ಫುಟ್ಬಾಲ್ ಜಗತ್ತಿನ ಅತಿ ದೊಡ್ಡ ಕೂಟಗಳಲ್ಲಿ ಒಂದಾದ ಯೂರೋ ಚಾಂಪಿಯನ್‌ಶಿಪ್‌ನಲ್ಲಿ ಇಟಲಿ ಜಯಿಸಿದ ಬಳಿಕ ಇದೀಗ ಮುಂದಿನ ವರ್ಷದ ಫುಟ್ಬಾಲ್ ವಿಶ್ವಕಪ್‌ನಲ್ಲಿ ಯಾರು ಚಾಂಪಿಯನ್ ಆಗಲಿದ್ದಾರೆ ಎಂಬ ಊಹೆಗಳು ಎದ್ದಿವೆ.
Cameron’ (@lawseyitfc) ಹೆಸರಿನ ಟ್ವಿಟರ್ ಹ್ಯಾಂಡಲ್‌ನ ಬಳಕೆದಾರರೊಬ್ಬರು ಫೆಬ್ರವರಿ 22, 2013ರಲ್ಲೇ ಈ ವರ್ಷದ ಯೂರೋ ಚಾಂಪಿಯನ್ ಇಟಲಿ ಆಗಲಿದೆ ಎಂದು ಊಹಿಸಿದ್ದರು.
“ಪೆನಾಲ್ಟಿ ಶೂಟೌಟ್‌ನಲ್ಲಿ 2020ರ ಯೂರೋ ಫೈನಲ್‌ನಲ್ಲಿ ಇಂಗ್ಲೆಂಡ್ ಇಟಲಿ ವಿರುದ್ಧ ಸೋತಿದೆ, ಆಗಿನಿಂದ ಏನೇನೂ ಬದಲಾಗಿಲ್ಲ!” ಎಂದು ಈ ನೆಟ್ಟಿಗ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಫುಟ್ಬಾಲ್ ಪ್ರಿಯ ನೆಟ್ಟಿಗರ ವಲಯದಲ್ಲಿ ಭಾರೀ ವೈರಲ್ ಆಗಿತ್ತು.
ಅಸಹಜ ವರ್ತನೆ ತೋರಿ ಎಸ್ಕೇಪ್: ಆಸ್ಪತ್ರೆ ಕಿಟಕಿಯಿಂದ ಜಿಗಿದು ವಿಚಾರಣಾಧೀನ ಕೈದಿ ಪರಾರಿ
ಅಂತೆಯೇ ಮೊನ್ನೆ ತಾನೇ ಮುಗಿದ ಯೂರೋ 2020ರ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪೆನಾಲ್ಟಿ ಶೂಟ್-ಔಟ್‌ನಲ್ಲಿ 3-2 ಅಂತರದಲ್ಲಿ ಗೆದ್ದ ಇಟಲಿ ಟ್ರೋಫಿ ಎತ್ತಿ ಸಂಭ್ರಮಿಸಿದೆ.
ಎಂಟು ವರ್ಷಗಳ ಬಳಿಕ ಅವರ ಊಹೆ ಸರಿಯಾಗಿದೆ ಎಂದು ತಿಳಿದು ಬಂದ ಮೇಲೆ ಇದೀಗ ಈ ನೆಟ್ಟಿಗನಿಗೆ ಪುಟ್ಬಾಲ್ ವಿಶ್ವಕಪ್‌ನ ಮುಂದಿನ ಅವತರಣಿಕೆಯಲ್ಲಿ ಯಾರು ಗೆಲ್ಲಲಿದ್ದಾರೆ ಹಾಗೂ ಯೂರೋಪ್‌ನ ಪ್ರಮುಖ ಪ್ರೀಮಿಯರ್ ಲೀಗ್ ಕೂಟಗಳಲ್ಲಿ ತಂತಮ್ಮ ಮೆಚ್ಚಿನ ತಂಡಗಳು ಯಾವ ಹಂತ ತಲುಪಲಿವೆ ಎಂದೆಲ್ಲಾ ಪ್ರಶ್ನೆಗಳನ್ನು ನೆಟ್ಟಿಗರು ‘Cameron’ (@lawseyitfc) ಮುಂದಿಡತೊಡಗಿದ್ದಾರೆ.