ಸುಂದರವಾದ, ತೈಲ ಮುಕ್ತ ತ್ವಚೆಯನ್ನು ಪಡೆಯಬೇಕೆಂಬುದು ಎಲ್ಲರ ಬಯಕೆ. ಕಾಂತಿಯುತ ತ್ವಚೆ ನಿಮ್ಮ ದೇಹದ ಆರೋಗ್ಯವನ್ನು ಪ್ರತಿಫಲಿಸುತ್ತದೆ. ಎಣ್ಣೆಯುಕ್ತ ಚರ್ಮಕ್ಕೆ ಹಲವು ಕಾರಣಗಳಿವೆ.
ಕೆಲವೊಮ್ಮೆ ಅದು ಅನುವಂಶಿಕವಾಗಿ ಬಂದಿರಬಹುದು. ನಿಮ್ಮ ಕುಟುಂಬದಲ್ಲಿ ಯಾರಾದರೂ ಎಣ್ಣೆಯುಕ್ತ ಚರ್ಮ ಹೊಂದಿದೆ. ಅದು ನಿಮಗೆ ಬಂದಿರಬಹುದು.
ಹದಿಹರೆಯದಲ್ಲಿ ಹಾರ್ಮೋನುಗಳ ಬದಲಾವಣೆಯಿಂದ ತ್ವಚೆ ಎಣ್ಣೆ ಅಥವಾ ಜಿಡ್ಡಿನಂಶದಿಂದ ಕಳೆಗುಂದಬಹುದು. ಇದರಿಂದ ಮೊಡವೆಗಳ ಕಿರಿಕಿರಿಯೂ ಹೆಚ್ಚಬಹುದು.
ನಿಯಮಿತವಾಗಿ ವ್ಯಾಯಾಮ ಮಾಡದಿರುವುದು, ನಿತ್ಯ ಜಂಕ್ ಫುಡ್ ಸೇವಿಸುವುದು, ಸಾಕಷ್ಟು ನೀರು ಕುಡಿಯದಿರುವುದು, ಎಣ್ಣೆ ಅಥವಾ ಬೆಣ್ಣೆಯ ಆಹಾರವನ್ನು ಹೆಚ್ಚು ತಿನ್ನುವುದು ಇದಕ್ಕೆ ಕಾರಣವಿರಬಹುದು. ಮಳೆ ಅಥವಾ ಚಳಿಗಾಲದಲ್ಲಿ ಹೆಚ್ಚಿನ ಮಂದಿ ಈ ಸಮಸ್ಯೆ ಅನುಭವಿಸುತ್ತಾರೆ.