ಜಗತ್ತಿನಲ್ಲಿ ನಮಗೆ ತಿಳಿಯದ ಅನೇಕ ಸಂಗತಿಗಳಿವೆ. ನಮ್ಮ ದೈನಂದಿನ ಜೀವನದಲ್ಲಿ ನಡೆಯುವ ಕೆಲ ಸಂಗತಿಗಳನ್ನು ಕೂಡ ನಾವು ತಿಳಿದುಕೊಳ್ಳುವ ಪ್ರಯತ್ನ ನಡೆಸುವುದಿಲ್ಲ. ಮಳೆ ಹಾಗೂ ಮಳೆ ಹನಿಗಳನ್ನು ನಾವು ನೋಡ್ತಿರುತ್ತೇವೆ. ಆದ್ರೆ ಮಳೆ ಹನಿ ಯಾಕೆ ಗುಂಡಾಗಿ ಬೀಳುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.
ಬಾಲ್ಯದಲ್ಲಿ ಮೇಲ್ಮೈ ಒತ್ತಡದ ಬಗ್ಗೆ ಓದಿರುತ್ತೇವೆ. ಆದ್ರೆ ಹಿಂದಿನ ವೈಜ್ಞಾನಿಕ ಕಾರಣವನ್ನು ತಿಳಿದುಕೊಳ್ಳಲು ಹೋಗಿರುವುದಿಲ್ಲ. ಮೇಲ್ಮೈ ಒತ್ತಡವು ನೀರಿನ ಹನಿಗಳ ಗೋಲಾಕಾರಕ್ಕೆ ಕಾರಣವಾಗಿದೆ. ನೀರು ದ್ರವ ರೂಪದ ವಸ್ತು. ಅದು ಹಾಕಿದ ಪಾತ್ರೆಯ ರೂಪ ಪಡೆಯುತ್ತದೆ. ನೀರು ಮುಕ್ತವಾಗಿ ಕೆಳಗೆ ಬಿದ್ದಾಗ, ನೀರಿನ ಹನಿಯು ಕನಿಷ್ಟ ಗಾತ್ರವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತದೆ. ಇದರಿಂದಾಗಿ ಮಳೆಹನಿಗಳು ದುಂಡಾಗುತ್ತವೆ.
ಗುರುತ್ವಾಕರ್ಷಣೆಯ ದೃಷ್ಟಿಯಿಂದ ಗೋಲಾಕಾರದ ಆಕಾರ ಚಿಕ್ಕದಾಗಿದೆ. ನೀರಿನ ಹನಿಯ ಗಾತ್ರವು ಚಿಕ್ಕದಾಗುತ್ತಿದ್ದಂತೆ ಅದು ದುಂಡಾಗಿರುತ್ತದೆ. ಮಳೆ ನೀರು ಮಾತ್ರವಲ್ಲ, ಎತ್ತರದಿಂದ ಬೀಳುವ ಯಾವುದೇ ದ್ರವವು ಭೂಮಿಯ ಸಮೀಪಕ್ಕೆ ಬರುತ್ತಿದ್ದಂತೆ ಹನಿಗಳಾಗಿ ಬದಲಾಗುತ್ತದೆ. ಮೇಲ್ಮೈ ಒತ್ತಡದಿಂದಾಗಿ ಹನಿಗಳ ಆಕಾರವು ಯಾವಾಗಲೂ ಗುಂಡಾಗಿರುತ್ತದೆ.