ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ಹಾಗೂ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯುಸೂಫ್ ಕೆಲ ದಿನಗಳ ಹಿಂದಷ್ಟೇ ಬ್ರಿಟಿಷ್ ವೋಗ್ ನಲ್ಲಿ ಕಾಣಿಸಿಕೊಂಡಿದ್ದರು.
ಈ ಮುಖಪುಟ ವೈರಲ್ ಆಗಿದ್ದರ ಜೊತೆಗೆ ಇದೀಗ ಮದುವೆ ವಿಚಾರವಾಗಿ ಮಲಾಲಾ ನೀಡಿರುವ ಹೇಳಿಕೆ ಸಹ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದು ಪಾಕಿಸ್ತಾನಿಗರ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಸಂದರ್ಶನವೊಂದರಲ್ಲಿ ಮಲಾಲಾ ರಾಜಕೀಯ, ಸಂಸ್ಕೃತಿ , ವೈಯಕ್ತಿಕ ಜೀವನ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಮದುವೆ ವಿಚಾರದ ಬಗ್ಗೆ ಮಲಾಲಾ ಆಡಿದ ಮಾತುಗಳು ವೈರಲ್ ಆಗಿದೆ.
ಮದುವೆ ವಿಚಾರವಾಗಿ ಮಾತನಾಡಿದ ಮಲಾಲಾ, ಅನೇಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆ ಜೀವನದ ಬಗ್ಗೆ ಹೇಳಿಕೊಳ್ಳೋದನ್ನ ನೋಡಿ ನನಗೆ ಆಶ್ಚರ್ಯವಾಗಿದೆ. ನೀವು ಒಬ್ಬರನ್ನ ನೀವು ನಂಬಬೇಕೋ ಬೇಡವೋ ಅನ್ನೋದರ ಬಗ್ಗೆ ನೀವು ಖಚಿತತೆ ಹೊಂದಲು ಹೇಗೆ ಸಾಧ್ಯ..? ಜನರು ಯಾಕೆ ಮದುವೆಯಾಗುತ್ತಾರೆ ಅನ್ನೋದೇ ನನಗೆ ಅರ್ಥವಾಗೋದಿಲ್ಲ. ನಿಮ್ಮ ಜೀವನಕ್ಕೆ ಒಬ್ಬ ಸಂಗಾತಿ ಬೇಕು ಎನಿಸಿದ್ರೆ ನೀವು ಮದುವೆ ನೋಂದಣಿ ಪತ್ರಕ್ಕೆ ಏಕೆ ಸಹಿ ಹಾಕಬೇಕು..? ಸುಮ್ಮನೇ ನೀವು ಪಾರ್ಟ್ನರ್ಗಳಂತೆ ಇರಬಹುದಲ್ಲವೇ..? ಎಂದು ಪ್ರಶ್ನಿಸಿದ್ದಾರೆ.
ಮಲಾಲಾರ ಈ ಮಾತು ಪಾಕಿಸ್ತಾನಿಗಳ ಕಣ್ಣು ಕೆಂಪಗಾಗಿಸಿದೆ. ಈಕೆ ಈ ರೀತಿಯ ಹೇಳಿಕೆಗಳ ಮೂಲಕ ಯುವಜನತೆಯ ದಿಕ್ಕನ್ನ ತಪ್ಪಿಸುತ್ತಿದ್ದಾಳೆ. ಅಲ್ಲದೇ ಮದುವೆ ವಿಚಾರವಾಗಿ ಈಕೆ ನೀಡಿರುವ ಹೇಳಿಕೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನ ಈಕೆ ಅನುಸರಿಸುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ.