ಧನ ತ್ರಯೋದಶಿ ದಿನ ಚಿನ್ನ, ಬಂಗಾರ ಸೇರಿದಂತೆ ಅನೇಕ ವಸ್ತುಗಳನ್ನು ಜನರು ಖರೀದಿ ಮಾಡ್ತಾರೆ. ಆ ದಿನ ಯಾವುದೇ ವಸ್ತುವನ್ನು ಖರೀದಿ ಮಾಡಿದ್ರೂ ಅದು ಡಬಲ್ ಆಗುತ್ತೆ ಎನ್ನುವ ನಂಬಿಕೆಯಿದೆ. ಇದೇ ಕಾರಣಕ್ಕೆ ಜನರು ಚಿನ್ನ ಖರೀದಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಆದ್ರೆ ಬರೀ ಚಿನ್ನ, ಬೆಳ್ಳಿ ಮಾತ್ರವಲ್ಲ ನೀವು ಧನ ತ್ರಯೋದಶಿ ದಿನ ಪೊರಕೆಯನ್ನು ಕೂಡ ಖರೀದಿ ಮಾಡಬಹುದು. ಧನ ತ್ರಯೋದಶಿ ದಿನ ಹೊಸ ಪೊರಕೆಯನ್ನು ಮನೆಗೆ ತರೋದ್ರಿಂದ ಶುಭವಾಗುತ್ತದೆ ಎಂದು ನಂಬಲಾಗಿದೆ.
ಪೊರಕೆಯನ್ನು ತಾಯಿ ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಧನ ತ್ರಯೋದಶಿ ದಿನ ಪೊರಕೆ ಖರೀದಿ ಮಾಡೋದ್ರಿಂದ ಸುಖ – ಶಾಂತಿ ಜೊತೆ ಆರ್ಥಿಕ ಪ್ರಗತಿಯಾಗುತ್ತದೆ ಎಂದು ನಂಬಲಾಗಿದೆ. ಪೊರಕೆ ಖರೀದಿ ಮಾಡಿದ್ರೆ ದಾರಿದ್ರ್ಯ ದೂರವಾಗುತ್ತದೆ. ಮನೆಯಲ್ಲಿ ಸದಾ ಸಂಪತ್ತು ನೆಲೆಸಿರುತ್ತದೆ.
ಧನ ತ್ರಯೋದಶಿ ದಿನ ಪೊರಕೆ ಖರೀದಿ ಮಾಡೋದ್ರಿಂದ ಸಾಕಷ್ಟು ಲಾಭವಿದೆ. ಪೊರಕೆ ಖರೀದಿ ಮಾಡಿದ್ರೆ ಎಂದೂ ಲಕ್ಷ್ಮಿ ಮನೆ ಬಿಟ್ಟು ಹೋಗುವುದಿಲ್ಲ ಎನ್ನಲಾಗುತ್ತದೆ. ಹಾಗೆಯೇ ಹಳೆ ಸಾಲದಿಂದ ಮುಕ್ತಿ ಸಿಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಖರೀದಿ ಮಾಡಿದ ಪೊರಕೆಯನ್ನು ಎಂದೂ ತುಳಿಯಬಾರದು. ಹಾಗೆಯೇ ಎಲ್ಲರಿಗೆ ಕಾಣುವಂತೆ ಪೊರಕೆ ಇಡಬಾರದು. ಪೊರಕೆಗೆ ಕಪ್ಪು ದಾರವನ್ನು ಕಟ್ಟಬೇಕು.