವಣೆ ಮಾಡಿಲ್ಲ ಎಂಬುದು ಇಂಟ್ರೆಸ್ಟಿಂಗ್‌ ಸಂಗತಿ.

CCS ಸಮಿತಿ ಎಂದರೇನು?

ಭದ್ರತೆಯ ಕುರಿತ ಕ್ಯಾಬಿನೆಟ್ ಸಮಿತಿ (CCS) ದೇಶದ ಅತಿದೊಡ್ಡ ಸಮಿತಿ. ಪ್ರಧಾನಮಂತ್ರಿಗಳೇ ಇದರ ಅಧ್ಯಕ್ಷರು. ಈ ಸಮಿತಿಯು ರಾಷ್ಟ್ರೀಯ ಭದ್ರತೆಯ ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ರಕ್ಷಣಾ ಸಂಸ್ಥೆಗಳಲ್ಲಿ ಅಧಿಕಾರಿಗಳ ನೇಮಕಾತಿಯಿಂದ ಹಿಡಿದು ರಕ್ಷಣಾ ನೀತಿ ಮತ್ತು ವೆಚ್ಚ, ಭಾರತದ ಭದ್ರತೆಯ ಕುರಿತ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಇಲ್ಲಿ ತೆಗೆದುಕೊಳ್ಳಲಾಗುತ್ತದೆ. ರಕ್ಷಣೆ, ಗೃಹ,

ಹಣಕಾಸು ಮತ್ತು ವಿದೇಶಾಂಗ ಸಚಿವಾಲಯಗಳನ್ನು ಸಿಸಿಎಸ್‌ನಲ್ಲಿ ಸೇರಿಸಲಾಗಿದೆ.

CCS ಸಮಿತಿಯ ಕಾರ್ಯ

ಭಾರತದ ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಇದು ನೋಡಿಕೊಳ್ಳುತ್ತದೆ. ರಾಷ್ಟ್ರೀಯ ಭದ್ರತೆ ಹೆಚ್ಚಿಸಲು ತೆಗೆದುಕೊಳ್ಳಬೇಕಾದ ವಿವಿಧ ಕ್ರಮಗಳು, ಆಂತರಿಕ ಅಥವಾ ಬಾಹ್ಯ ಭದ್ರತಾ ಸನ್ನಿವೇಶಗಳ ಮೇಲೆ ಪ್ರಭಾವ ಬೀರಬಹುದಾದ ವಿದೇಶಾಂಗ ವ್ಯವಹಾರಗಳಲ್ಲಿನ ನೀತಿ ಹೀಗೆ ಅನೇಕ ವಿಷಯಗಳನ್ನು ಸಮಿತಿಯಲ್ಲಿ ಚರ್ಚಿಸಲಾಗುತ್ತದೆ. ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಇತರ ದೇಶಗಳೊಂದಿಗಿನ ಒಪ್ಪಂದಗಳು ಕೂಡ ಸಮಿತಿಯ ಅಡಿಯಲ್ಲೇ ಆಗುತ್ತವೆ. ಹಾಗಾಗಿ CCS ಸಚಿವಾಲಯವು ಸರ್ಕಾರಕ್ಕೆ ಬಹಳ ಮುಖ್ಯ.

ಪ್ರಮುಖ ಸಚಿವರುಗಳನ್ನೇಕೆ ಮೋದಿ ಬದಲಾಯಿಸಿಲ್ಲ?

ಪ್ರಮುಖ 4 ಸಚಿವಾಲಯಗಳಲ್ಲಿ ಯಾವುದೇ ಬದಲಾವಣೆ ಮಾಡದೆ, ಹಿಂದಿನ ನೀತಿಗಳನ್ನು ಮುಂದುವರಿಸಲಾಗುವುದು ಎಂದು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರವಾಗಿದ್ದರೂ, ನೀತಿಗಳು ಮತ್ತು ಸುಧಾರಣೆಗಳಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಈ ಮೂಲಕ ಖಚಿತಪಡಿಸಿದ್ದಾರೆ. ತಮ್ಮ ವಿಶ್ವಾಸಾರ್ಹರಿಗೆ ಪ್ರಮುಖ ಖಾತೆಗಳನ್ನು ಹಸ್ತಾಂತರಿಸುವ ಮೂಲಕ ಪ್ರಧಾನಿ ತಮ್ಮ

ಪ್ರಮುಖ 4 ಸಚಿವಾಲಯಗಳಲ್ಲಿ ಯಾವುದೇ ಬದಲಾವಣೆ ಮಾಡದೆ, ಹಿಂದಿನ ನೀತಿಗಳನ್ನು ಮುಂದುವರಿಸಲಾಗುವುದು ಎಂದು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರವಾಗಿದ್ದರೂ, ನೀತಿಗಳು ಮತ್ತು ಸುಧಾರಣೆಗಳಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಈ ಮೂಲಕ ಖಚಿತಪಡಿಸಿದ್ದಾರೆ. ತಮ್ಮ ವಿಶ್ವಾಸಾರ್ಹರಿಗೆ ಪ್ರಮುಖ ಖಾತೆಗಳನ್ನು ಹಸ್ತಾಂತರಿಸುವ ಮೂಲಕ ಪ್ರಧಾನಿ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಮೋದಿ ಈ ನಾಯಕರ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ.

ಅಮಿತ್ ಶಾ

ಚುನಾವಣಾ ತಂತ್ರದ ಚಾಣಕ್ಯ ಎಂದೇ ಪರಿಗಣಿಸಲ್ಪಟ್ಟಿರುವ ಅಮಿತ್ ಶಾ, ಹಿಂದಿನ ಸರ್ಕಾರದಲ್ಲಿ ಅತ್ಯುತ್ತಮ ಗೃಹ ಸಚಿವ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಬಾರಿಯೂ ಅವರಿಗೆ ಗೃಹ ಖಾತೆ ಸಿಕ್ಕಿದೆ. ಕಳೆದ ಹಲವು ದಶಕಗಳಿಂದ ನರೇಂದ್ರ ಮೋದಿಯವರ ಆಪ್ತರಾಗಿರುವ ಅಮಿತ್ ಶಾ, ಹೊಸ ಸರ್ಕಾರದ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಪ್ರಬಲ ಪಾತ್ರ ವಹಿಸಲಿದ್ದಾರೆ. ಕಳೆದ ಅಧಿಕಾರಾವಧಿಯಲ್ಲಿ ಜಮ್ಮು-ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಯ್ತು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಭಾರತೀಯ ದಂಡ ಸಂಹಿತೆಯಂತಹ ಅನೇಕ ಬದಲಾವಣೆಗಳನ್ನು ಶಾ ಮಾಡಿದ್ದಾರೆ.

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್ ಮೋದಿಯವರ ಮೊದಲ ಅವಧಿಯಲ್ಲಿ ಗೃಹ ಸಚಿವರಾಗಿದ್ದರೆ, ಎರಡನೇ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದರು. ಈಗ ಮತ್ತೆ ರಕ್ಷಣಾ ಇಲಾಖೆಯ ಹೊಣೆ ಹೊತ್ತಿದ್ದಾರೆ. ಸೇನೆಗಳ ಆಧುನೀಕರಣ ಮತ್ತು ರಕ್ಷಣಾ ಕ್ಷೇತ್ರದಲ್ಲಿನ ಸುಧಾರಣೆಗಳ ಜವಾಬ್ಧಾರಿ ಅವರ ಹೆಗಲೇರಿದೆ. ಮೂರು ಸೇನೆಗಳ ನಡುವೆ ಉತ್ತಮ ಸಮನ್ವಯಕ್ಕಾಗಿ ಜಂಟಿ ಥಿಯೇಟರ್ ಕಮಾಂಡ್ ರಚನೆಯ ವಿಷಯವೂ ನಿರ್ಣಾಯಕ ಹಂತದಲ್ಲಿದೆ.

ನಿರ್ಮಲಾ ಸೀತಾರಾಮನ್

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ರಕ್ಷಣಾ ಸಚಿವೆ ಮತ್ತು ಎರಡನೇ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಮತ್ತೊಮ್ಮೆ ವಿತ್ತ ಸಚಿವೆಯಾಗಿದ್ದಾರೆ. ಕೇಂದ್ರ ಹಣಕಾಸು ಸಚಿವರಾಗಿದ್ದ ಅವರ ಅವಧಿ ಪರಿಣಾಮಕಾರಿಯಾಗಿದೆ. ಕರೋನಾದಿಂದಾಗಿ ವಿಶ್ವದ ಪ್ರಮುಖ ರಾಷ್ಟ್ರಗಳ ಆರ್ಥಿಕತೆಗಳು ಕುಸಿದಿದ್ದ ಸಂದರ್ಭದಲ್ಲಿ, ಇಂಧನ ಮತ್ತು ಆಹಾರದ ಬಿಕ್ಕಟ್ಟು ಎದುರಾದಾಗಲೂ ಭಾರತವನ್ನು ಮುನ್ನಡೆಸಿದ ಖ್ಯಾತಿ ಅವರದ್ದು.

ನಿರ್ಮಲಾ ಸೀತಾರಾಮನ್‌ ಅವರ ಅದ್ಭುತ ಯೋಜನೆಗಳ ಪರಿಣಾಮವಾಗಿ ಭಾರತದ ಆರ್ಥಿಕತೆಯು ಸಾಂಕ್ರಾಮಿಕದ ವಿಷವರ್ತುಲದಲ್ಲಿ ಸಿಲುಕಿಕೊಳ್ಳಲಿಲ್ಲ. ಆದಾಯ ಸಂಗ್ರಹಣೆಯಲ್ಲಿ ನಿರಂತರ ಹೆಚ್ಚಳದೊಂದಿಗೆ, ವಿತ್ತೀಯ ಕೊರತೆಯ ಜೊತೆಗೆ ಸಾಲವು ಕಡಿಮೆಯಾಗಲು ಪ್ರಾರಂಭಿಸಿತು. ಭಾರತವನ್ನು ದುರ್ಬಲವೆಂದು ಪರಿಗಣಿಸಿದ್ದ ರೇಟಿಂಗ್ ಏಜೆನ್ಸಿಗಳು ಅದನ್ನು ವಿಶ್ವಾಸಾರ್ಹ ಮಾರುಕಟ್ಟೆ ಎಂದು ಕರೆಯಲು ಪ್ರಾರಂಭಿಸಿದವು.

ಎಸ್. ಜೈಶಂಕರ್

ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಎಸ್.ಜೈಶಂಕರ್ ಅವರ ಕಾರ್ಯವೈಖರಿಯಿಂದ ಪ್ರಭಾವಿತರಾದ ಮೋದಿ 2019ರಲ್ಲಿ ಎರಡನೇ ಬಾರಿಗೆ ಪ್ರಧಾನಿಯಾದಾಗ ಜೈಶಂಕರ್ ಅವರನ್ನು ವಿದೇಶಾಂಗ ಸಚಿವರನ್ನಾಗಿ ಮಾಡಿದರು. ಎಸ್.ಜೈಶಂಕರ್ 5 ವರ್ಷಗಳ ಕಾಲ ವಿದೇಶಾಂಗ ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಹಾಗಾಗಿ ಮತ್ತೊಮ್ಮೆ ಅದೇ ಖಾತೆ ಅವರ ಹೆಗಲೇರಿದೆ. ಜಾಗತಿಕ ವೇದಿಕೆಯಲ್ಲಿ ಸಂಕೀರ್ಣ ಸಮಸ್ಯೆಗಳ ಶ್ರೇಣಿಯಲ್ಲಿ ಭಾರತದ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಉಕ್ರೇನ್‌ ಯುದ್ಧ ಸಂದರ್ಭದ ನಿರ್ವಹಣೆ, ಚೀನಾವನ್ನು ಎದುರಿಸಲು ದೃಢವಾದ ನೀತಿ ಹೀಗೆ ಜೈಶಂಕರ್‌ ಅವರ ಅನೇಕ ಗಟ್ಟಿ ನಿರ್ಧಾರಗಳು ಶ್ಲಾಘನಾರ್ಹ. ವಿದೇಶಾಂಗ ನೀತಿ ವಿಷಯಗಳನ್ನು ದೇಶೀಯ ಗಮನಕ್ಕೆ ತಂದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...