ಬಿಡುವಿಲ್ಲದ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರಿಗೂ ನೆಮ್ಮದಿಯ ಅಗತ್ಯವಿರುತ್ತದೆ. ದೈನಂದಿನ ಕೆಲಸಗಳು ಮತ್ತು ಒತ್ತಡದಿಂದ ದೂರವಿದ್ದು ಕೆಲವು ಕ್ಷಣಗಳನ್ನಾದರೂ ಶಾಂತಿಯಿಂದ ಕಳೆಯಲು ಎಲ್ಲರೂ ಬಯಸುತ್ತಾರೆ. ಸ್ನಾನಗೃಹ ಅಥವಾ ಬಾತ್‌ರೂಮ್ ಅಂತಹ ಸ್ಥಳಗಳಲ್ಲೊಂದು. ಅಲ್ಲಿ ನಿತ್ಯಕಾರ್ಯಗಳನ್ನು ಪೂರೈಸುವುದರ ಜೊತೆಗೆ ಸ್ವಲ್ಪ ಸಮಯ ವಿಶ್ರಾಂತಿಯನ್ನೂ ಪಡೆಯಬಹುದು.
ಬಾತ್‌ರೂಮಿನಲ್ಲಿ ಕೈಕಾಲು ತೊಳೆಯುವುದು, ಸ್ನಾನ ಮಾಡುವುದು ಮತ್ತು ನಿತ್ಯಕರ್ಮಗಳನ್ನು ಮಾಡುವುದು ಸಹಜ. ಆದ್ರೀಗ ಸ್ನಾನದ ಮನೆಯನೇ ಜನರು ಶಾಂತಿ ಮತ್ತು ನೆಮ್ಮದಿಯ ತಾಣವಾಗಿ ನೋಡಲಾರಂಭಿಸಿದ್ದಾರೆ.
ಹೊಸ ಸಂಶೋಧನೆಯೊಂದರಲ್ಲಿ ಜನರು ಬಾತ್ರೂಮಿನಲ್ಲಿ ಏಕೆ ಹೆಚ್ಚು ಸಮಯವನ್ನು ಕಳೆಯುತ್ತಾರೆ ಎಂಬ ಬಗ್ಗೆ ಅಧ್ಯಯನ ನಡೆಸಲಾಗಿದೆ. 2000 ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಲಾಗಿದೆ. ತಜ್ಞರ ಪ್ರಕಾರ 43 ಪ್ರತಿಶತ ಜನರು ಶಾಂತಿ ಮತ್ತು ಮೌನಕ್ಕಾಗಿ ಸ್ನಾನಗೃಹದಲ್ಲಿ ಸಮಯ ಕಳೆಯುತ್ತಾರೆ. ಶೇ.13ರಷ್ಟು ಜನರು ತಮ್ಮ ಸಂಗಾತಿಯಿಂದ ಕೊಂಚ ದೂರವಿದ್ದ ಸಮಯವನ್ನು ಕಳೆಯುತ್ತಾರೆ.
ಈ ಸಂಶೋಧನೆಯ ಪ್ರಕಾರ ಬ್ರಿಟಿಷ್ ವ್ಯಕ್ತಿಯೊಬ್ಬ ವಾರಕ್ಕೆ ಸರಾಸರಿ ಒಂದು ಗಂಟೆ 54 ನಿಮಿಷಗಳಷ್ಟು ಸಮಯವನ್ನು ಬಾತ್‌ರೂಮಿನಲ್ಲಿ ಕಳೆಯುತ್ತಾನೆ. ಎಲ್ಲಾ ವಯೋಮಾನದ ಮಹಿಳೆಯರಿಗಿಂತ ಪುರುಷರು ಸ್ನಾನಗೃಹದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ವಾರಕ್ಕೆ ಸರಾಸರಿ ಎರಡು ಗಂಟೆಗಳ ಕಾಲವನ್ನು ಸ್ನಾನಗೃಹದಲ್ಲಿ ವ್ಯಯಿಸುತ್ತಾರೆ. ಮಹಿಳೆಯರು ಒಂದು ಗಂಟೆ ನಲವತ್ತೆರಡು ನಿಮಿಷಗಳನ್ನು ಕಳೆಯುತ್ತಾರೆ.
ಜೀವನವು ತುಂಬಾ ಬಿಡುವಿಲ್ಲದ ಮತ್ತು ಒತ್ತಡದಿಂದ ಕೂಡಿದಾಗ ಪ್ರತಿಯೊಬ್ಬರಿಗೂ ಸ್ವಲ್ಪ ಶಾಂತಿ ಬೇಕು. ಜನರು ಸ್ನಾನಗೃಹದಲ್ಲಿ ವಿರಾಮ ಮತ್ತು ವಿಶ್ರಾಂತಿ ಪಡೆಯುತ್ತಾರೆ. ಬಾತ್ರೂಮಿಗೆ ಹೋದ ನಂತರವೂ ವಿಶ್ರಾಂತಿ ಪಡೆಯಲು ಸಾಧ್ಯವಾಗದೇ ಇದಲ್ಲಿ ಉಸಿರಾಟ ವ್ಯಾಯಾಮಗಳನ್ನು ಮಾಡಬಹುದು. ಐದು ಬೆರಳುಗಳ ಉಸಿರಾಟದ ವ್ಯಾಯಾಮವನ್ನು ತಜ್ಞರು ಶಿಫಾರಸು ಮಾಡುತ್ತಾರೆ. ಕೈಗಳನ್ನು ಮುಂದೆ ಇಟ್ಟುಕೊಂಡು ಇನ್ನೊಂದು ಕೈಯ ಬೆರಳುಗಳ ಮೇಲೆ ಒಂದು ಕೈಯ ತೋರು ಬೆರಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸಬೇಕು. ಮೇಲಕ್ಕೆ ಚಲಿಸುವಾಗ ಉಸಿರನ್ನು ತೆಗೆದುಕೊಂಡು ಕೆಳಕ್ಕೆ ಚಲಿಸುವಾಗ ಬಿಡಬೇಕು. ಇದು ಒತ್ತಡದಿಂದ ಪರಿಹಾರ ನೀಡುತ್ತದೆ.