ಪ್ರತಿಯೊಬ್ಬ ವ್ಯಕ್ತಿಯ ದೇಹದ ತತ್ವಶಾಸ್ತ್ರವು ವಿಭಿನ್ನವಾಗಿರುತ್ತದೆ. ಕೆಲವರಿಗೆ ದೇಹದ ಕೂದಲು ಇದ್ದರೆ, ಕೆಲವರಿಗೆ ದೇಹದ ಕೂದಲೇ ಇರುವುದಿಲ್ಲ. ಇಲ್ಲದಿದ್ದರೆ ಕಡಿಮೆ ಇರುತ್ತದೆ.ಪ್ರತಿಯೊಬ್ಬರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಕೆಲವರಿಗೆ ಕಿವಿಯಲ್ಲಿ ಕೂದಲು ಇರುತ್ತದೆ. ಆದರೆ ಕೆಲವರಿಗೆ ಕಿವಿಯಲ್ಲಿ ಕೂದಲು ಇರುವುದಿಲ್ಲ.
ಹೆಚ್ಚಿನ ಪುರುಷರು ಕಿವಿಯೊಳಗೆ ಕೂದಲನ್ನು ಹೊಂದಿರುತ್ತಾರೆ. ಇದು ಕೆಲವು ಮಹಿಳೆಯರಲ್ಲಿಯೂ ಇರಬಹುದು. ಈ ಕೂದಲುಗಳಿಗೆ ಕಾರಣ ವೈ ಕ್ರೋಮೋಸೋಮ್. ಕಿವಿಯಲ್ಲಿನ ಕೂದಲು ಹೊರಬರಲು ಇದು ಕಾರಣವಾಗಿದೆ. ಹಾರ್ಮೋನ್ ಬದಲಾವಣೆಯಿಂದ ಪುರುಷರ ಕಿವಿ ಮೇಲೆ ಕಪ್ಪು ಮತ್ತು ಬಿಳಿ ಬಣ್ಣದ ಕೂದಲುಗಳು ಬೆಳವಣಿಗೆಯಾಗುತ್ತವೆ.
ಕಿವಿಯಲ್ಲಿ ಈ ರೀತಿ ಕೂದಲು ಹುಟ್ಟಿದರೆ ಯಾವುದೇ ಸಮಸ್ಯೆ ಬರುವುದಿಲ್ಲ.ಇದು ಮನುಷ್ಯನ ದೇಹದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಇದರಿಂದ ಸಮಸ್ಯೆಗಳ ಬದಲಾಗಿ ಒಳ್ಳೆಯದೇ ಆಗುವುದು. ಏಕೆಂದರೆ ಕಿವಿಯೊಳಗೆ ಕೂದಲಿರುವುದರಿಂದ ಕಿವಿಗೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ಕೂದಲು ಜಾಸ್ತಿ ಇದ್ದರೆ ಮಾತ್ರ, ಸ್ನಾನ ಮಾಡುವಾಗ ಅಥವಾ ಬೇರೆ ಸಂದರ್ಭದಲ್ಲಿ ನೀರು ಕಿವಿಯೊಳಗೆ ಸೇರಿ, ಶೇಖರಣೆ ಆಗೋ ಚಾನ್ಸ್ ಇರುತ್ತದೆ. ಅದು ಬಿಟ್ಟು ಬೇರೆ ಯಾವ ಸಮಸ್ಯೆ ಕೂಡ ಇಲ್ಲ.ಶಾಸ್ತ್ರದ ಪ್ರಕಾರ, ಕಿವಿಯಲ್ಲಿ ಕೂದಲುಗಳಿದ್ದರೆ, ಅದು ಅದೃಷ್ಟ ಎಂದು ಹೇಳಲಾಗುತ್ತದೆ. ಕೆಲವು ಜನರಲ್ಲಿ, ಕೂದಲು ಉದ್ದವಾಗಿರುತ್ತದೆ, ಆದರೆ ಕೆಲವು ಜನರಲ್ಲಿ ಅದು ಚಿಕ್ಕದಾಗಿರುತ್ತದೆ. ಕೂದಲು ಉದ್ದವಾಗಿದ್ದರೆ, ವ್ಯಕ್ತಿಯು ಬಹಳ ಕಡಿಮೆ ಅವಧಿಯಲ್ಲಿ ಶ್ರೀಮಂತನಾಗುತ್ತಾನೆ ಎಂದು ಹೇಳಲಾಗುತ್ತದೆ.