
ಕಾಮುಕರು ಹೆಣ್ಣುಮಕ್ಕಳ ಮೇಲಷ್ಟೇ ಅಲ್ಲದೇ, ಪ್ರಾಣಿಗಳ ಮೇಲೂ ತಮ್ಮ ಕಾಮತೃಷೆ ತೀರಿಸಿಕೊಳ್ಳುವಂತಹ ನಿದರ್ಶನಗಳನ್ನ ನೋಡಿರುತ್ತೀರ. ಆದರೆ ಸಮಾಧಿಯೊಳಗಿನ ಹೆಣ್ಣಿನ ಮೃತದೇಹವನ್ನ ಹೊರತೆಗೆದು ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತಹ ಘಟನೆಗಳೂ ಸಹ ಬೆಚ್ಚಿಬೀಳಿಸಿದ್ದು ಮನುಕುಲ ತಲೆತಗ್ಗಿಸುವಂತೆ ಮಾಡಿದೆ.
ಪಾಕಿಸ್ತಾನದಲ್ಲಿ ಇಂತಹ ಘಟನೆ ಜರುಗಿದ ನಂತರ ಪೋಷಕರು ತಮ್ಮ ಹೆಣ್ಣುಮಕ್ಕಳ ಸಮಾಧಿಯನ್ನ ಬೀಗ ಹಾಕಿ ರಕ್ಷಿಸುತ್ತಿದ್ದಾರೆ.
2013 ರಲ್ಲಿ ಗುಜ್ರಾನ್‌ವಾಲಾದ ಕಿಲಾ ದಿದರ್ ಸಿಂಗ್‌ನಲ್ಲಿರುವ ಸ್ಮಶಾನದ ಹೊರಗೆ ಬಾಲಕಿಯ ಶವ ಪತ್ತೆಯಾಗಿತ್ತು. ಶವದ ಜೊತೆ ಕ್ರೂರವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು ಎಂಬುದು ಬಯಲಾಗಿತ್ತು.
ಈ ಘಟನೆಯ ನಂತರ ಅಂದಿನ ಪಂಜಾಬ್ ಮುಖ್ಯಮಂತ್ರಿ ಶಹಬಾಜ್ ಷರೀಫ್ ತಕ್ಷಣದ ತನಿಖೆಗೆ ಆದೇಶಿಸಿದ್ದರು.
ಮುಹಮ್ಮದ್ ಮುನೀರ್ ಅವರ ಹದಿನೈದು ವರ್ಷದ ಮಗಳು ಝೈನಾಬ್ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದರು.
ಅವರ ಕುಟುಂಬದವರು ಮರುದಿನ ರಾತ್ರಿ ಆಕೆಯನ್ನ ಸಮಾಧಿ ಮಾಡಿದ್ದರು. ತದ ನಂತರ ಸ್ಥಳೀಯರು ಸ್ಮಶಾನದ ಹೊರಗೆ ಆಕೆಯ ಶವವನ್ನು ಕಂಡು ಕುಟುಂಬ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಲೈಂಗಿಕ ಉದ್ದೇಶದಿಂದ ಶವವನ್ನು ಸಮಾಧಿಯಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ವಿಚಾರಣೆಯ ನಂತರ ಶವವನ್ನು ಅಪವಿತ್ರಗೊಳಿಸಿರುವುದು ಸಾಬೀತಾಗಲಿದೆ ಮತ್ತು ಅಪರಾಧಿಗಳಿಗೆ ಸೂಕ್ತ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು.
ಕಿಲಾ ದಿದರ್ ಸಿಂಗ್ ಪೊಲೀಸರು ಶಂಕಿತನನ್ನು ಬಂಧಿಸಿ ತನಿಖೆ ನಡೆಸಿದ್ದರು. ಈ ಘಟನೆಯ ಬಳಿಕ ಪಾಕಿಸ್ತಾನದಲ್ಲಿ ಪೋಷಕರು ತಮ್ಮ ಹೆಣ್ಣುಮಕ್ಕಳ ಸಮಾಧಿಗೆ ಬೀಗ ಹಾಕಿ ಅವರ ಶವಗಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ.