ಆಸ್ತಿಯನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗಿದೆ. ಫ್ರೀಹೋಲ್ಡ್ ಮತ್ತು ಗುತ್ತಿಗೆ. ಮಾಲೀಕರನ್ನು ಹೊರತುಪಡಿಸಿ ಯಾರಿಗೂ ಪ್ರೀಹೋಲ್ಡ್ ಆಸ್ತಿ ಮೇಲೆ ಹಕ್ಕಿರುವುದಿಲ್ಲ. ಆದರೆ ಗುತ್ತಿಗೆ ಪಡೆದ ಆಸ್ತಿಗಳನ್ನು ನಿರ್ಮಾಣದ ಸಮಯದಿಂದ 99 ವರ್ಷಗಳವರೆಗೆ ಗುತ್ತಿಗೆಗೆ ನೀಡಲಾಗುತ್ತದೆ.
ಪ್ರದೇಶದ ಅಭಿವೃದ್ಧಿ ಪ್ರಾಧಿಕಾರವು ,ಬಿಲ್ಡರ್‌ಗಳಿಗೆ ಭೂಮಿಯನ್ನು ಅಭಿವೃದ್ಧಿಪಡಿಸಲು ಮತ್ತು ಆಸ್ತಿಯನ್ನು 99 ವರ್ಷಗಳವರೆಗೆ ಗುತ್ತಿಗೆ ನೀಡಲು ಅಧಿಕಾರ ನೀಡುತ್ತದೆ. ಇದರರ್ಥ ವಸತಿ ಅಥವಾ ವಾಣಿಜ್ಯ ಆಸ್ತಿಯನ್ನು ಖರೀದಿಸುವವರು 99 ವರ್ಷಗಳವರೆಗೆ ಅದರ ಹಕ್ಕನ್ನು ಹೊಂದಿರುತ್ತಾರೆ. ಇದಾದ ನಂತರ ಭೂಮಿಯ ಮಾಲೀಕರಿಗೆ ಹಕ್ಕು ಬರುತ್ತದೆ. ಗುತ್ತಿಗೆ ಪಡೆದ ಗ್ರಾಹಕರು, ಜಮೀನಿನ ಬಾಡಿಗೆಯನ್ನು ಮಾಲೀಕರಿಗೆ ಪಾವತಿಸಬೇಕು. ಅವಧಿಯ ಮುಕ್ತಾಯದ ನಂತರ ಇದನ್ನು ನವೀಕರಿಸಬಹುದು.
ʼವಧುʼ ರೂಪದಲ್ಲಿದ್ದ ತಾಯಿಯನ್ನು ನೋಡಿ ಹೀಗಿತ್ತು ಪುಟ್ಟ ಬಾಲೆಯ ರಿಯಾಕ್ಷನ್
ಗುತ್ತಿಗೆ ಅವಧಿ ಮುಗಿದ ನಂತ್ರ ಮೊತ್ತ ಪಾವತಿಸಿ ಫ್ರೀಹೋಲ್ಡ್ ಆಗಿ ಪರಿವರ್ತಿಸಬಹುದು. ಇಲ್ಲವೆ ಗುತ್ತಿಗೆಯನ್ನು ವಿಸ್ತರಿಸಬಹುದು.
ಮಾಲೀಕರು ಮತ್ತು ಗ್ರಾಹಕರ ನಡುವೆ ನಿಗದಿತ ಮೊತ್ತಕ್ಕೆ ಒಪ್ಪಂದವಾಗುತ್ತದೆ. ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಇಬ್ಬರ ಹಕ್ಕುಗಳನ್ನು ಒಪ್ಪಂದದಲ್ಲಿ ಉಲ್ಲೇಖಿಸಲಾಗುತ್ತದೆ.
ಆರಂಭದಲ್ಲಿ 99 ವರ್ಷ ಸುರಕ್ಷಿತ ಅವಧಿಯಾಗಿ ಕಂಡುಬಂದಿತ್ತು. ಗುತ್ತಿಗೆ ಅವಧಿ, ಮನುಷ್ಯನ ಜೀವಿತಾವಧಿಯನ್ನು ಜೊತೆ ಸಂಬಂಧ ಹೊಂದಿದೆ. ಆಸ್ತಿಯ ಮಾಲೀಕತ್ವವನ್ನು ರಕ್ಷಿಸಲು ಇದು ಸರಿಯಾದ ಅವಧಿ ಎಂದು ನಂಬಲಾಗಿದೆ. ಹೊಸ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಗುತ್ತಿಗೆ ಭೂಮಿಯಲ್ಲಿ ಮಾತ್ರ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಮುಂದಾಗಿದೆ. ಗುತ್ತಿಗೆ ಅವಧಿಯ ವೆಚ್ಚ ಪಾವತಿಸಿದ ನಂತರ ಅವಧಿಯನ್ನು 999 ವರ್ಷಗಳವರೆಗೆ ವಿಸ್ತರಿಸಬಹುದು.
ನಿಮಗೆ ಈ ಸಮಸ್ಯೆಗಳಿದ್ದರೆ ಹಾಲಿನಿಂದ ದೂರವಿರಿ
ಗುತ್ತಿಗೆ ಆಸ್ತಿಯನ್ನು ಖರೀದಿಸುವಾಗ, ಮಾರಾಟಗಾರನು, ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರದಿಂದ ಒಪ್ಪಿಗೆ ಪತ್ರ ಪಡೆದಿರುವ ಬಗ್ಗೆ ಮಾಹಿತಿ ಪಡೆಯಬೇಕು. ಬಿಲ್ಡರ್‌ಗಳು ಸಹ ಗುತ್ತಿಗೆ ಭೂಮಿಯಲ್ಲಿ ಫ್ಲಾಟ್‌ಗಳನ್ನು ನಿರ್ಮಿಸಲು ಬಯಸುತ್ತಾರೆ. ಫ್ರೀಹೋಲ್ಡ್ ಭೂಮಿಗೆ ಹೋಲಿಸಿದರೆ ಅವುಗಳ ವೆಚ್ಚ ಕಡಿಮೆ.
ಆದ್ರೆ ಬ್ಯಾಂಕುಗಳು ಗುತ್ತಿಗೆ ಪಡೆದ ಆಸ್ತಿಯ ಖರೀದಿಗೆ ಸಾಲ ನೀಡಲು ಇಷ್ಟಪಡುವುದಿಲ್ಲ. ಅದ್ರಲ್ಲೂ ಗುತ್ತಿಗೆ ಅವಧಿ 30 ವರ್ಷಕ್ಕಿಂತ ಕಡಿಮೆಯಿದ್ದರೆ ಬ್ಯಾಂಕ್ ಇದಕ್ಕೆ ಒಪ್ಪುವುದಿಲ್ಲ.