.jpg?2jW1A5Pck5rZweXW0Jsn1.5BhK7MlDEn&size=770:433)
ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಆರೋಗ್ಯ ಕಾರ್ಯಕರ್ತ ಉತಾಹ್ ಆಸ್ಪತ್ರೆಯಲ್ಲಿ ನೃತ್ಯ ಪ್ರದರ್ಶನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಖಗವಸು ಧರಿಸಿದ್ದ ಡ್ಯಾನ್ಸರ್ ಯಾರೆಂಬುದು ಗೊತ್ತಾಗಿಲ್ಲ. ಹೀಗಾಗಿ ನೃತ್ಯ ಮಾಡಿರುವುದು ಯಾರು ಎಂಬುದರ ಪತ್ತೆ ಕಾರ್ಯ ಇದೀಗ ನಡೆಸಲಾಗುತ್ತಿದೆ.
ಆರೋಗ್ಯ ಕಾರ್ಯಕರ್ತನ ನೃತ್ಯದ ವಿಡಿಯೋ ಹಂಚಿಕೊಂಡಿರುವ ಆಸ್ಪತ್ರೆ, “ಉತಾಹ್ ಆಸ್ಪತ್ರೆಯಲ್ಲಿ ಒಂದು ಸಂತೋಷದ ಕ್ಷಣ” ಎಂದು ಶೀರ್ಷಿಕೆ ನೀಡಿದೆ. 1.05 ನಿಮಿಷದ ವೈರಲ್ ವಿಡಿಯೋದಲ್ಲಿ, ನೀಲಿ ಬಣ್ಣದ ಧಿರಿಸು ಧರಿಸಿರುವ ಆಸ್ಪತ್ರೆಯ ನೌಕರ, ಆಕರ್ಷಕ ಬ್ಯಾಲೆ ಪ್ರದರ್ಶನ ಮಾಡುತ್ತಿದ್ದಾರೆ. ಅಲ್ಲೇ ಕುಳಿತಿದ್ದ ವ್ಯಕ್ತಿಯೊಬ್ಬರು ನೃತ್ಯಕ್ಕೆ ಸರಿಯಾಗಿ ಪಿಯಾನೋ ನುಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
BIG NEWS: ಮತ್ತೊಂದು ದಾಖಲೆ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಅನೇಕರು ವ್ಯಕ್ತಿಯ ಗುರುತು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಡ್ಯಾನ್ಸರ್ ಯಾರು ಎಂಬುದನ್ನು ಬಳಕೆದಾರರೊಬ್ಬರು ಕೇಳಿದಾಗ, “ಅವರು ಯಾರೆಂದು ನಮಗೆ ನಿಜವಾಗಿಯೂ ಗೊತ್ತಿಲ್ಲ. ಆದರೆ ಯಾರು ಅಂತಾ ಕಂಡುಹಿಡಿಯಲು ಇಷ್ಟಪಡುತ್ತೇವೆ” ಎಂದು ಆಸ್ಪತ್ರೆ ಹೇಳಿದೆ.