alex Certify ಸಿಗರೇಟ್ ಸೇದದಿದ್ದರೂ ತುಟಿಗಳ ಬಣ್ಣ ಕಪ್ಪಾಗುವುದೇಕೆ…..? ಇಲ್ಲಿದೆ ಕಾರಣ ಮತ್ತು ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಗರೇಟ್ ಸೇದದಿದ್ದರೂ ತುಟಿಗಳ ಬಣ್ಣ ಕಪ್ಪಾಗುವುದೇಕೆ…..? ಇಲ್ಲಿದೆ ಕಾರಣ ಮತ್ತು ಪರಿಹಾರ

ಚರ್ಮ ಮತ್ತು ಕೂದಲಿನಂತೆ ತುಟಿಗಳ ಬಗ್ಗೆ ಕೂಡ ಕಾಳಜಿ ವಹಿಸಬೇಕು. ತುಟಿಗಳ ಚರ್ಮವು ದೇಹದ ಚರ್ಮಕ್ಕಿಂತ ತೆಳ್ಳಗಿರುತ್ತದೆ. ಇದರಿಂದಾಗಿ ಅದು ಬೇಗನೆ ಒಣಗುತ್ತದೆ ಮತ್ತು ಬಿರುಕು ಬಿಡಲು ಪ್ರಾರಂಭಿಸುತ್ತದೆ. ಅಷ್ಟೇ ಅಲ್ಲ ಕೆಲವರ ತುಟಿಗಳ ಬಣ್ಣ ಕಪ್ಪಗಿರುತ್ತದೆ, ತುಟಿಗಳ ಮೇಲೆ ಕಪ್ಪು ಕಲೆಗಳು ಕೂಡ ಕಾಣಿಸಿಕೊಳ್ಳಲಾರಂಭಿಸುತ್ತವೆ.

ಇದು ಪಿಗ್ಮೆಂಟೇಶನ್‌ ಕೂಡ ಇರಬಹುದು. ಆದರೆ ತುಟಿಗಳ ಬಣ್ಣ ಬದಲಾಗಲು ಇದೊಂದೇ ಕಾರಣವಲ್ಲ. ತುಟಿಗಳ ಮೇಲಿನ ಕಪ್ಪು ಕಲೆಗಳ ಹಿಂದಿನ ಸಂಭವನೀಯ ಕಾರಣಗಳು ಮತ್ತು ಅವುಗಳನ್ನು ತೊಡೆದುಹಾಕುವ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.

ಅಲರ್ಜಿ ರಿಯಾಕ್ಷನ್‌

ಕೆಲವೊಮ್ಮೆ ಹೊಸ ಉತ್ಪನ್ನದ ಬಳಕೆಯಿಂದ ಅಲರ್ಜಿ ಆಗಬಹುದು. ಇದರಿಂದಾಗಿ ತುಟಿಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಅಲರ್ಜಿಕ್ ಕಾಂಟ್ಯಾಕ್ಟ್ ಚೀಲೈಟಿಸ್ ಅಥವಾ ಪಿಗ್ಮೆಂಟೆಡ್ ಕಾಂಟ್ಯಾಕ್ಟ್ ಚೀಲೈಟಿಸ್ ಎಂದೂ ಕರೆಯುತ್ತಾರೆ. ಇದು ಟೂತ್‌ಪೇಸ್ಟ್, ಮೌತ್‌ವಾಶ್, ಹೇರ್ ಡೈ, ಪರ್ಫ್ಯೂಮ್‌ , ಲಿಪ್‌ಸ್ಟಿಕ್, ಲಿಪ್ ಬಾಮ್ ಮತ್ತು ಗ್ರೀನ್‌ ಟೀಯಲ್ಲಿರುವ ನಿಕಲ್‌ನಿಂದ ಉಂಟಾಗುತ್ತದೆ.

ಹೆಚ್ಚು ಕಬ್ಬಿಣ

ದೇಹವು ಹೆಚ್ಚು ಕಬ್ಬಿಣವನ್ನು ಸಂಗ್ರಹಿಸಲು ಮತ್ತು ಹೀರಿಕೊಳ್ಳಲು ಪ್ರಾರಂಭಿಸಿದಾಗ ಚರ್ಮದ ಮೇಲೆ ಕಪ್ಪು ಕಲೆಗಳು, ಆಯಾಸ, ಯಕೃತ್ತಿನ ಸಮಸ್ಯೆಗಳು ಮತ್ತು ನೋವನ್ನು ಉಂಟುಮಾಡುತ್ತದೆ. ಆದ್ದರಿಂದ ತುಟಿಗಳು ಕಪ್ಪಾದರೆ ಖಂಡಿತವಾಗಿಯೂ ಒಮ್ಮೆ ಪರೀಕ್ಷಿಸಿಕೊಳ್ಳಿ.

ನಿರ್ಜಲೀಕರಣ

ದೇಹದಲ್ಲಿ ನೀರಿನ ಕೊರತೆಯಿದ್ದರೆ ಅದರ ಲಕ್ಷಣಗಳು ಮೊದಲು ನಿಮ್ಮ ಚರ್ಮ ಮತ್ತು ತುಟಿಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಒಣ ಮತ್ತು ಒಡೆದ ತುಟಿಗಳು ಅವುಗಳನ್ನು ನೆಕ್ಕಲು ಅಥವಾ ಕಚ್ಚಲು ಪ್ರಚೋದನೆಗೆ ಕಾರಣವಾಗುತ್ತವೆ. ಇದರಿಂದಲೂ ಕಪ್ಪು ಕಲೆಗಳಾಗಬಹುದು.

ಸನ್ ಸ್ಪಾಟ್

ಆಕ್ಟಿನಿಕ್ ಕೆರಾಟೋಸಿಸ್ ಎಂದೂ ಕರೆಯಲ್ಪಡುವ ಈ ಸ್ಥಿತಿಯು ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಮತ್ತು ಯುವಿ ಕಿರಣಗಳಿಂದ ಉಂಟಾಗುತ್ತದೆ. ಇದಕ್ಕೆ ಪರಿಹಾರ ಪಡೆಯಲು ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು.

ವಿಟಮಿನ್ ಬಿ12 ಕೊರತೆ

ವಿಟಮಿನ್ ಬಿ12 ಕೊರತೆಯಿಂದಾಗಿ ಚರ್ಮದ ಬಣ್ಣವು ಕಪ್ಪಾಗಬಹುದು. ಇದು ರಕ್ತಹೀನತೆ, ಬಾಯಿ ಹುಣ್ಣು, ಕಿರಿಕಿರಿ, ನಾಲಿಗೆ ಕೆಂಪಾಗುವುದು, ಗಂಟಲು ನೋವು ಹೀಗೆ ಅನೇಕ ಸಮಸ್ಯೆಗಳುಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ವೈದ್ಯರ ಸಲಹೆಯ ಮೇರೆಗೆ ಮಲ್ಟಿವಿಟಮಿನ್‌ಗಳನ್ನು ತೆಗೆದುಕೊಳ್ಳಬಹುದು.

ಔಷಧಗಳು

ಮಲೇರಿಯಾ ವಿರೋಧಿ ಔಷಧಿಗಳು, ನೋವು ನಿವಾರಕಗಳು, ಆಂಟಿಮೈಕ್ರೊಬಿಯಲ್‌ಗಳನ್ನು ಒಳಗೊಂಡಿರುವ ಕೆಲವು ಔಷಧಿಗಳು ತುಟಿಗಳಲ್ಲಿ ಪಿಗ್ಮೆಂಟೇಶನ್ ಉಂಟುಮಾಡಬಹುದು. ಹೀಗಾದಲ್ಲಿ ವೈದ್ಯರನ್ನು ಸಂಪರ್ಕಿಸಿ.

ಹಾರ್ಮೋನ್ ಅಡಚಣೆ

ಅಸಮತೋಲಿತ ಥೈರಾಯ್ಡ್ ಅಥವಾ ಇತರ ಹಾರ್ಮೋನುಗಳು ಚರ್ಮದ ಮೇಲೆ ಕಪ್ಪು ಕಲೆಗಳನ್ನು ಉಂಟುಮಾಡಬಹುದು. ತುಟಿಗಳ ಬಣ್ಣ ಕಪ್ಪಾಗದಂತೆ ಕಾಪಾಡಿಕೊಳ್ಳಲು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸಿ. SPF ಇರುವ ಲಿಪ್ ಬಾಮ್ ಅನ್ನು ಬಳಸಿ.  ಸಾಕಷ್ಟು ನೀರು ಕುಡಿಯಿರಿ. ತುಟಿಗಳ ಮೇಲಿನ ಡೆಡ್‌ ಸ್ಕಿನ್‌ ತೆಗೆದುಹಾಕಲು ನಿಯಮಿತವಾಗಿ ತುಟಿಗಳನ್ನು ಮೃದುವಾಗಿ ಎಫ್ಫೋಲಿಯೇಟ್ ಮಾಡಿ.

ನಿಯಾಸಿನಾಮೈಡ್, ವಿಟಮಿನ್ ಸಿ, ಕೋಜಿಕ್ ಆಸಿಡ್ ಅಥವಾ ಲೈಕೋರೈಸ್ ಸಾರದಂತಹ ಪದಾರ್ಥಗಳಿರುವ ಉತ್ಪನ್ನಗಳನ್ನು ಬಳಸಿ. ವಿಟಮಿನ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಆಹಾರವನ್ನು ತೆಗೆದುಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...