ಕೊರೋನಾ ವೈರಸ್ ಮಾನವ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಅಂದರೆ ಇಮ್ಯೂನ್ ಸಿಸ್ಟಮ್ ನಿಂದ ದೂರ ಉಳಿದು ಜೀವಕೋಶದಿಂದ, ಜೀವಕೋಶಕ್ಕೆ ಹರಡುತ್ತದೆ ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ. ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ವೆಟರ್ನರಿ ಬಯೋಸೈನ್ಸ್ ವಿಭಾಗದ ವೈರಾಲಜಿ ಪ್ರಾಧ್ಯಾಪಕ ಶಾನ್-ಲು ಲಿಯು ನೇತೃತ್ವದ ಸಂಶೋಧನಾ ಸಾರಾಂಶ ವೈರಸ್ ಹರಡುವ ಕಾರ್ಯವಿಧಾನವನ್ನು ವಿವರವಾಗಿ ವಿಭಜಿಸುತ್ತದೆ.
ಸರಳವಾಗಿ ಹೇಳುವುದಾದರೆ, ವೈರಸ್ ಒಂದು ಕೋಶದಿಂದ ಇನ್ನೊಂದಕ್ಕೆ ಹರಡುತ್ತದೆ ಏಕೆಂದರೆ ಅಲ್ಲಿ ಅವುಗಳನ್ನು ತಡೆಯಲು ಯಾವುದೇ ರೋಗನಿರೋಧಕ ಶಕ್ತಿ ಇಲ್ಲ. ವೈರಸ್ ಜೀವಕೋಶದ ಗೋಡೆಗಳ ಒಳಗೆ ಕೂಡಿಕೊಂಡಿರುತ್ತದೆ. ಟಾರ್ಗೆಟ್ ಸೆಲ್ ಡೋನರ್ ಸೆಲ್ ಆಗಿ ಮಾರ್ಪಾಡಾದ ಮೇಲೆ ವೇವ್ ಸೃಷ್ಟಿಯಾಗುತ್ತದೆ ಎಂದು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನ ಪ್ರೊಸೀಡಿಂಗ್ಸ್ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧ ಹೇಳಿದೆ.
ಭಾರತೀಯ ಸೇನೆಯಿಂದ ಭರ್ಜರಿ ಬೇಟೆ: ಇಬ್ಬರು ಲಷ್ಕರ್ ಉಗ್ರರು ಸೇರಿ 4 ಭಯೋತ್ಪಾದಕರ ಸದೆಬಡಿದ ಯೋಧರು
ಹಾಗಿದ್ರೆ ಲಸಿಕೆಗೆ ವೈರಸ್ ತಡೆಗಟ್ಟುವ ಶಕ್ತಿ ಇಲ್ಲವೇ..?
ಕೋಶದಿಂದ ಕೋಶಕ್ಕೆ ಚಲಿಸುವ ವೈರಸ್ ಗೆ ಲಸಿಕೆಗಳಿಂದ ಉತ್ಪತ್ತಿಯಾಗುವ ಪ್ರತಿಕಾಯಗಳಿಂದ ರಕ್ಷಣೆ ಸಿಗುವುದಿಲ್ಲ. ಸೆಲ್-ಟು-ಸೆಲ್ ಹರಡುವ ವೈರಸ್ ಪ್ರತಿಕಾಯಗಳಿಗೆ ಸೋಲುವಷ್ಟು ಸೂಕ್ಷ್ಮವಾಗಿಲ್ಲ, ಎಂದು ಸಂಶೋಧಕರು ಹೇಳಿದ್ದಾರೆ. ಸೆಲ್-ಟು-ಸೆಲ್ ಟ್ರಾನ್ಸ್‌ಮಿಷನ್ ಪ್ರತಿಕಾಯಗಳನ್ನೆ ತಟಸ್ಥಗೊಳಿಸುತ್ತಿರುವುದು ನಮ್ಮ ಅಧ್ಯಯನದಲ್ಲಿ ಗಮನಕ್ಕೆ ಬಂದಿರುವ ಪ್ರಮುಖ ಸಂಗತಿ ಎಂದು ಲಿಯು ಹೇಳಿದ್ದಾರೆ.
ಇದಕ್ಕೆ ಪರಿಹಾರವೇನು..?
ಇತ್ತೀಚಿನ ಒಮಿಕ್ರಾನ್ ಸೇರಿದಂತೆ, ಕೊರೋನಾ ರೂಪಾಂತರಗಳು ಹೊರಹೊಮ್ಮುತ್ತಲೇ ಇರುತ್ತವೆ. ಈ ಹಂತದಲ್ಲಿ ನಾವು ಪ್ರತಿಕಾಯ ಹೆಚ್ಚಿಸುವ ವ್ಯಾಕ್ಸಿನ್ ಬದಲಿಗೆ, ವೈರಲ್ ಸೋಂಕಿನ ಇತರ ಹಂತಗಳನ್ನು ಗುರಿಯಾಗಿಟ್ಟುಕೊಂಡು ಪರಿಣಾಮಕಾರಿ ಆಂಟಿವೈರಲ್ ಔಷಧಿಗಳನ್ನು ಅಭಿವೃದ್ಧಿಪಡಿಸುವುದು ನಿರ್ಣಾಯಕ ಎಂದು ಲಿಯು ತಿಳಿಸಿದ್ದಾರೆ.
2003 ರಲ್ಲಿ ಬಂದ SARS ವೈರಸ್ ಗೂ ಕೊರೋನಾ ವೈರಸ್ ಗೂ ಸಾಮ್ಯತೆ ಇದೆ. ಆದರೆ ಅದು ಕೇವಲ ಎಂಟು ತಿಂಗಳು ಇತ್ತು, ಈ ವೈರಸ್ ಎರಡು ವರ್ಷವಾದರು ಮ್ಯೂಟೇಟ್ ಆಗುತ್ತಾ ಜೀವಂತವಾಗಿದೆ. ಇದಕ್ಕೆ ಕಾರಣ ಸೆಲ್-ಟು-ಸೆಲ್ ಟ್ರಾನ್ಸ್ಮಿಷನ್. ಇದನ್ನ ಇಲ್ಲವಾಗಿಸಬೇಕೆಂದರೆ ಆ್ಯಂಟಿವೈರಲ್ ವ್ಯಾಕ್ಸೀನ್ ಅಭಿವೃದ್ಧಿಪಡಿಸಬೇಕು ಎಂಬುದು ತಜ್ಞರ ಅಭಿಪ್ರಾಯ.