ಹಾವಿನ ಹೆಸರು ಕೇಳಿದ್ರೆ ಭಯಪಡುವವರಿದ್ದಾರೆ. ಹಾವು ಹತ್ತಿರ ಬಂದ್ರೆ ದೂರ ಓಡಿ ಹೋಗ್ತಾರೆ. ಹಾವು ಅಪಾಯಕಾರಿ. ಇದೇ ಕಾರಣಕ್ಕೆ ಎಲ್ಲರೂ ಹಾವು ಹಿಡಿಯುವ ಸಾಹಸಕ್ಕೆ ಕೈ ಹಾಕುವುದಿಲ್ಲ. ನಿಪುಣರು ಮಾತ್ರ ಹಾವು ಹಿಡಿಯುತ್ತಾರೆ. ಹಾವಿನ ಬಾಲವನ್ನು ಯಾಕೆ ಹಿಡಿಯಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ.
ಹಾವಿನ ಮುಖವನ್ನು ನಿಪುಣರು ಹಿಡಿಯುವುದಿಲ್ಲ. ಹಾವು ಹಿಡಿಯುವವರು, ಹಾವಿನ ಬಾಲವನ್ನು ಹಿಡಿಯುತ್ತಾರೆ. ಇದಕ್ಕೆ ಕೆಲ ಕಾರಣವಿದೆ. ಹಾವಿನ ದೇಹದಲ್ಲಿ ಬಾಯಿಯಿಂದ ಹಿಂಭಾಗದವರೆಗೆ ಮೂಳೆಗಳಿವೆ. ಇದನ್ನು ವರ್ಟೆಬ್ರೇ ಎಂದು ಕರೆಯಲಾಗುತ್ತದೆ. ಆದರೆ ಹಾವಿನ ಬಾಲವು ಇಡೀ ದೇಹಕ್ಕಿಂತ ಕಡಿಮೆ ಮೂಳೆಗಳನ್ನು ಹೊಂದಿದೆ. ಹಾಗಾಗಿ ಹಾವು, ಬಾಲದ ಮೇಲೆ ಒತ್ತಡ ಹಾಕಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಹಾವನ್ನು ಬಾಲದಿಂದ ಹಿಡಿದಾಗ ನಿಯಂತ್ರಣ ಸುಲಭ. ಹಾವಿನ ಬಾಲವನ್ನು ಸ್ವಲ್ಪ ತಿರುಗಿಸಿ ಹಿಡಿಯಲಾಗುತ್ತದೆ. ಯಾಕೆಂದ್ರೆ ಹಾವಿನ ಬಾಯಿ, ನಮ್ಮ ಕೈನಿಂದ ದೂರವಿರಲಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ.
ಹಾವಿನ ಬಾಲ ಹಿಡಿದ್ರೆ ಹಾವು ಕಚ್ಚುವುದಿಲ್ಲ ಎಂದಲ್ಲ. ಕೆಲವೊಮ್ಮೆ ಹಾವು, ಕಚ್ಚುವ ಅಪಾಯವಿದೆ. ಹಾಗಾಗಿ ತಜ್ಞರನ್ನು ಹೊರತುಪಡಿಸಿ ಯಾರೂ ಹಾವನ್ನು ಹಿಡಿಯುವ ಸಾಹಸಕ್ಕೆ ಹೋಗಬಾರದು.