alex Certify ಮಹಿಳೆಯರಿಗೆ ಪುರುಷರ ಮೇಲೇಕೆ ಆಸಕ್ತಿ ಕುಂದುತ್ತದೆ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಪುರುಷರ ಮೇಲೇಕೆ ಆಸಕ್ತಿ ಕುಂದುತ್ತದೆ……?

ತಮ್ಮ ಸಂಗಾತಿಗಳು ಸಂಬಂಧದ ಮೇಲೆ ಆಸಕ್ತಿ ತೋರದೇ ಇದ್ದ ವೇಳೆ “ಆಕೆಗೆ ನನ್ನ ಮೇಲೆ ಇಷ್ಟವಿಲ್ಲದಂತಾಯಿತೇ?” ಎಂಬ ಪ್ರಶ್ನೆ ಅನೇಕ ಪುರುಷರಿಗೆ ಸಮಾನ್ಯವಾಗಿ ಬರುತ್ತಲೇ ಇರುತ್ತದೆ. ಕಾಳಜಿ ಮತ್ತು ಗಮನಗಳು ಕಡಿಮೆ ಆಗುವುದು ಮಹಿಳೆಯರಿಗೆ ತಮ್ಮ ಪುರುಷ ಸಂಗಾತಿಗಳ ಮೇಲೆ ಆಸಕ್ತಿ ಕ್ಷೀಣಿಸುತ್ತಿದೆ ಎಂಬ ಲಕ್ಷಣ. ಇದು ಸಂಪರ್ಕದಲ್ಲಿ ದೋಷಗಳಿರುವ ಕಾರಣದಿಂದಲೂ ಆಗಬಹುದು ಅಥವಾ ತಮ್ಮ ಸಂಗಾತಿಯ ಮೇಲೆ ಮಹಿಳೆಯರು ಆಸಕ್ತಿ ಕಳೆದುಕೊಳ್ಳುವುದರಿಂದಲೂ ಆಗಬಹುದು. ಇಂಥ ಒಂದಷ್ಟು ಕಾರಣಗಳನ್ನು ಗಮನಿಸೋಣ.

* ತಾವು ಸಂಬಂಧದಲ್ಲಿರುವ ಪುರುಷರ ಮೇಲೆ ಮಹಿಳೆಯರಿಗೆ ಆಸಕ್ತಿ ಹೋಗಿಬಿಟ್ಟಿರಬಹುದು ಏಕೆಂದರೆ ಅವರ ಆಯ್ಕೆಗಳಿಗೆ ತಮ್ಮ ಹಾಲಿ ಸಂಗಾತಿಗಿಂತ ಹೆಚ್ಚಿನ ಸಹಮತ ಹೊಂದಿರುವ ಪುರುಷರು ಅವರಿಗೆ ಸಿಕ್ಕಿರಬಹುದು. ನಿಮ್ಮ ಗರ್ಲ್‌ಫ್ರೆಂಡ್ ಅಥವಾ ಕ್ರಶ್‌ ತಾನು ಸರಿಯಾದ ಆಲೋಚನೆ ಮಾಡುತ್ತಿದ್ದೇನೋ ಇಲ್ಲವೋ ಎಂದು ಲೆಕ್ಕಾಚಾರ ಹಾಕುತ್ತಿರಬಹುದು.

* ತಾವು ಸಂಬಂಧವೊಂದಕ್ಕೆ ಬಹುಬೇಗ ಬಂದುಬಿಟ್ಟಿದ್ದೇವೆ ಎಂದೆನಿಸಿದ ಕೂಡಲೇ ಮಹಿಳೆಯರಿಗೆ ಕೆಲವೊಮ್ಮ ಹಿಂದಡಿ ಇಡುವಂತೆ ಆಗುತ್ತದೆ. ಇಂಥ ಘಳಿಗೆಯಲ್ಲಿ ಸಂಬಂಧವನ್ನು ಬೇಗ ಕಳೆದುಕೊಳ್ಳಬೇಕೆಂದು ಮಹಿಳೆಯರಿಗೆ ಅನಿಸಲೂಬಹುದು.

 * ಲೈಂಗಿಕಾಸಕ್ತಿಯಲ್ಲಿ ಸರಿಸಮಾನತೆ ಇಲ್ಲದೇ ಇರುವುದು ಸಹ ಮಹಿಳೆಯರಿಗೆ ತಮ್ಮ ಪುರುಷ ಸಂಗಾತಿಗಳ ಮೇಲೆ ಆಸಕ್ತಿ ಕಳೆದುಕೊಳ್ಳುವಂತೆ ಮಾಡಬಲ್ಲದು.

* ಕೆಲವೊಮ್ಮೆ ಸಂಬಂಧಕ್ಕೆ ಒಳಗಾಗಲು ಇದು ಸೂಕ್ತ ಸಮಯವಲ್ಲ ಎಂದು ಮಹಿಳೆಗೆ ಅನಿಸಬಹುದು. ಎಲ್ಲದಕ್ಕೂ ಸರಿಯಾದ ಸಮಯ ಎಂಬುದು ಇದ್ದೇ ಇರುತ್ತದೆ. ಬಹಳಷ್ಟು ಬಾರಿ ನಾವು ಎಣಿಸಿದಂತೆ ಲೆಕ್ಕಾಚಾರಗಳು ಘಟಿಸುವುದಿಲ್ಲ. ತನ್ನ ಸಂಗಾತಿಗಿಂತಲೂ ಮಹಿಳೆಯೊಬ್ಬಳು ತನ್ನ ಮೇಲೆ ಹಾಗೂ ತನ್ನ ಅಭಿವೃದ್ಧಿಯತ್ತಲೇ ಹೆಚ್ಚಿನ ಒಲವು ಹೊಂದಿದ್ದರೆ ಆಕೆಗೆ ಅದೇ ಪುರುಷನ ಮೇಲೆ ಆಸಕ್ತಿ ಇಲ್ಲದೇ ಇರಬಹುದು.

* ಸಂಬಂಧವೊಂದರಲ್ಲಿ ಜಗಳಗಳು ಬಹಳ ಆದಲ್ಲಿ, ಮಹಿಳೆಯರಿಗೆ ತಮಗಾಗಿ ಹೋರಾಟ ಮಾಡುವುದರದಲ್ಲಿ ಅರ್ಥವಿಲ್ಲ ಎನಿಸುತ್ತದೆ. ಕೆಲವೊಮ್ಮೆ ಇದು ಅತಿ ಎನಿಸಲೂಬಹುದು. ಇದರಿಂದ ಆಕೆಗೆ ’ಸಾಕಪ್ಪಾ’ ಅನಿಸಿಬಿಡಬಹುದು.

Why Women Lose Interest in the Men They Care About - WomenWorking

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...