alex Certify ಕುಡಿಯೋ ಮೊದಲು ಮದ್ಯದ ಹನಿ ನೆಲಕ್ಕೆ ಚಿಮುಕಿಸುವುದೇಕೆ ? ಇದರ ಹಿಂದಿದೆಯಂತೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿಯೋ ಮೊದಲು ಮದ್ಯದ ಹನಿ ನೆಲಕ್ಕೆ ಚಿಮುಕಿಸುವುದೇಕೆ ? ಇದರ ಹಿಂದಿದೆಯಂತೆ ಈ ಕಾರಣ

ಹೋಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮಾರುಕಟ್ಟೆಯಿಂದ ಮನೆಗಳವರೆಗೆ ಹೋಳಿ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿವೆ. ಮಹಿಳೆಯರು ಹೋಳಿಗೆ ವಿಶೇಷ ಭಕ್ಷ್ಯಗಳನ್ನು ತಯಾರಿಸುವಲ್ಲಿ ನಿರತರಾಗಿದ್ದರೆ, ಯುವಕರು ಈ ದಿನವನ್ನು ಮೋಜು-ಮಸ್ತಿಯಿಂದ ಕಳೆಯಲು ಸಜ್ಜಾಗಿದ್ದಾರೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಅನೇಕ ಯುವಕರು ಮದ್ಯಪಾನ ಮಾಡುವುದನ್ನು ಕಾಣಬಹುದು. ಮದ್ಯಪಾನ ಮಾಡುವ ನಿಮ್ಮ ಸ್ನೇಹಿತರಿದ್ದರೆ, ಅವರು ಮದ್ಯಪಾನ ಮಾಡುವ ಮೊದಲು ಗ್ಲಾಸ್‌ನಿಂದ ಕೆಲವು ಹನಿಗಳನ್ನು ನೆಲಕ್ಕೆ ಚಿಮುಕಿಸುವುದನ್ನು ನೀವು ಗಮನಿಸಿರಬಹುದು. ಹೌದು, ಅನೇಕ ಬಾರಿ ಮದ್ಯಪಾನಿಗಳು ತಮ್ಮ ಕೈಯಲ್ಲಿರುವ ಗ್ಲಾಸ್‌ನಿಂದ ಕೆಲವು ಹನಿ ಮದ್ಯವನ್ನು ನೆಲಕ್ಕೆ ಚಿಮುಕಿಸುತ್ತಾರೆ. ಅವರು ತಮ್ಮ ಉಂಗುರದ ಬೆರಳನ್ನು ಮದ್ಯದಲ್ಲಿ ಅದ್ದಿ ಚಿಮುಕಿಸುತ್ತಾರೆ. ಅನೇಕ ಮದ್ಯಪಾನಿಗಳು ಇದನ್ನು ಮಾಡುತ್ತಾರೆ, ಆದರೆ ಇದರ ಹಿಂದಿನ ಕಾರಣವನ್ನು ಅವರು ತಿಳಿದಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮದ್ಯಪಾನಿಗಳು ಇದನ್ನು ಏಕೆ ಮಾಡುತ್ತಾರೆ ಎಂಬುದರ ಹಿಂದಿನ ಕಾರಣಗಳ ವಿವರ ಇಲ್ಲಿದೆ.

ಜ್ಯೋತಿಷ್ಯದಲ್ಲಿ ಅಡಗಿರುವ ಕಾರಣ

ಸಾಮಾಜಿಕ ಮಾಧ್ಯಮದಲ್ಲಿ ʼಜ್ಯೋತಿಷಿʼ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಇದರ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಅನುರಾಗ್ ಠಾಕೂರ್ ಎಂಬ ಈ ವ್ಯಕ್ತಿ ಜನರು ಮದ್ಯದ ಗ್ಲಾಸ್‌ನಲ್ಲಿ ಬೆರಳು ಅದ್ದಿ ನೆಲಕ್ಕೆ ಏಕೆ ಚಿಮುಕಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ವ್ಯಕ್ತಿಯ ಪ್ರಕಾರ, ಇದರ ಕಾರಣ ಜ್ಯೋತಿಷ್ಯದಲ್ಲಿ ಬರೆಯಲ್ಪಟ್ಟಿದೆ. ಹೆಚ್ಚಿನ ಬಾರಿ, ಇದನ್ನು ಮಾಡುವವರಿಗೆ ಇದರ ಹಿಂದಿನ ಕಾರಣ ತಿಳಿದಿರುವುದಿಲ್ಲ. ಹೀಗೆ ಮಾಡುವುದರಿಂದ ಜನರ ಜೀವನದಲ್ಲಿ ಶನಿಯ ಪ್ರಭಾವ ಕಡಿಮೆಯಾಗುತ್ತದೆ.

ಒಳ್ಳೆಯ ದಿನಗಳು ಬರುತ್ತವೆಯೇ ?

ಶನಿದೇವನ ಪ್ರಭಾವ ಕಡಿಮೆ ಮಾಡಲು, ಮದ್ಯಪಾನ ಮಾಡುವ ಜನರು ಹೆಚ್ಚಾಗಿ ಈ ಉಪಾಯವನ್ನು ಬಳಸುತ್ತಾರೆ. ಮದ್ಯಪಾನ ಮಾಡುವ ಮೊದಲು ಹೀಗೆ ಮಾಡುವುದರಿಂದ ನಿಮ್ಮ ಅದೃಷ್ಟ ಬದಲಾಗಬಹುದು ಎಂದು ಆ ವ್ಯಕ್ತಿ ಹೇಳಿದ್ದಾರೆ. ನಿಮ್ಮ ಉಂಗುರದ ಬೆರಳನ್ನು ಮದ್ಯದಲ್ಲಿ ಅದ್ದಿ ಚಿಮುಕಿಸುವುದರಿಂದ, ಜನರ ಜೀವನದ ಮೇಲೆ ಪರಿಣಾಮ ಬೀರುವ ಶನಿಯು ಶಾಂತನಾಗುತ್ತಾನೆ ಮತ್ತು ಅವರು ಅದರ ಒಳ್ಳೆಯ ಪರಿಣಾಮಗಳನ್ನು ಕಾಣುತ್ತಾರೆ. ಅದಕ್ಕಾಗಿಯೇ ಬಹುತೇಕ ಪ್ರತಿಯೊಬ್ಬ ಮದ್ಯಪ್ರಿಯನು ಇದನ್ನು ಮಾಡುತ್ತಾನೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...