ಗರ್ಭಿಣಿಯಾಗಿದ್ದ ವೇಳೆ ಹಾರ್ಮೋನ್ಗಳು ವ್ಯತ್ಯಾಸ ಆಗೋದ್ರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ತುಂಬಾನೇ ಬದಲಾವಣೆಗಳು ಕಂಡುಬರುತ್ತದೆ. ಅದೇ ರೀತಿ ಗರ್ಭಿಣಿಯರಲ್ಲಿ ಈ ಗೊರಕೆ ಹೊಡೆಯೋ ಸಮಸ್ಯೆ ಕೂಡ ಸಾಮಾನ್ಯವಾಗಿ ಕಂಡು ಬರುತ್ತದೆ. ಮೂರನೇ ತ್ರೈಮಾಸಿಕದ ಅವಧಿಯಲ್ಲಿ 10ರಲ್ಲಿ ನಾಲ್ಕು ಮಂದಿ ಗರ್ಭಿಣಿಯರು ಗೊರಕೆ ಸಮಸ್ಯೆಯನ್ನ ಅನುಭವಿಸಿರ್ತಾರೆ. ಹಾಗಾದರೆ ಈ ಗೊರಕೆ ಸಮಸ್ಯೆಗೆ ಕಾರಣವೇನು..? ನೋಡೋಣ ಬನ್ನಿ.
ಗರ್ಭಾವಸ್ಥೆಯ ಸಂದರ್ಭದಲ್ಲಿ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ಗಳ ಸಂಖ್ಯೆ ಹೆಚ್ಚಿರುತ್ತದೆ. ಇದರಿಂದಾಗಿ ಮಸ್ಕಸ್ ಮೆಂಬ್ರೇನ್ ಊದಿಕೊಳ್ಳುತ್ತದೆ. ಇದು ಮೂಗನ್ನು ಬ್ಲಾಕ್ ಮಾಡುತ್ತದೆ. ಹೀಗಾಗಿ ಗೊರಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಇದನ್ನ ಹೊರತುಪಡಿಸಿದ್ರೆ ಗರ್ಭಿಣಿಯಾದ ಸಂದರ್ಭದಲ್ಲಿ ತುಂಬಾನೇ ಆಯಾಸವಾಗಿರುತ್ತೆ. ಇದರಿಂದಾಗಿಯೂ ಉಸಿರಾಟ ಮಾಡೋದು ಕೊಂಚ ಕಷ್ಟವಾಗೋದ್ರಿಂದ ಗೊರಕೆ ಹೊಡೆಯೋದು ಆರಂಭವಾಗುತ್ತೆ.
ಇನ್ನೂ ಸ್ಥೂಲಕಾಯದಿಂದ ಬಳಲುವ ಗರ್ಭಿಣಿಯರಿಗಂತೂ ಗೊರಕೆ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಕುತ್ತಿಗೆ ಭಾಗದಲ್ಲಿ ಕೊಬ್ಬು ಶೇಖರಣೆಯಾಗೋದ್ರಿಂದ ಉಸಿರಾಟ ಕಷ್ಟವಾಗಿ ಈ ಸಮಸ್ಯೆ ತಲೆದೋರುತ್ತದೆ.
ಇದಕ್ಕೆ ಪರಿಹಾರವೇನು..?
ಮೆಡಿಕಲ್ಗಳಲ್ಲಿ ಸಿಗುವ ನಾಸಲ್ ಸ್ಟ್ರಿಪ್ಗಳನ್ನ ಬಳಕೆ ಮಾಡಿ. ಆರೋಗ್ಯಯುತವಾದ ಆಹಾರ ಹಾಗೂ ಉತ್ತಮ ಯೋಗಾಭ್ಯಾಸವನ್ನ ರೂಢಿ ಮಾಡಿಕೊಳ್ಳಿ.
ಯಾವುದಾದರೂ ಒಂದು ಮಗ್ಗುಲಲ್ಲಿ ನಿದ್ದೆ ಮಾಡಿ. ಅಂಗಾತ ಮಲಗುವ ಅಭ್ಯಾಸ ಬೇಡ. ಒಳ್ಳೆಯ ಗುಣಮಟ್ಟದ ದಿಂಬನ್ನ ಬಳಕೆ ಮಾಡಿ.
ಗರ್ಭಾವಸ್ಥೆಗೂ ಮುನ್ನ ನಿಮಗೆ ಗೊರಕೆ ಸಮಸ್ಯೆ ಇರದಿದ್ದಲ್ಲಿ ನೀವು ತಲೆಕೆಡಿಸಿಕೊಳ್ಳೋದು ಬೇಡ. ಹೆರಿಗೆ ಬಳಿಕ ಈ ಸಮಸ್ಯೆ ತನ್ನಿಂದ ತಾನೇ ವಾಸಿಯಾಗಲಿದೆ.