ತನಗೆ 16 ವರ್ಷಗಳ ವಯಸ್ಸಿದ್ದು, ತಾನಿನ್ನೂ ಪ್ರೌಢಶಾಲೆಯಲ್ಲೇ ಇದ್ದೇನೆ ಎಂದು ಯೋಚಿಸುತ್ತಾ ನಿದ್ರೆಯಿಂದ ಎದ್ದ 37 ವರ್ಷದ ಡೇನಿಯಲ್ ಪೋರ್ಟರ್, ಶಾಲೆಗೆ ಹೋಗಲು ತಯಾರಾಗಲು ಆರಂಭಿಸಿದ್ದಾರೆ.
ಟೆಕ್ಸಾಸ್‌ನ ಡೇನಿಯಲ್ ತನಗೆ ರುತ್ ಹೆಸರಿನ ಮಡದಿ ಇದ್ದು 10 ವರ್ಷದ ಮಗಳೂ ಇದ್ದಾಳೆ ಎನ್ನುವುದೇ ಮರೆತುಹೋಗಿದೆ.
ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ವಿವರ ಕೋರಿದ ಕೇಂದ್ರ
ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡಾಗ, ’ತಾನೇಕೆ ದಪ್ಪ ಆಗಿ, ವಯಸ್ಸಾದವನಂತೆ ಕಾಣುತ್ತಿದ್ದೇನೆ’ ಎಂದು ಪಶ್ನಿಸಿಕೊಂಡಿದ್ದಾರೆ. ತಾನು ಆತನ ಮಡದಿ ಎಂದು ಡೇನಿಯಲ್‌ಗೆ ಮನವರಿಕೆ ಮಾಡಲು ರುತ್‌ಗೆ ಭಾರೀ ಕಷ್ಟವಾಗಿದೆ.
ಡೇನಿಯಲ್ ಸದ್ಯಕ್ಕೆ ಟ್ರಾನ್ಸಿಯೆಂಟ್ ಗ್ಲೋಬಲ್ ಅಮ್ನೇಶಿಯಾದಿಂದ ನರಳುತ್ತಿದ್ದು, ತಮ್ಮ ಜೀವಿತದ 20 ವರ್ಷಗಳಲ್ಲಿ ಏನಾಗಿದೆ ಎಂಬದು ಅಸ್ಪಷ್ಟವಾಗಿದೆ ಎಂದು ಅವರನ್ನು ಚಿಕಿತ್ಸೆಗೆ ಒಳಪಡಿಸಿದ ಮನೋವೈದ್ಯರು ತಿಳಿಸಿದ್ದಾರೆ. 24 ಗಂಟೆಗಳ ಒಳಗೆ ಅವರು ಸಹಜತೆಗೆ ಬರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ವಿಪರೀತ ಒತ್ತಡಕ್ಕೊಳಗಾಗಿರುವ ಡೇನಿಯಲ್ ಈಗ ಹೀಗೆ ಆಗಿದ್ದಾರೆ ಎಂದು ವೈದ್ಯರು ತಿಳಿಸಿದ ಬಳಿಕ, ಅವರನ್ನು ಸಹಜ ಸ್ಥಿತಿಗೆ ತರಲುವ ಪ್ರಯತ್ನದಲ್ಲಿ ಮಡದಿ ರುತ್, ಡೇನಿಯಲ್ ರನ್ನು ಅವರ ಹಳೆಯ ಏರಿಯಾಗೆ ಕರೆದುಕೊಂಡು ಹೋಗಿ ಹಳೆಯ ಸ್ನೇಹಿತರನ್ನೆಲ್ಲಾ ಪರಿಚಯ ಮಾಡಿಕೊಡುತ್ತಿದ್ದಾರೆ.