ನವದೆಹಲಿ: ಮುಸ್ಲಿಂ ಪ್ರಿಯಕರನಿಂದ ಬರ್ಬರವಾಗಿ ಹತ್ಯೆಗೊಳಗಾದ ಶ್ರದ್ಧಾ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆರೋಪಿ ಅಫ್ತಾಭ್ ಶ್ರದ್ಧಾಳನ್ನು ಕೊಲೆ ಮಾಡಲು ಹಲವು ರೀತಿಯ ಯೋಜನೆ ರೂಪಿಸಿದ್ದರೂ ಸಿಕ್ಕಿಬಿದ್ದಿದ್ದಾನೆ.
ಆಕೆಯನ್ನು ಸಾಯಿಸಿ ಅವಳ ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಜ್ನಲ್ಲಿ ಇಟ್ಟ ಬಳಿಕವೂ ಯಾರಿಗೂ ಸಂದೇಹ ಬರಬಾರದು ಎನ್ನುವ ಕಾರಣಕ್ಕೆ ಆಕೆಯ ಸಾಮಾಜಿಕ ಜಾಲತಾಣದಲ್ಲಿ ಕೆಲವು ಪೋಸ್ಟ್ ಹಾಕುತ್ತಿದ್ದ. ಅವಳು ಬದುಕಿದ್ದಾಳೆ ಎನ್ನುವುದನ್ನು ಬಿಂಬಿಸುವ ಉದ್ದೇಶ ಅವನಿಗಿತ್ತು.
ಇಷ್ಟೇ ಅಲ್ಲದೇ, ಅಫ್ತಾಬ್ ಶ್ರದ್ಧಾಳ ಬ್ಯಾಂಕ್ ಖಾತೆಯಿಂದ 54 ಸಾವಿರ ರೂ.ಗಳನ್ನು ಆನ್‌ಲೈನ್ ಮೂಲಕ ಲಪಟಾಯಿಸಿದ್ದ. ಶ್ರದ್ಧಾಳ ಫೋನ್ ಸ್ವಿಚ್ ಆಫ್ ಮಾಡುವುದಕ್ಕೂ ಮೊದಲು ಅಂದ್ರೆ ಮೇ 22ರಿಂದ ಮೇ 26ರ ನಡುವೆ ಶ್ರದ್ಧಾಳ ಬ್ಯಾಂಕ್ ಅಕೌಂಟ್ ನಿಂದ 54 ಸಾವಿರ ರೂಪಾಯಿಯನ್ನು ತನ್ನ ಅಕೌಂಟ್ ಗೆ ವರ್ಗಾವಣೆ ಮಾಡಿಕೊಂಡಿದ್ದ. ಅಲ್ಲದೇ ಶ್ರದ್ಧಾಳ ಫೋನ್ ನಿಂದ ದೆಹಲಿಯ ಛತ್ತರ್ಪುರದಿಂದ ಆನ್ಲೈನ್ ವಹಿವಾಟು ನಡೆಸಿದ್ದ. ಆದರೆ ಇದೇ ಆತನೇ ಕೊಲೆಗಾರ ಎನ್ನುವ ಸುಳಿವು ಕೂಡ ನೀಡಿತು.
ಶ್ರದ್ಧಾಳನ್ನು ಹತ್ಯೆಗೈದ ಬಳಿಕ ಅಫ್ತಾಬ್ ಈ ಕೃತ್ಯ ಎಸಗಿದ್ದ. ಆಕೆಯ ಮೊಬೈಲ್ ಫೋನ್ ಪಾಸ್‌ವರ್ಡ್ ತನಗೆ ಗೊತ್ತು ಎಂದು ಅಫ್ತಾಬ್ ಪೊಲೀಸರಿಗೆ ಹೇಳಿದ್ದಾನೆ. ಅಷ್ಟೇ ಅಲ್ಲ, ಶ್ರದ್ಧಾ ಹತ್ಯೆ ಬಳಿಕ ಆಕೆಯ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳನ್ನೂ ಅಫ್ತಾಬ್ ಬಳಸಿದ್ದಾನೆ ಎನ್ನಲಾಗಿದೆ.
ಶ್ರದ್ಧಾಳ ಅಕೌಂಟ್ ನಿಂದ ಅಫ್ತಾಬ್ ಅಕೌಂಟ್ ಗೆ ಹಣ ವರ್ಗಾವಣೆಯಾಗಿರುವ ವರದಿ ಸಿಕ್ತಿದಂತೆಯೇ ಅಫ್ತಾಬ್ ನ ಮೇಲೆ ಪೊಲೀಸರಿಗೆ ಇದ್ದ ಅನುಮಾನ ಬಲವಾಗಿತ್ತು. ತಕ್ಷಣವೇ ಮಾಣಿಕ್ ಪುರ ಪೊಲೀಸರು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇದೀಗ ಅಫ್ತಾಬ್ ನ ಕ್ರೌರ್ಯ ಒಂದೊಂದೇ ತೆರೆದುಕೊಳ್ಳುತ್ತಿದೆ.