ಅಜ್ಜಿಯರು ನಮ್ಮ ಜೀವನದಲ್ಲಿ ಬಹಳ ಕಡಿಮೆ ಸಮಯದವರೆಗೆ ಇರುವ ಉಡುಗೊರೆಯಾಗಿದ್ದಾರೆ. ಆದರೆ ಅವರು ನಮಗೆ ನೀಡುವ ಕೊಡುಗೆ ಅಪಾರ, ಕಲಿಸುವ ಪಾಠ ಹೇಳತೀರದ್ದಷ್ಟು.
ವ್ಯಕ್ತಿಯೊಬ್ಬರು ತಮ್ಮ 90 ವರ್ಷದ ಅಜ್ಜಿಯ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಆಕೆಯನ್ನು ಅಚ್ಚರಿಗೊಳಿಸಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಅರವಿಂದ್ ಎಂಬ ಟ್ವಿಟ್ಟರ್ ಬಳಕೆದಾರರು ಇದನ್ನು ಶೇರ್ ಮಾಡಿದ್ದಾರೆ. 3 ವರ್ಷಗಳ ಹಿಂದೆ ಅದು ನನ್ನ ಅಜ್ಜಿಯ 90 ನೇ ಹುಟ್ಟುಹಬ್ಬವಾಗಿತ್ತು. ಭಾರತದಿಂದ ಮತ್ತು ಪ್ರಪಂಚದಾದ್ಯಂತದ ಇಡೀ ಕುಟುಂಬವು ಈ ಕಾರ್ಯಕ್ರಮಕ್ಕೆ ಬರಲು ನಿರ್ಧರಿಸಿತು. ನಂತರ ಎಲ್ಲರೂ ಸೇರಿ ಅಜ್ಜಿಗೆ ಸರ್ಪ್ರೈಸ್ ಮಾಡಿದೆವು ಎಂದು ಬರೆದುಕೊಂಡಿದ್ದಾರೆ.
ವೀಡಿಯೊದಲ್ಲಿ, ಅಜ್ಜಿ ಸಂತೋಷದಿಂದ ಇರುವುದನ್ನು ನೋಡಬಹುದು. ಎಲ್ಲ ಸಂಬಂಧಿಕರನ್ನೂ ನೋಡಿದಾಗ ಅವಳ ಮುಖದಲ್ಲಿ ಆಗಿರುವ ಅಚ್ಚರಿಗೆ ಬೆಲೆ ಕಟ್ಟಲಾಗದು. ಸುಂದರವಾದ ಹೃದಯಸ್ಪರ್ಶಿ ಕ್ಷಣಗಳನ್ನು ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.