ಯಾವೊಂದು ಶುಭಕಾರ್ಯವನ್ನಾಗಲೀ ಘಂಟಾನಾದವಿಲ್ಲದೆ ಪ್ರಾರಂಭಿಸುವಂತಿಲ್ಲ. ಗಂಟೆಯು ಪೂಜಾದಿಕಾಲಗಳಲ್ಲಿ ಬಾರಿಸುವ ಒಂದು ಬಗೆಯ ಶೋಭನ ವಾದ್ಯ. ಶುದ್ಧ ಕಂಚಿನಿಂದಾದ ಇದನ್ನು ಬಾರಿಸಿದಾಗ ಓಂಕಾರ ಸ್ಫುರಿಸುತ್ತದೆಂದು ಹೇಳಲಾಗಿದೆ.
ಸಾಮಾನ್ಯವಾಗಿ ತಾಳದ ಒಂದು ಸುಮಾರು ನಾಲ್ಕು ಭಾಗ ತಾಮ್ರಕ್ಕೆ ಒಂದು ಭಾಗ ತವರ ಮಿಶ್ರಿತವಾಗಿರುವ ಕಂಚಿನಲ್ಲಿ ಗಂಟೆಗಳನ್ನು ತಯಾರಿಸುತ್ತಾರೆ.ಕೆಲವೊಮ್ಮೆ ಸತು-ಸೀಸ ಮತ್ತು ಬೆಳ್ಳಿ ಇವನ್ನೂ ಉಪಯೋಗಿಸುವುದುಂಟು. ಗಂಟೆಯಲ್ಲಿ ಬೆಳ್ಳಿಯನ್ನು ಬಳಸುವುದರಿಂದ ಅದರ ಧ್ವನಿ ಮಧುರವಾಗುವುದೆಂಬ ನಂಬಿಕೆ ಬಹಳ ಕಾಲದಿಂದ ಇದ್ದರೂ ಈಗ ಅದನ್ನು ಶಾಸ್ತ್ರವಿದರು ಒಪ್ಪುವುದಿಲ್ಲ. ಗಂಟೆಯ ಆಕೃತಿ, ಅದಕ್ಕೆ ಇರುವ ತಿರುವುಗಳು ಅದರ ಉದ್ದ. ಗಾತ್ರ, ಅಡ್ಡಳತೆ, ವಿವಿಧ ಭಾಗಗಳಲ್ಲಿನ ದಪ್ಪ ಇವನ್ನು ಅನುಭವದಿಂದ ನಿರ್ಧರಿಸುತ್ತಾರೆ.
ದೇವಸ್ಥಾನದಲ್ಲಿ ʼಗಂಟೆʼ ಏಕೆ ಬಾರಿಸುತ್ತಾರೆ..?
ಗಂಟೆ ಬಾರಿಸಿದಾಗ ಅದು ಧ್ವನಿಯ ಜೊತೆಗೆ ದೊಡ್ಡ ಕಂಪನವನ್ನು ಉಂಟು ಮಾಡುತ್ತದೆ. ಈ ಕಂಪನಗಳು ನಮ್ಮ ಸುತ್ತಲೂ ಬಹಳ ದೂರ ಹೋಗುತ್ತವೆ. ಇದರ ಪ್ರಯೋಜನವೆಂದರೆ ಅನೇಕ ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಸುತ್ತಲಿನ ಪರಿಸರವು ಶುದ್ಧವಾಗುತ್ತದೆ.
ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ಅತ್ಯಂತ ಪರಿಶುದ್ಧ ಮತ್ತು ಪವಿತ್ರವಾಗಿರುತ್ತದೆ ಎಂಬ ನಂಬಿಕೆಯಿದೆ. ಗಂಟೆ ಬಾರಿಸುವುದರಿಂದ ಸುತ್ತಮುತ್ತಲಿನ ನೆಗೇಟಿವ್ ಶಕ್ತಿಗಳು ಹೆದರಿ ಹೋಗುತ್ತದೆ ಎಂದು ನಂಬಲಾಗಿದೆ.
ಗಂಟೆ ಬಾರಿಸಲು ಧಾರ್ಮಿಕ ಕಾರಣವೆಂದರೆ ದೇವಾಲಯವನ್ನು ಪ್ರವೇಶಿಸಿದಾಗ, ದೇವಾಲಯದಲ್ಲಿರುವ ದೇವರ ಅನುಮತಿಯನ್ನು ಪಡೆಯಲು ಅಥವಾ ಅವನ ಗಮನವನ್ನು ಸೆಳೆಯಲು ಗಂಟೆಯನ್ನು ಬಾರಿಸಲಾಗುತ್ತದೆ. ಹಲವು ಬಾರಿ ದೇವಸ್ಥಾನದ ದೇವತೆಗಳು ಸುಪ್ತ ಸ್ಥಿತಿಯಲ್ಲಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಮೊದಲು ಗಂಟೆ ಬಾರಿಸಿ ಅವರನ್ನು ಎಬ್ಬಿಸಿ ನಂತರ ಪೂಜೆ ಮಾಡಬೇಕು ಎಂದು ಹೇಳಲಾಗುತ್ತದೆ. ಗಂಟೆ ಶಬ್ಧವನ್ನು ಆಲಿಸಿದರೆ ಚಿಂತೆ ದೂರವಾಗಿ, ಮನಸ್ಸು ಪ್ರಶಾಂತವಾಗುತ್ತದೆ. ಗಂಟೆಯ ಶಬ್ದವು ಸಂತೋಷಕ್ಕೆ ಕಾರಣವಾಗುತ್ತದೆ.