alex Certify ನೆಪ್ಚೂನ್ ಮತ್ತು ಯುರೇನಸ್‌ಗಳಿಗೆ ಏಕೆ ವಿಭಿನ್ನ ನೀಲಿ ಬಣ್ಣ? ಇಲ್ಲಿದೆ ವೈಜ್ಞಾನಿಕ ಉತ್ತರ… | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಪ್ಚೂನ್ ಮತ್ತು ಯುರೇನಸ್‌ಗಳಿಗೆ ಏಕೆ ವಿಭಿನ್ನ ನೀಲಿ ಬಣ್ಣ? ಇಲ್ಲಿದೆ ವೈಜ್ಞಾನಿಕ ಉತ್ತರ…

ಸೌರವ್ಯೂಹದಲ್ಲಿ ಅತ್ಯಂತ ಹೊರ ವಲಯದ ಎರಡು ಗ್ರಹಗಳು ಯುರೇನಸ್ ಮತ್ತು ನೆಪ್ಚೂನ್‌. ಎರಡರ ಬಣ್ಣವೂ ನೀಲಿಯೇ. ಆದರೆ ಭಿನ್ನವಾದ ನೀಲಿ ಭಿನ್ನ. ಇತ್ತೀಚಿನ ಸಂಶೋಧನೆ ಒಂದರ ಪ್ರಕಾರ, ಎರಡು ಗ್ರಹಗಳು ಈ ನೀಲಿ ಬಣ್ಣಗಳ ರಹಸ್ಯವನ್ನು ಪತ್ತೆ ಹಚ್ಚಿದ್ದಾರೆ.

ನಾಸಾ/ಇಎಸ್‌ಎಗಳ ಹಬಲ್ ಬಾಹ್ಯಾಕಾಶ ದೂರದರ್ಶಕ, ಜೆಮಿನಿ ನಾರ್ತ್ ಟೆಲಿಸ್ಕೋಪ್ ಮತ್ತು ನಾಸಾದ ಇನ್ಫ್ರಾರೆಡ್ ಟೆಲಿಸ್ಕೋಪ್ ಫೆಸಿಲಿಟಿಯ ದತ್ತಾಂಶಗಳ ನೆರವಿನೊಂದಿಗೆ, ಎರಡೂ ಗ್ರಹಗಳ ವೀಕ್ಷಣೆಗಳಿಗೆ ಹೊಂದಿಕೆಯಾಗುವ ಒಂದೇ ವಾತಾವರಣದ ಮಾದರಿಯನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಗ್ರಹಗಳ ಬಣ್ಣಗಳಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸುವ ಮೊದಲು, ಅವುಗಳ ಸಾಮ್ಯತೆಯ ಅಂಶಗಳನ್ನು ಗಮನಿಸೋಣ. ನೆಪ್ಚೂನ್ ಮತ್ತು ಯುರೇನಸ್ ಒಂದೇ ರೀತಿಯ ದ್ರವ್ಯರಾಶಿ, ಗಾತ್ರ ಮತ್ತು ವಾತಾವರಣ ಸಂಯೋಜನೆಗಳನ್ನು ಹೊಂದಿವೆ. ಆದರೆ ಅವುಗಳ ನೋಟ ಗಮನಿಸುವ ರೀತಿಯಲ್ಲೇ ಭಿನ್ನವಾಗಿವೆ. ನಾಸಾ ಸಂಶೋಧಕರ ಪ್ರಕಾರ, ನೆಪ್ಚೂನ್ ಅತ್ಯಂತ ಕಡು ಆಕಾಶ ನೀಲಿ ಬಣ್ಣದಲ್ಲಿದೆ. ಆದರೆ ಯುರೇನಸ್ ಹಾಗಲ್ಲ; ನೀಲಿ ಬಣ್ಣ ಮಸುಕಾಗಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಪ್ಲಾನೆಟರಿ ಫಿಸಿಕ್ಸ್‌ನ ಪ್ರಾಧ್ಯಾಪಕ ಪ್ಯಾಟ್ರಿಕ್ ಇರ್ವಿನ್ ನೇತೃತ್ವದ ಅಂತರಾಷ್ಟ್ರೀಯ ತಂಡ ಈ ಸಂಶೋಧನೆಯನ್ನು ನಡೆಸಿತು. ನೆಪ್ಚೂನ್ ಮತ್ತು ಯುರೇನಸ್‌ಗಳ ವಾತಾವರಣದಲ್ಲಿರುವ ಏರೋಸಾಲ್ ಪದರಗಳನ್ನು ವಿವರಿಸುವುದಕ್ಕೆ ಈ ತಂಡವು ಒಂದು ಮಾದರಿಯನ್ನು ಅಭಿವೃದ್ಧಿಪಡಿಸಿತು. ನೆಪ್ಚೂನ್ ಮತ್ತು ಯುರೇನಸ್‌ನ ವಾತಾವರಣದಲ್ಲಿ ಮೂರು ಏರೋಸಾಲ್ ಪದರಗಳಿವೆ ಎಂಬುದನ್ನು ಈ ಮಾದರಿ ಬಹಿರಂಗಪಡಿಸಿತು. ಈ ಮೂರು ಪದರಗಳಲ್ಲಿ, ಎರಡು ಗ್ರಹಗಳ ಬಣ್ಣಗಳ ಮೇಲೆ ಪರಿಣಾಮ ಬೀರುವ ಮಧ್ಯದ ಪದರ. ಮಬ್ಬು ಕಣಗಳ ಮಧ್ಯದ ಪದರವು ನೆಪ್ಚೂನ್‌ಗಿಂತ ಯುರೇನಸ್‌ನಲ್ಲಿ ಹೆಚ್ಚು ದಪ್ಪವಿದೆ. ಎರಡೂ ಗ್ರಹಗಳಲ್ಲಿ, ಈ ಪದರದಲ್ಲಿರುವ ಕಣಗಳ ಮೇಲೆ ಮೀಥೇನ್ ಐಸ್ ಘನೀಕರಿಸುತ್ತದೆ. ಇದರಿಂದಾಗಿ ಬಣ್ಣಗಳ ವ್ಯತ್ಯಾಸ ಗೋಚರವಾಗುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...