
ವಿಷ್ಯ ಚಿಕ್ಕದಿರಲಿ ಇಲ್ಲ ದೊಡ್ಡದಿರಲಿ ಅನೇಕರು ಇಡೀ ದಿನ ಆಲೋಚನೆ ಮಾಡ್ತಿರುತ್ತಾರೆ. ಅವರ ತಲೆಯಲ್ಲಿ ಒಂದಲ್ಲ ಒಂದು ವಿಷ್ಯ ಓಡ್ತಿರುತ್ತದೆ. ನಿಮಗೆ ನೀವು ಮಾಡುವ ಆಲೋಚನೆ ಗಂಭೀರ ಎನ್ನಿಸದೆ ಇರಬಹುದು. ಆದ್ರೆ ನಿಮ್ಮ ಬಿಡುವಿಲ್ಲದ ಈ ಆಲೋಚನೆ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ. ನಾನಾ ಖಾಯಿಲೆಗೆ ಈ ಆಲೋಚನೆ ಕಾರಣವಾಗುತ್ತದೆ.
ಅತಿಯಾಗಿ ಯೋಚನೆ ಮಾಡುವ ಜನರು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಾರೆ. ನಿಮ್ಮ ಯೋಚನೆ ದೇಹದಲ್ಲಿ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಹೃದಯ ಬಡಿತ ವೇಗವಾಗಲು ಕಾರಣವಾಗುತ್ತದೆ. ಇದು ಬಿಪಿ ಮತ್ತು ಹೃದ್ರೋಗಕ್ಕೆ ಕಾರಣವಾಗುತ್ತದೆ.
ನಿಮ್ಮ ಆಲೋಚನೆ ಥೈರಾಯ್ಡ್ ರೋಗಕ್ಕೂ ಕಾರಣವಾಗುತ್ತದೆ. ಮಿತಿಗಿಂತ ಹೆಚ್ಚು ಆಲೋಚನೆ ಮಾಡುವ ಜನರು ತಪ್ಪು ವಿಧಾನದಲ್ಲಿ ಆಹಾರ ಸೇವನೆ ಮಾಡುತ್ತಾರೆ. ಅತಿಯಾಗಿ ತಿನ್ನುತ್ತಾರೆ. ಇದು ಥೈರಾಯ್ಡ್ ಗೆ ಕಾರಣವಾಗುತ್ತದೆ.
ನೀವು ಒಂದೇ ಕಡೆ ದೀರ್ಘವಾಗಿ ಕುಳಿತುಕೊಳ್ಳುವುದರಿಂದ ಮಾತ್ರವಲ್ಲದೆ ನಿಮ್ಮ ಭಾವನಾತ್ಮಕ ಒತ್ತಡ ಬೆನ್ನುನೋವಿಗೆ ಕಾರಣವಾಗಬಹುದು. ಭಾವನಾತ್ಮಕ ಒತ್ತಡದಿಂದಾಗಿ ಬೆನ್ನು ನೋವು ಕೂಡ ಹೆಚ್ಚಾಗುತ್ತದೆ.
ತಪ್ಪಾಗಿ ಯೋಚಿಸುವುದು ಅಥವಾ ಅತಿಯಾಗಿ ಯೋಚಿಸುವುದು ದೇಹದಲ್ಲಿ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್‌ನಂತಹ ಒತ್ತಡದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಸ್ನಾಯುವನ್ನು ಬಿಗಿತಗೊಳಿಸುತ್ತದೆ. ಇದರಿಂದ ಮೊಣಕಾಲು ನೋವು ನಿಮ್ಮನ್ನು ಕಾಡುತ್ತದೆ.