ಅನೇಕ ನಗರಗಳಲ್ಲಿ ರಸ್ತೆಬದಿಯಲ್ಲಿ ಬೆಂಚುಗಳನ್ನು ಕಾಣಬಹುದು. ವಾಯು ವಿಹಾರಿಗಳು ಅಥವಾ ಪಾದಚಾರಿಗಳು ಕುಳಿತುಕೊಳ್ಳಲು ಈ ರೀತಿ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಇಲ್ಲೊಂದು ನಗರದಲ್ಲಿ ಜನರು ಅರಾಮವಾಗಿ ಕುಳಿತುಕೊಳ್ಳಲಾಗದಷ್ಟು ಎತ್ತರದಲ್ಲಿ ಈ ಬೆಂಚುಗಳನ್ನು ಸ್ಥಾಪಿಸಲಾಗಿದೆ.
ಬೆಂಚುಗಳು ತುಂಬಾ ಎತ್ತರವಾಗಿದ್ದು, ಬಹುಶಃ ಅವುಗಳ ಮೇಲೆ ಕುಳಿತುಕೊಳ್ಳಲು ಏಣಿ ಬೇಕಾಗಬಹುದು.
40 ವರ್ಷ ದಾಟಿದ ಮಹಿಳೆಯರು ʼಫಿಟ್ನೆಸ್ʼ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್
ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿರುವ ರಸ್ತೆಯಲ್ಲಿ ನಡೆದಾಡಿದರೆ ಸಾಕಷ್ಟು ಎತ್ತರದ ಬೆಂಚುಗಳು ಕಾಣ ಸಿಗುತ್ತವೆ. ಈ ಬೆಂಚುಗಳನ್ನು ಹವಾಮಾನ ಬದಲಾವಣೆಯ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸ್ಥಾಪಿಸಿದೆ. ತಾಪಮಾನ ಹೆಚ್ಚುತ್ತಿದ್ದು 2100 ರ ವೇಳೆಗೆ ಸಮುದ್ರ ಮಟ್ಟವು 1 ಮೀಟರ್ ಏರಿಕೆಯಾಗಲಿದೆ.
ಕೋಪನ್ ಹ್ಯಾಗನ್ ಬೆಂಚ್-2100 ಎಡಿಷನ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಬೆಂಚ್ ಚಾನಲ್ ಒಂದರ ಅವರ್ ಅರ್ಥ್‌ನ ಭಾಗವಾಗಿದೆ. ಸಮುದ್ರ ಮಟ್ಟ ಏರಿಕೆಯ ಅಪಾಯದ ಬಗ್ಗೆ ಜನರಿಗೆ ತಿಳಿಸಲು ಬಯಸುತ್ತದೆ.